ಹೊಂಬಾಳೆ ಫಿಲಂಸ್ ನ ಸಂಸ್ಥಾಪಕ ವಿಜಯ್ ಕಿರಗಂದೂರು ನಿಜಕ್ಕೂ ಯಾರು ಗೊತ್ತಾ? ಅಶ್ವಥ್ ನಾರಾಯಣ್ ಸಹೋದರ ನಾ? ಸಾವಿರಾರು ಕೋಟಿ ಹಣ ಇದ್ದರೂ ಇವರು ತುಂಬಾ ಸಿಂಪಲ್.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ದೇಶ ವಿದೇಶಗಳಲ್ಲಿ ತನ್ನ ಹಿರಿಮೆಯನ್ನು ಪ್ರದರ್ಶಿಸುತ್ತಿದೆ ಎಂದರೆ ಅದಕ್ಕೆ ನಿಜವಾದ ಕಾರಣ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಕನ್ನಡ ಸಿನಿಮಾಗಳು ಎಂದರೆ ತಪ್ಪಾಗಲಾರದು. ಹೊಂಬಾಳೆ ಫಿಲಂಸ್ ನ ಸೂತ್ರದಾರನಾಗಿ ಕಾಣಿಸಿಕೊಳ್ಳುವುದು ವಿಜಯ್ ಕಿರಗಂದೂರು. ಇನ್ನು ವಿಜಯ್ ಕಿರಗಂದೂರು ಯಾರು ಅವರ ಹಿನ್ನೆಲೆ ಏನು ಎಂಬುದಾಗಿ ತಿಳಿಯುವ ಕುತೂಹಲ ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನಿಗೆ ಇದೆ.

ಬನ್ನಿ ಇಂದಿನ ಲೇಖನಿಯಲ್ಲಿ ಅವರು ಯಾರು ಎಂಬುದನ್ನು ತಿಳಿದುಕೊಳ್ಳೋಣ. ಮಂಡ್ಯ ಮೂಲದ ಜಮೀನ್ದಾರರು ಅಥವಾ ಪಟೇಲರ ಮನೆತನದವರು ವಿಜಯ್ ಕಿರಗುಂದೂರು ಆಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಅವರಿಗೆ ಹಣದ ಕೊರತೆ ಎನ್ನುವುದು ಇರಲಿಲ್ಲ ಉತ್ತಮ ಅನುಕೂಲಸ್ತ ಕುಟುಂಬದಲ್ಲಿ ಅವರು ಹುಟ್ಟಿ ಬೆಳೆದು ಬಂದವರು. ನಂತರ ಅವರು ಬೆಂಗಳೂರಿಗೆ ಬಂದು ರಿಯಲ್ ಎಸ್ಟೇಟ್ ವ್ಯಾಪಾರವನ್ನು ಮಾಡಲು ಪ್ರಾರಂಭಿಸುತ್ತಾರೆ.

ಹೌದು ಗೆಳೆಯರೇ ಬೆಂಗಳೂರಿನಲ್ಲಿ ಜಾಗಕ್ಕೆ ಚಿನ್ನದ ಬೆಲೆ ಇದ್ದ ಸಂದರ್ಭದಲ್ಲಿ ಬಂದು ಹೊಂಬಾಳೆ ರಿಯಲ್ ಎಸ್ಟೇಟ್ ಹಾಗೂ ಕನ್ಸ್ಟ್ರಕ್ಷನ್ ಎನ್ನುವ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ. ತಮ್ಮ ಉತ್ತಮ ಕ್ವಾಲಿಟಿಯ ಕನ್ಸ್ಟ್ರಕ್ಷನ್ ಕೆಲಸದಿಂದಾಗಿ ಸರ್ಕಾರಿ ಕನ್ಸ್ಟ್ರಕ್ಷನ್ ಗಳನ್ನು ಕೂಡ ಅವರೇ ಮಾಡಿ ಉತ್ತಮವಾಗಿ ಬಿಲ್ಡಿಂಗ್ ನಿರ್ಮಾಣ ಮಾಡುವ ಮೂಲಕ ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರನ್ನು ಕೂಡ ಸಂಪಾದಿಸಿ ಹಣವನ್ನು ಕೂಡ ದೊಡ್ಡ ಮಟ್ಟದಲ್ಲಿ ಸಂಪಾದಿಸುತ್ತಾರೆ. ಇದಾದ ನಂತರ ಅಣ್ಣ ಅವರ ಅಭಿಮಾನಿ ಆಗಿದ್ದ ವಿಜಯ್ ಕಿರಗುಂದೂರು ಚಿತ್ರರಂಗಕ್ಕೆ ಬಂದು ಮೊದಲೆರಡು ಸಿನಿಮಾಗಳಲ್ಲಿ ಸೋತು ನಂತರ ಸಿನಿಮಾ ರಂಗಕ್ಕೆ ರಾಜಕುಮಾರ ಹಾಗೂ ಕೆಜಿಎಫ್ ಸರಣಿಗಳಂತ ಸಿನಿಮಾ ನೀಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ.

ಇನ್ನು ಇವರು ರಾಜಕಾರಣಿ ಹಾಗೂ ಸಚಿವ ಆಗಿರುವ ಅಶ್ವಥ್ ನಾರಾಯಣ್ ಅವರ ದೂರದ ಸಂಬಂಧಿಯಾಗಿದ್ದಾರೆ. ಈಗಾಗಲೇ ಬಹುತೇಕ ಎಲ್ಲಾ ಭಾಷೆಗಳಲ್ಲಿ ಪ್ರಮುಖ ಸಿನಿಮಾಗಳ ನಿರ್ಮಾಣವನ್ನು ಹೊಂಬಾಳೆ ಫಿಲಂಸ್ ಮಾಡುತ್ತಿದೆ. ಒಟ್ಟಾರೆಯಾಗಿ ಉತ್ತಮ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಕೂಡ ಒಳ್ಳೆ ಕ್ವಾಲಿಟಿಯ ಸಿನಿಮಾಗಳನ್ನು ನೀಡುವ ಗುರಿಯನ್ನು ಹೊಂಬಾಳೆ ಫಿಲಂಸ್ ಹೊಂದಿದೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!