ಮಾತು ಬಾರದ, ಕಿವಿ ಕೇಳದ ಹುಡುಗಿಯೊಂದಿಗೆ ಮದುವೆ ಆಗಿರುವ ನಟ ವಿಶಾಲ್ ಈ ಹುಡುಗಿಯನ್ನು ಒಪ್ಪಿದ್ದೇಕೆ ?

ಮಾತು ಬಾರದ, ಕಿವಿಯೂ ಕೇಳದ ಹುಡುಗಿಯನ್ನು ಒಪ್ಪಿ ಮದುವೆಯಾಗುವವರು ತುಂಬಾನೇ ವಿರಳ. ಸಿನಿಮಾಗಳಲ್ಲಿ, ನಾಟಕಗಳಲ್ಲಿ ಈ ರೀತಿಯ ಮದುವೆ ನಡೆದಿರಬಹುದು. ಭಾವನಾತ್ಮಕವಾಗಿ ವೀಕ್ಷಕರನ್ನು ಸೆಳೆದು ಆದರ್ಶವಾಗುವಂತಹ ದೃಶ್ಯಗಳನ್ನು ಪರದೆಯ ಮೇಲೆ ತೋರಿಸುವಾಗ ನಟರು ಈ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದುಂಟು.

ನಿಜ ಜೀವನದಲ್ಲಿ ಇಂತಹ ಪಾಪದ ಹುಡುಗಿಯರನ್ನು ವಿವಾಹವಾಗಿ ಬಾಳು ನೀಡುವ ಒಳ್ಳೆಯ ಗುಣವನ್ನು ಹೊಂದಿರುವವರು ಕಾಣ ಸಿಗುವುದು ಕಷ್ಟ. ಅಂತಹದರಲ್ಲಿ ಚಿತ್ರರಂಗದ ಜನಪ್ರಿಯ ನಟ ವಿಶಾಲ್ ಮಾತು ಬಾರದ, ಕಿವಿ ಕೇಳದ ಹುಡುಗಿಯ ಕೈಹಿಡಿದು ಬಾಳು ನೀಡುತ್ತಿದ್ದಾರಂತೆ. ವಿಶಾಲ ಎಂಬ ಹೆಸರಿಗೆ ತಕ್ಕಂತೆ ವಿಶಾಲವಾದ ಮನಸ್ಸನ್ನು ಹೊಂದಿರುವ ಇವರು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಸ್ವಂತಿಕೆಯಿಂದಲೆ ಸಿನಿಮಾರಂಗದಲ್ಲಿ ಕಾಲಿಟ್ಟು, ಯಶಸ್ಸಿನೊಂದಿಗೆ ಅಭಿಮಾನಿಗಳನ್ನು ಗಳಿಸಿದ ಹೆಗ್ಗಳಿಕೆ ಇವರದ್ದು.

ಚಿಕ್ಕ ವಯಸ್ಸಿನಲ್ಲಿಯೇ ತಮಿಳು ಚಿತ್ರರಂಗದಲ್ಲಿ ನಿರ್ಮಾಪಕ ಸಂಘದ ಅಧ್ಯಕ್ಷರಾಗಿ,ಉದ್ಯಮದ ಪರ ಯೋಚಿಸಿ ನವ ಯೋಜನೆಗಳನ್ನು ತಂದು ಶ್ರಮೆಪಡುತ್ತಿದ್ದಾರೆ. ವಿಶಾಲ್ ಅವರು ಕೇವಲ ಸಿನಿಮಾದಲ್ಲಿ ಮಾತ್ರ ನಾಯಕರಲ್ಲ. ನಿಜ ಜೀವನದಲ್ಲಿಯೂ ಒಳ್ಳೆಯ ಗುಣಗಳನ್ನು ಹೊಂದಿದ ನಾಯಕರೇ; ಏಕೆಂದರೆ ಬಡ ಕುಟುಂಬದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತಮ್ಮ ಹಣದಲ್ಲಿ ಪಾಲನ್ನು ನೀಡುತ್ತಾ ಬಂದಿದ್ದಾರೆ. ಕರ್ನಾಟಕದ ಮುತ್ತು, ಪುನೀತ್ ರಾಜ್ ಕುಮಾರ್ ಅವರ ಸ್ನೇಹಿತರಾದ ವಿಶಾಲ್ ಅವರಂತೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದೀಗ ವಿವಾಹದ ವಿಚಾರವಾಗಿಯೂ ಆದರ್ಶವನ್ನು ಮೆರೆದಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದ ನಟಿ ಅಭಿನಯ ಅವರನ್ನು ವಿವಾಹವಾಗಲಿದ್ದಾರಂತೆ. ಅಭಿನಯ ಅವರು ಕನ್ನಡದ ‘ಹುಡುಗರು’ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ತಂಗಿಯಾಗಿ ಅಭಿನಯಿಸಿದ್ದು, ಶ್ರೀ ನಗರದ ಕಿಟ್ಟಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇವರ ಅಭಿನಯವು ಪ್ರೇಕ್ಷಕರಿಗೆ ಹಿಡಿಸಿತ್ತು. ಇದೀಗ ವಿಶಾಲ ಅವರು ಅಭಿನಯ ಅವರನ್ನೇ ವಿವಾಹವಾಗಲಿದ್ದಾರಂತೆ. ಇದರಲ್ಲೇನಿದೆ ವಿಶೇಷ ಎಂದು ಕೇಳುವುದಾದರೆ, ಅಭಿನಯ ಅವರಿಗೆ ಮಾತು ಬರುವುದಿಲ್ಲ; ಅಲ್ಲದೇ ಕಿವಿಯು ಅಷ್ಟಾಗಿ ಕೇಳುವುದಿಲ್ಲವಂತೆ.

Leave a Comment

error: Content is protected !!