Thalapathy Vijay: ಅಭಿಮಾನಿಯನ್ನೆ ಮದೆಯಾದ ನಟ ವಿಜಯ್ ಲವ್ ಮ್ಯಾರೇಜ್ ಹೇಗಿತ್ತು ಗೊತ್ತಾ?

Thalapathy Vijay ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವಂತಹ ತಲಪತಿ ವಿಜಯ್(Thalapathy Vijay) ಅವರು ಸಾಕಷ್ಟು ಸಿನಿಮಾಗಳು ಇಂದ ತಮಿಳು ಚಿತ್ರರಂಗದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು ಭರ್ಜರಿ 66 ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ರಜಿನಿಕಾಂತ್(Rajinikanth) ಅವರ ನಂತರ ತಮಿಳು ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ನಟ ಎಂದರೆ ತಪ್ಪಾಗಲಾರದು.

ಇವರ ಸಿನಿಮಾ ಜೀವನದ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ ಆದರೆ ಅವರ ವೈಯಕ್ತಿಕ ಜೀವನದ ಕುರಿತಂತೆ ಕೆಲವೇ ಕೆಲವು ಮಂದಿಗೆ ಮಾತ್ರ ತಿಳಿದಿರುವುದು. ಇದು ನಾವು ಮಾತನಾಡಲು ಹೊರಟಿರುವುದು ಅವರ ಪತ್ನಿ ಬಗ್ಗೆ. ತಮ್ಮ ಸ್ವಂತ ಅಭಿಮಾನಿಯನ್ನೇ ವಿಜಯ್(Actor Vijay) ಅವರು ಮದುವೆಯಾಗಿ ಎಲ್ಲರಿಗೂ ಮಾದರಿಯಾಗಿರುವುದು. ಬನ್ನಿ ಈ ಲವ್ ಸ್ಟೋರಿ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಹೌದು ಮಿತ್ರರೇ, ವಿದೇಶದಲ್ಲಿದ್ದ ಸಂಗೀತ ಸ್ವರ್ಣ ಲಿಂಗಂ(Sangeetha Sornalingam) ಅಂದಿನ ಕಾಲದಲ್ಲಿ ವಿಜಯ್ ಅವರ ದೊಡ್ಡ ಅಭಿಮಾನಿ ಆಗಿದ್ದರೂ ಹಾಗೂ ಪ್ರತಿಯೊಂದು ಸಿನಿಮಾ ಚಿತ್ರೀಕರಣಕ್ಕೂ ಕೂಡ ಹಾಜರಾಗಿ ವಿಜಯ್ ಅವರನ್ನು ಗಮನಿಸುತ್ತಿದ್ದರು. ಸಾಕಷ್ಟು ದಿನಗಳ ನಂತರ ವಿಜಯ್ ಅವರಿಗೆ ಸಂಗೀತ ಅವರ ಬಗ್ಗೆ ತಿಳಿದು ಬರುತ್ತದೆ ಹಾಗೂ ಇಬ್ಬರು ಕೂಡ ಪರಸ್ಪರ ಭೇಟಿಯಾಗಿ ಅವರಿಬ್ಬರ ನಡುವೆ ಸ್ನೇಹ ನಂತರ ಸ್ನೇಹಕ್ಕಿಂತಲೂ ಮಿಗಿಲಾದ ಸಂಬಂಧ ಏರ್ಪಡುತ್ತದೆ.

ನಂತರ ಇದು ಹೀಗೆ ನಡೆದು ಕೊನೆಗೂ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಇಬ್ಬರು ಕೂಡ ಪ್ರೀತಿಸಿ ಮದುವೆಯಾಗುತ್ತಾರೆ. ಸಂಗೀತ ಕೂಡ ಶ್ರೀಲಂಕಾದ ದೊಡ್ಡ ಉದ್ಯಮಿಯ ಮಗಳಾಗಿರುತ್ತಾರೆ. ಇಂದಿಗೂ ಕೂಡ ಕಳಂಕ ರಹಿತ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ ವಿಜಯ್(Vijay) ದಂಪತಿಗಳು. ನಟ ವಿಜಯ್ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!