Jaggesh: ನಟ ಜಗ್ಗೇಶ್ ಹಳ್ಳಿಗೆ ಹೋದಾಗ ಹೇಗಿರ್ತಾರೆ ನೋಡಿದ್ರೆ ನಿಜಕ್ಕೂ ಬೆರಗಾಗ್ತೀರಾ!

Jaggesh ಕನ್ನಡ ಚಿತ್ರರಂಗದಲ್ಲಿ ಮೊದಲಿಗೆ ಖಳನಾಯಕನಾಗಿ ಪರಿಚಿತರಾಗಿ ನಂತರ ಕಾಮಿಡಿ ಕಲಾವಿದನಾಗಿ ಕೂಡ ಕಾಣಿಸಿಕೊಂಡು ಅದಾದ ನಂತರ ತಮ್ಮ ನಿಜವಾದ ಪ್ರತಿಭೆಯನ್ನು ಪರಿಚಯಿಸುವ ಮೂಲಕ ಕನ್ನಡ ಚಿತ್ರರಂಗದ ನೆಚ್ಚಿನ ನವರಸ ನಾಯಕನಾಗಿ ಕಾಣಿಸಿಕೊಂಡವರು ಜಗ್ಗೇಶ್(Jaggesh) ರವರು.

ನಟ ಜಗ್ಗೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದು ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಹುತೇಕ ಎಲ್ಲಾ ಹಾಸ್ಯ ಪ್ರಧಾನ ಪಾತ್ರಗಳಿಂದಲೇ ಕನ್ನಡಿಗರ ಮನವನ್ನು ಗೆದ್ದಿರುವಂತಹ ಜಗ್ಗೇಶ್(Jaggesh) ರವರು ಇದುವರೆಗೂ ಕೂಡ ಬೇರೆ ಭಾಷೆಗಳಲ್ಲಿ ನಟಿಸುವುದಕ್ಕೆ ಹೋಗಿಲ್ಲ. ಇದನ್ನು ಪ್ರತಿಯೊಬ್ಬರು ಕನ್ನಡಿಗರು ಕೂಡ ಹೆಮ್ಮೆಯಿಂದ ಮೆಚ್ಚಿ ಕೊಳ್ಳಬೇಕು.

ಇನ್ನು ನಟ ಜಗ್ಗೇಶ್ ರವರು ಬೆಂಗಳೂರಿನಲ್ಲಿ ಇದ್ದಾಗ ಒಬ್ಬ ರಾಜಕಾರಣಿಯಾಗಿ ಒಬ್ಬ ಸ್ಟಾರ್ ನಟನಾಗಿ ಜೀವನವನ್ನು ನಡೆಸಬಹುದು ಆದರೆ ತಮ್ಮ ಹಳ್ಳಿಗೆ ಹೋದಾಗ ಹೇಗಿರುತ್ತಾರೆ ಎನ್ನುವ ಕುತೂಹಲ ಪ್ರತಿಯೊಬ್ಬರಿಗೂ ಕೂಡ ಇರುತ್ತದೆ. ಯಾಕೆಂದರೆ ನಟ ಜಗ್ಗೇಶ್(Jaggesh) ರವರು ತುಮಕೂರಿನ ಜಡೆ ಮಾಯ್ಸಂದ್ರ ಎನ್ನುವ ಚಿಕ್ಕ ಹಳ್ಳಿಯಿಂದ ಬಂದವರು.

ನಟ ಜಗ್ಗೇಶ್ ರವರು ತಮ್ಮ ಹಳ್ಳಿಗೆ ಹೋದಾಗ ಪ್ರಕೃತಿಯ ಮಡಿಲಿನಲ್ಲಿ ಒಬ್ಬ ರೈತಪಿ ಕುಟುಂಬದ ವ್ಯಕ್ತಿ ಹೇಗಿರುತ್ತಾರೋ ಅದೇ ರೀತಿಯಲ್ಲಿ ಕಾಲ ಕಳೆಯುತ್ತಾರೆ ಎಂಬುದು ತಿಳಿದು ಬರುತ್ತದೆ. ಅದಕ್ಕೆ ಉದಾಹರಣೆ ಎನ್ನುವಂತೆ ಹಲವಾರು ಫೋಟೋಗಳನ್ನು ಕೂಡ ನೀವು ನೋಡಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!