ಜನವರಿ ತಿಂಗಳ ಟಾಪ್ 5 ಕನ್ನಡ ಸ್ಟಾರ್ ನಟರು ಯಾರು ಗೊತ್ತಾ?

Kannada Actors ಆರ್ಮ್ಯಾಕ್ಸ್ ಮೀಡಿಯಾ(Ormax Media ( ಎನ್ನುವಂತಹ ಪ್ರತಿಷ್ಠಿತ ಸಂಸ್ಥೆ ಪ್ರತಿ ತಿಂಗಳು ಹಾಗೂ ಪ್ರತಿಯೊಂದು ವರ್ಷವೂ ಕೂಡ ಪ್ರತಿಯೊಂದು ಸಿನಿಮಾ ಕುರಿತಂತೆ ಇರುವಂತಹ ವಿಚಾರದ ಬಗ್ಗೆ ಇರುವಂತಹ ಅಂಕಿ ಅಂಶಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಈಗ ದೇಶದಾದ್ಯಂತ ಜನವರಿ ತಿಂಗಳಲ್ಲಿ ಅತ್ಯಂತ ಜನಪ್ರಿಯ ರಾಗಿರುವ ಕನ್ನಡದ ಟಾಪ್ 5 ಸ್ಟಾರ್ ಗಳ ಪಟ್ಟಿಯನ್ನು ಕೂಡ ಈಗ ಬಿಡುಗಡೆ ಮಾಡಿದ್ದಾರೆ. ಯಾರೆಲ್ಲಾ ಈ ಸಾಲಿನಲ್ಲಿ ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಐದನೇ ಸ್ಥಾನದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshit Shetty) ಅವರು ಕಾಣಿಸಿಕೊಳ್ಳುತ್ತಿದ್ದು ಸದ್ಯಕ್ಕೆ ಅವರ ನಟನೆಯಲ್ಲಿ ಮೂಡಿ ಬರುತ್ತಿರುವಂತಹ ಸಪ್ತಸಾಗರದಾಚೆ ಹಾಗೂ ರಿಚರ್ಡ್ ಆಂಟನಿ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಅಭಿಮಾನಿಗಳಲ್ಲಿ ಹಾಗೂ ಕನ್ನಡ ಪ್ರೇಕ್ಷಕರಲ್ಲಿ ಇವೆ. ನಾಲ್ಕನೇ ಸ್ಥಾನದಲ್ಲಿ ರಿಷಬ್ ಶೆಟ್ಟಿ(Rishab Shetty) ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯದ ಮಟ್ಟಿಗೆ ಕಾಂತಾರ ಸಿನಿಮಾದ ಯಶಸ್ಸಿನ ನಂತರ ದೇಶಾದ್ಯಂತ ಅವರ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ.

ಮೂರನೇ ಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಕಾಣಿಸಿಕೊಳ್ಳುತ್ತಿದ್ದು ಇವರು ಜನಪ್ರಿಯರಾಗಿರಲು ಹಲವಾರು ಕಾರಣಗಳಿದ್ದು ಮೊದಲನೇದಾಗಿ ಕ್ರಾಂತಿ ಸಿನಿಮಾದ ಬಿಡುಗಡೆ ಹಾಗೂ ಯಶಸ್ಸು ಆಗಿದ್ದರೆ, ಇನ್ನೊಂದು ಕಡೆ ಸಾಕಷ್ಟು ವಿವಾದಗಳಲ್ಲಿ ದರ್ಶನ್ ರವರು ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ಕೂಡ ಆಗಿದೆ ಎಂದು ಹೇಳಬಹುದಾಗಿದೆ. ಇನ್ನು ಎರಡನೇ ಸ್ಥಾನದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಕಾಣಿಸಿಕೊಳ್ಳುತ್ತಿದ್ದು ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತಂತೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.

ಮೊದಲ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್(Yash) ರವರು ಕಾಣಿಸಿಕೊಳ್ಳುತ್ತಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಂತರ ಯಶ್ ಅವರು ಯಾವ ಸಿನಿಮಾದಲ್ಲಿ ಯಾರ ಜೊತೆಗೆ ಕಾಣಿಸಿಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿ ಇಡೀ ಭಾರತೀಯ ಚಿತ್ರರಂಗದ ಸಿನಿಮಾ ರಸಿಕರು ಇದ್ದಾರೆ. ಇವರೇ ಗೆಳೆಯರೇ ನಮ್ಮ ಭಾರತ ಚಿತ್ರರಂಗದಲ್ಲಿ ಈ ಜನವರಿ ತಿಂಗಳಿನಲ್ಲಿ ಜನಪ್ರಿಯ ರಾಗಿರುವಂತಹ ಕನ್ನಡದ ಟಾಪ್ 5 ಸ್ಟಾರ್ ನಟರು.

Leave a Comment

error: Content is protected !!