ಹರಿಪ್ರಿಯಾ ಕೈಹಿಡಿಯಲು ಸಿದ್ದರಾದ ವಶಿಷ್ಟ ಸಿಂಹ. ಒಂದಾಗಲಿರುವ ಈ ಜೋಡಿ ಹಕ್ಕಿಗಳ ಲವ್ ಸ್ಟೋರಿ ಶುರು ಆಗಿದ್ದು ಹೇಗೆ

ಹರಿಪ್ರಿಯಾ ಕನ್ನಡ ಚಿತ್ರರಂಗದ ಫೇಮಸ್ ನಟಿ. ಅಕ್ಟೋಬರ್ 29 1991ರಲ್ಲಿ, ಚಿಕ್ಕಬಳ್ಳಾಪುರದಲ್ಲಿ ಜನಿಸಿದ ಇವರಿಗೆ ಚಿಕ್ಕಂದಿನಿಂದಲೂ ಭರತನಾಟ್ಯವೆಂದರೆ ಅಚ್ಚುಮೆಚ್ಚು. ಹರಿಪ್ರಿಯಾ ಅವರಿಗೆ ಇದೀಗ 31 ವರ್ಷ.ಕುಟುಂಬದವರು ಬೆಂಗಳೂರಿಗೆ ಶಿಫ್ಟ್ ಆದ ನಂತರ ತಮ್ಮ ಓದನ್ನು ಮುಗಿಸಿ ಚಿತ್ರರಂಗಕ್ಕೆ ಕಾಲಿಟ್ಟ ಇವರು ರಿಕ್ಕಿ, ಉಗ್ರಂ, ಬೆಲ್ ಬಾಟಮ್, ನೀರ್ ದೋಸೆ, ಅಂಜನಿಪುತ್ರ, ಭರ್ಜರಿ, ರಣತಂತ್ರ, ಎಲ್ಲಿದ್ದೆ ಇಲ್ಲಿ ತನಕ, ಕುರುಕ್ಷೇತ್ರ, ಲೈಫ್ ಜೊತೆ ಒಂದ್ ಸೆಲ್ಫಿ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ.

ಸುಂದರವಾದ ಕಣ್ಣೋಟ ಮತ್ತು ಹೂ ನಗೆಯಿಂದಲೇ ಎಲ್ಲರನ್ನು ಆಕರ್ಷಿಸುವ ಹರಿಪ್ರಿಯಾ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿತ್ತು. ಅಲ್ಲದೆ ಹರಿಪ್ರಿಯಾ ಮತ್ತು ವಸಿಷ್ಟ ಸಿಂಹ ಇಬ್ಬರು ಜೊತೆಯಾಗಿ ಕಾಣಿಸಿಕೊಂಡ ಫೋಟೋಗಳು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಕನ್ನಡದ ಖ್ಯಾತ ನಟ, ಕಂಚಿನ ಕಂಠದ ವಸಿಷ್ಠ ಸಿಂಹ ಅವರೊಂದಿಗೆ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡಿದೆ.

Vasishta simha and haripriya marraige
Vasishta simha and haripriya marraige

ಇದಕ್ಕೆ ಪುಷ್ಟಿ ನೀಡುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚಿಗಷ್ಟೇ ಹರಿಪ್ರಿಯ ಅವರು ಮೂಗುತಿಯನ್ನು ಧರಿಸಲು ತಮ್ಮ ಮೂಗನ್ನು ಚುಚ್ಚಿಸಿಕೊಂಡಿದ್ದು, ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೂಗನ್ನು ಚುಚ್ಚುವಾಗ ಹರಿಪ್ರಿಯಾ ಅವರೊಂದಿಗಿರುವುದು ನಟ ವಸಿಷ್ಠ ಸಿಂಹ. ಮದುವೆಗೂ ಮುನ್ನ ಮೂಗು ಚುಚ್ಚಿಸಿಕೊಳ್ಳುವುದು ಕೆಲ ಮನೆತನಗಳು ಆಚರಿಸಿಕೊಂಡು ಬಂದ ಪದ್ಧತಿ, ಅದರಂತೆಯೇ ಹರಿಪ್ರಿಯಾ ಅವರು ಕೂಡ ಮದುವೆಯ ಸಿದ್ಧತೆಗಾಗಿ ಮೂಗುತಿಯನ್ನು ಧರಿಸಿದ್ದಾರೆ ಎನ್ನಲಾಗುತ್ತಿದೆ.

ಹರಿಪ್ರಿಯಾ ಹಾಗೂ ವಸಿಷ್ಟ ಸಿಂಹ ಇಬ್ಬರೂ ಕೂಡ ನೃತ್ಯದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದು ಹೊಸ ಹೊಸ ಹಾಡಿಗೆ ಆಗಾಗ ತಮ್ಮ ಡಾನ್ಸ್ ನ ವಿಡಿಯೋವನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇಬ್ಬರು ಜೊತೆಯಾಗಿ ಕುಣಿದ ವಿಡಿಯೋ ಒಂದರ ಕೆಳಗೆ ಹರಿಪ್ರಿಯಾ ಅವರು ‘ಮೈ ಫೇವರೆಟ್ ಪಾರ್ಟ್ನರ್’ ಎಂದು ಬರೆದುಕೊಂಡಿದ್ದು ಅಭಿಮಾನಿಗಳ ಸಂದೇಹ ನಿಜವಾಗಿದೆ.

ಇದೀಗ ತಿಳಿದು ಬಂದ ಹಾಗೆ ಹರಿಪ್ರಿಯಾ ಅವರು ವಸಿಷ್ಟ ಸಿಂಹ ಅವರನ್ನು ವಿವಾಹವಾಗುವುದು ಖಚಿತವಾಗಿದೆ. ಆದರೆ ಈ ಬಗ್ಗೆ ವಧು ವರರಿಂದ ಯಾವುದೇ ಮಾಹಿತಿ ದೊರಕಿಲ್ಲ. ಬರುವ ತಿಂಗಳು ಎರಡು ಕುಟುಂಬಗಳು ಸೇರಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದು ಹೊಸ ವರ್ಷದಲ್ಲಿ ಹರಿಪ್ರಿಯಾ ಮತ್ತು ವಸಿಷ್ಟ ಸಿಂಹ ಮದುವೆಯಾಗಿ ನವ ಜೀವನಕ್ಕೆ ಕಾಲಿಡಲಿದ್ದಾರೆ. ಇದಾಗಲೇ ನಿಶ್ಚಿತಾರ್ಥದ ಸಲುವಾಗಿ ಭರ್ಜರಿ ಸಿದ್ಧತೆಗಳು ನಡೆದಿದೆಯಂತೆ. ಈ ಜೋಡಿ ಹಕ್ಕಿಗಳ ಫೋಟೋ ಹಾಗೂ ವಿಡಿಯೋಗಳನ್ನು ವೀಕ್ಷಿಸಿದ ಬಳಿಕ ಅಭಿಮಾನಿಗಳು ‘ನಿಮ್ಮ ವಿವಾಹ ಕಾರ್ಯವು ವಿಘ್ನವಿಲ್ಲದೆ ನೆರವೇರಲಿ’ ಎಂದು ಶುಭ ಹಾರೈಸಿದ್ದಾರಂತೆ.

Leave a Comment

error: Content is protected !!