Vasishta Simha: ಹರಿಪ್ರಿಯಾ ಗಾಗಿ ವಸಿಷ್ಠ ಏನೆಲ್ಲ ಮಾಡುತ್ತಿದ್ದರು ಗೊತ್ತಾ? ಇಂತಹ ಲವರ್ ಸಿಗುವುದಕ್ಕೆ ಪುಣ್ಯ ಮಾಡಿರಬೇಕು.

Vasishta Simha ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ(Hariprriya) ಇಬ್ಬರು ಕೂಡ ಸೈಲೆಂಟ್ ಆಗಿಯೇ ಇದೇ ಜನವರಿ 26ರಂದು ಮದುವೆ ಆಗಿರುವ ವಿಚಾರ ನಿಮಗಲ್ಲರಿಗೂ ತಿಳಿದಿದ್ದು ಇವರಿಬ್ಬರು ಚಿತ್ರರಂಗದ ಹಲವಾರು ಕಲಾವಿದರ ಸಮ್ಮುಖದಲ್ಲಿ ಸರಳವಾಗಿಯೇ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇವರಿಬ್ಬರ ಲವ್ ಸ್ಟೋರಿ ಹೇಗಾಯಿತು ಎನ್ನುವಂತಹ ಚಿಕ್ಕ ಸುಳಿವು ಕೂಡ ಕನ್ನಡ ಚಿತ್ರರಂಗದ ಯಾರೊಬ್ಬರಿಗೂ ಕೂಡ ಇವರಿಬ್ಬರು ಎಂಗೇಜ್ಮೆಂಟ್ ಆಗುವ ತನಕ ಕೂಡ ಇರಲಿಲ್ಲ ಎಂದರೆ ಯಾವ ರೀತಿಯಲ್ಲಿ ಇವರಿಬ್ಬರು ಸೈಲೆಂಟಾಗಿ ಪ್ರೇಮಿಸಿಕೊಂಡು ಬಂದಿದ್ದಾರೆ ಎಂಬುದನ್ನು ನೀವು ಅರ್ಥೈಸಿಕೊಳ್ಳಬಹುದಾಗಿದೆ.

ಇವರಿಬ್ಬರೂ ಮದುವೆಯಾಗುವುದಕ್ಕೂ ಮುನ್ನ ಯದ ಯದಾಹಿ ಸಿನಿಮಾದ ಚಿತ್ರೀಕರಣದಲ್ಲಿ ಇವರಿಬ್ಬರು ಒಟ್ಟಿಗೆ ಭಾಗವಹಿಸಿದ್ದರು ಯಾಕೆಂದರೆ ಇಬ್ಬರೂ ಕೂಡ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇವರಿಬ್ಬರ ಜೊತೆಗೆ ದಿಗಂತ್ ಮಂಚಾಲೆ(Digantha Manchale) ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹರಿಪ್ರಿಯಾ(Hariprriya) ಅವರನ್ನು ವಶಿಷ್ಠ ಎಷ್ಟು ಪ್ರೀತಿಸುತ್ತಿದ್ದರು ಎಂಬುದಾಗಿ ಅರ್ಥೈಸಿಕೊಳ್ಳಬಹುದಾಗಿದೆ.

ಹೌದು ಮಿತ್ರರೇ ತಮ್ಮ ಭಾಗದ ಚಿತ್ರೀಕರಣ ಮುಗಿದಿದ್ದರೂ ಕೂಡ ಕೇವಲ ಹರಿಪ್ರಿಯವರನ್ನು ನೋಡಬೇಕು ಎನ್ನುವ ಕಾರಣಕ್ಕಾಗಿ ಚಿತ್ರೀಕರಣದ ಸ್ಥಳಕ್ಕೆ ವಸಿಷ್ಠ(Vasishta) ಅವರು ಆಗಾಗ ಹೋಗುತ್ತಿದ್ದರಂತೆ. ಇದು ವಶಿಷ್ಠ ಹರಿಪ್ರಿಯಾ ಅವರನ್ನು ಎಷ್ಟು ಪ್ರೀತಿಸುತ್ತಿದ್ದರೂ ಎನ್ನುವುದಕ್ಕೆ ಸಾಕ್ಷಿಯಾಗಿದೆ‌

Leave a Comment

error: Content is protected !!