Vijay Deverakonda: ತನ್ನ ಬರ್ತಡೇ ದಿನ ವಿಜಯ್ ದೇವರಕೊಂಡ ಮಾಡಿದ್ದೇನು ನೋಡಿ!

Vijay Deverakonda ತೆಲುಗು ಚಿತ್ರರಂಗದಲ್ಲಿ ಯಾರದ್ದೇ ಸಹಾಯ ಅಥವಾ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ದೊಡ್ಡ ಮಟ್ಟದ ಸ್ಟಾರ್ ಆಗಿ ನಿಂತಿರುವ ವಿಜಯ್ ದೇವರಕೊಂಡ(Vijay Deverakonda) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗದ ಯೂತ್ ಐಕಾನ್ ಗಳ ಲಿಸ್ಟ್ ನಲ್ಲಿ ಕೂಡ ವಿಜಯ್ ದೇವರಕೊಂಡ ಕಾಣಿಸಿಕೊಳ್ಳುತ್ತಾರೆ.

ಇನ್ನು ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ನಾಯಕನಟನಾಗಿ ಕಾಣಿಸಿಕೊಂಡಿದ್ದ ಲೈಗರ್ ಸಿನಿಮಾ ಬಿಡುಗಡೆಯಾಗಿ ಅಟ್ಟರ್ ಫ್ಲಾಫ್ ಆಗಿದ್ದು ನಿಮಗೆಲ್ಲರಿಗೂ ಗೊತ್ತಿದೆ. ಸದ್ಯಕ್ಕೆ ಅವರ ಹಾಗೂ ಸಮಂತಾ(Samantha) ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಖುಷಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಈ ಸಿನಿಮಾದ ಮೇಲೆ ಕೂಡ ಸಾಕಷ್ಟು ನಿರೀಕ್ಷೆಗಳಿವೆ.

ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಇಂದು ವಿಜಯ್ ದೇವರಕೊಂಡ ಅವರ ಬರ್ತಡೆ ಯಾಗಿದೆ. ಬರ್ತಡೆಯ ದಿನದಂದು ಅವರು ದೂರದ ದೇಶದಲ್ಲಿ ಚಿತ್ರಿಕರಣದಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆಗೆ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕಾಗಿ ವಿಶೇಷವಾದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಹೌದು ತಮ್ಮ ಬರ್ತಡೆಯ ಸೆಲೆಬ್ರೇಶನ್ ಗಾಗಿ ಹೈದರಾಬಾದ್ ವೈಜಾಗ್ ಚೆನ್ನೈ, ಬೆಂಗಳೂರು ಮುಂಬೈ ಪುಣೆ ಡೆಲ್ಲಿ ನಲ್ಲಿ ದೇವರಕೊಂಡ ಬರ್ತಡೇ ಟ್ರಕ್ ಅನ್ನು ಎಲ್ಲಾ ಕಡೆ ಹೋಗುವಂತೆ ಮಾಡಿ ಅದರಲ್ಲಿ ಇರುವಂತಹ ಐಸ್ ಕ್ರೀಮ್ ಅನ್ನು ಎಲ್ಲರಿಗೂ ಉಚಿತವಾಗಿ ಹಂಚುವ ವಿಶೇಷವಾದ ಯೋಜನೆಯನ್ನು ವಿಜಯ್ ದೇವರಕೊಂಡ ಮಾಡಿದ್ದಾರೆ. ವಿಜಯ್ ದೇವರಕೊಂಡ ಅವರ ಈ ವಿಶೇಷವಾದ ಗುಣದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!