KL Rahul: ಕೆಎಲ್ ರಾಹುಲ್ ಬಗ್ಗೆ ದೊಡ್ಡ ನಿರ್ಧಾರವನ್ನು ಪ್ರಕಟಿಸಿದ ಮಾವ ಸುನೀಲ್ ಶೆಟ್ಟಿ!

Suniel Shetty ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡಿಗ ಕೆ ಎಲ್ ರಾಹುಲ್(KL Rahul) ಅವರು ಈ ಬಾರಿ ಐಪಿಎಲ್ ನಲ್ಲಿ ಲಕ್ನೋ ತಂಡದ ಪರವಾಗಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್ ನಲ್ಲಿ ಇಂ’ ಜುರಿ ಆಗಿ ಹೊರ ಹೋಗಿದ್ದು ನಿಮಗೆಲ್ಲರಿಗೂ ತಿಳಿದಿದೆ.

ಪಂದ್ಯ ಮುಗಿದ ನಂತರ ಕೆಎಲ್ ರಾಹುಲ್ ಅವರಿಗೆ ತೊಡೆಯ ಎಂಜುರಿ ಆಗಿದೆ ಎಂಬುದಾಗಿ ತಿಳಿದು ಬಂದಿದ್ದು ಈ ಬಾರಿ ಪೂರ್ಣವಾಗಿ ಐಪಿಎಲ್(IPL) ನಿಂದಲೇ ಹೊರ ಹೋಗಿದ್ದಾರೆ ಎಂಬುದು ಕೂಡ ನಿಮಗೆಲ್ಲರಿಗೂ ಅಧಿಕೃತವಾಗಿ ತಿಳಿದಿರುವಂತಹ ವಿಚಾರವಾಗಿದೆ. ಈಗ ಅವರ ಆರೋಗ್ಯದ ಕುರಿತಂತೆ ಮತ್ತೊಂದು ಅಧಿಕೃತ ಅಪ್ಡೇಟ್ ಕೂಡ ಸಿಕ್ಕಿದೆ.

ಈಗಾಗಲೇ ಇಂಜುರಿಯ ಕಾರಣದಿಂದಾಗಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ತಂಡದಿಂದಲೂ ಕೂಡ ಕೆಎಲ್ ರಾಹುಲ್ ಅವರು ಹೊರ ಹೋಗಿದ್ದಾರೆ. ಇನ್ನು ಅವರು ಯಾವ ರೀತಿಯ ಚಿಕಿತ್ಸೆಯನ್ನು ಪಡೆದುಕೊಳ್ಳಲಿದ್ದಾರೆ ಎನ್ನುವ ಕುರಿತಂತೆ ಅವರ ಮಾವ ಹಾಗೂ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಸುನಿಲ್ ಶೆಟ್ಟಿ(Sunil Shetty) ಅವರು ಅಧಿಕೃತವಾಗಿ ಮಾಹಿತಿಯನ್ನು ನೀಡಿದ್ದಾರೆ.

ನಟ ಸುನೀಲ್ ಶೆಟ್ಟಿ(Suniel Shetty) ಅವರು ಹೇಳಿರುವ ಪ್ರಕಾರ ಕೆಎಲ್ ರಾಹುಲ್ ಅವರು ಶೀಘ್ರದಲ್ಲಿ ಸರ್ಜರಿಗೆ ಒಳಗಾಗಲಿದ್ದು ಕೆಲವು ಸಮಯಗಳ ವಿಶ್ರಾಂತಿಯನ್ನು ಕೂಡ ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಈ ವಿದ್ಯಮಾನಗಳನ್ನು ನೋಡುತ್ತಿದ್ದರೆ ಖಂಡಿತವಾಗಿ ಕೆ ಎಲ್ ರಾಹುಲ್(KL Rahul) ರವರು ವರ್ಲ್ಡ್ ಕಪ್ ಅನ್ನು ಕೂಡ ಮಿಸ್ ಮಾಡಿಕೊಂಡರು ಆಶ್ಚರ್ಯ ಪಡಬೇಕಾಗಿಲ್ಲ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.

error: Content is protected !!