Vijay Prakash: ಸಿಂಗಾರ ಸಿರಿಯೇ ಗಾಯಕ ವಿಜಯ್ ಪ್ರಕಾಶ್ ದಂಪತಿಗಳಿಗೆ 23 ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ!

Vijay Prakash: ತಮ್ಮ ಅದ್ಭುತ ಕಂಠಸಿರಿಯಿಂದ ಮೂಡಿ ಬಂದಿರುವ ಹಾಡುಗಳ ಮೂಲಕ ಸಿನಿಮಾದ ಕ್ರೇಜನ್ನು ಮತ್ತಷ್ಟು ಹೆಚ್ಚಿಸುವಂತಹ ಹಲವಾರು ಗಾಯಕ ರಲ್ಲಿ ವಿಜಯ್ ಪ್ರಕಾಶ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಎಂತಹ ಲಿರಿಕ್ಸ್ ಇರುವಂತಹ ಹಾಡುಗಳನ್ನು ನೀಡಿದರು ಅದಕ್ಕೆ ತಮ್ಮದೇ ಆದ ವಿಶೇಷ ಹಾಡುಗಾರಿಕೆಯ ಮೂಲಕ ಅದರ ವೈಶಿಷ್ಟ್ಯವನ್ನು ಇನ್ನಷ್ಟು ಹೆಚ್ಚಿಸುವ ಶಕ್ತಿಯುಳ್ಳ ವಿಜಯ ಪ್ರಕಾಶ್(Vijay Prakash) ಸಾವಿರಾರು ಹಾಡುಗಳಿಗೆ ತಮ್ಮ ಕಂಠದಾನ ಮಾಡಿ ಕನ್ನಡ ಸಿನಿಮಾ ರಂಗದ ಸಿಂಗರ್ಸ್ ಗಳಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗುವಂತಹ ಎಲ್ಲ ಸಿನಿಮಾಗಳಲ್ಲಿಯೂ ವಿಜಯಪ್ರಕಾಶ್ ಅವರ ಅದ್ಭುತ ಕಂಠಸಿರಿ ಮೂಡಿಬಂದಿರುವ ಹಾಡುಗಳು ಇದ್ದೆ ಇರಬೇಕೆಂಬ ಬೇಡಿಕೆ ಇದೆ. ಸರಿಗಮಪ ದಂತಹ ರಿಯಾಲಿಟಿ ಶೋಗಳಲ್ಲಿಯೂ ತೀರ್ಪುಗಾರರಾಗಿ ಕಾಣಿಸಿಕೊಂಡು ಹತ್ತಾರು ಜನರಿಗೆ ಸಂಗೀತದ ಸಲಹೆ ನೀಡುವ ವಿಜಯ ಪ್ರಕಾಶ್(Vijay Prakash) ಅವರು ಇಂದು ತಮ್ಮ 23ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಹೌದು ಗೆಳೆಯರೇ ಮಹತಿ ಮತ್ತು ವಿಜಯ್ ಪ್ರಕಾಶ್(Vijay Prakash) ದಂಪತಿಗಳು ಕಳೆದ 23 ವರ್ಷಗಳ ಹಿಂದೆ ಅಂದರೆ 2001ರಲ್ಲಿ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ 23 ವರ್ಷದ ಅವಧಿಯಲ್ಲಿ ಸಣ್ಣ ಭಿನ್ನಾಭಿಪ್ರಾಯ ಜಗಳಗಳು ಇಲ್ಲದೆ ಬಹಳ ಅನ್ಯೋನ್ಯವಾಗಿ ಇದ್ದಂತಹ ಕನ್ನಡ ಚಲನಚಿತ್ರ ರಂಗದ ಆದರ್ಶ ಜೋಡಿಗಳು ಎಂದರೆ ತಪ್ಪಾಗಲಾರದು.

ವಿಜಯ ಪ್ರಕಾಶ್ ಅವರು ಮಹತಿಯವರನ್ನು ಮೊದಲ ಬಾರಿಗೆ ಮುಂಬೈನಲ್ಲಿ ಭೇಟಿ ಮಾಡುತ್ತಾರೆ. ಮೊದಲ ನೋಟದಲ್ಲಿ ವಿಜಯ ಪ್ರಕಾಶ್(Vijay Prakash) ಅವರಿಗೆ ಮಹತಿಯವರ ಮೇಲೆ ಪ್ರೀತಿ ಚಿಗುರೊಡೆಯುತ್ತದೆ ಕಾಲಕ್ರಮೇಣ ಇವರಿಬ್ಬರ ಸ್ನೇಹ ಪ್ರೀತಿಗೆ ಮನೆಯವರ ಒಪ್ಪಿಗೆ ದೊರೆತ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಹತಿ(Mahathi) ಮದುವೆಯಾದ ನಂತರವೂ ಸ್ವಲ್ಪ ಬದಲಾಗಲಿಲ್ಲ, ನನ್ನ ಈ ಮಟ್ಟದ ಸಾಧನೆಗೆ ಆಕೆಯ ಸಹಕಾರ ಅಪಾರ ಇದೆ ಎಂದು ಹಲವಾರು ವೇದಿಕೆಯ ಮೇಲೆ ವಿಜಯ ಪ್ರಕಾಶ್ ಹೆಂಡತಿಯನ್ನು ಕೊಂಡಾಡಿದ್ದಾರೆ.

ಮೂರು ವರ್ಷಗಳ ಕಾಲ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆಯಲು ಹರಸಾಹಸ ಪಟ್ಟು ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗಳು ಇಂದು ತಮ್ಮ 23ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಇದರ ಅಂಗವಾಗಿ ವಿಜಯ ಪ್ರಕಾಶ್ ತಮ್ಮ instagram ಖಾತೆಯಲ್ಲಿ ತಮ್ಮ ಹಳೆಯ ಫೋಟೋಗಳನ್ನು ಹಂಚಿಕೊಂಡು ಹೆಂಡತಿಗೆ ಪ್ರೀತಿಯಿಂದ ಶುಭಾಶಯಗಳು ತಿಳಿಸಿದ್ದಾರೆ. ಸದ್ಯ ಈ ಫೋಟೋಗಳು ಎಲ್ಲೆಡೆ ಬಾರಿ ವೈರಲಾಗುತ್ತಿದ್ದು ವಿಜಯ ಪ್ರಕಾಶ್(Vijay Prakash) ದಂಪತಿಗಳಿಗೆ ನೆಟ್ಟಿಗರು ಕಾಮೆಂಟ್ ಮೂಲಕ ಶುಭ ಹಾರೈಸುತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!