ನಟ ಚೇತನ್ ಅವರ ಹೇಳಿಕೆಗೆ ಖಡಕ್ ಉತ್ತರ ನೀಡಿದ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು. ಕಾಂತಾರ ಚಿತ್ರ ವೀಕ್ಷಣೆಯ ಬಳಿಕ ಅವರು ಹೇಳಿದ್ದೇನು??

ಹೊಂಬಾಳೆ ಫಿಲ್ಮ್ಸ್ ನಡಿಯಲ್ಲಿ, ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬಂದ ಕಾಂತಾರ ಚಿತ್ರವು ಎಲ್ಲೆಡೆ ಚಪ್ಪಾಳೆ ಗಳಿಸುತ್ತಾ, ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ದೇಶ ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ.

ಕಾಂತಾರ ಚಿತ್ರದ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡ ರಿಷಬ್ ಶೆಟ್ಟಿ ಅವರ ನಟನೆಗೆ ಚಿತ್ರ ವೀಕ್ಷಿಸಿದ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಕರಾವಳಿ ಭಾಗದ ಜನರ ನಂಬಿಕೆ, ಆಚರಣೆಗಳನ್ನು ಯಥಾವತ್ತಾಗಿ ಚಿತ್ರಿಸಿದ ಈ ಚಿತ್ರತಂಡದ ಬಗ್ಗೆ ಇಡೀ ಭಾರತವೇ ಹೆಮ್ಮೆ ಪಡುತ್ತಿದೆ.

ಚಿತ್ರರಂಗ ಕಲಾವಿದರು, ದೊಡ್ಡ ದೊಡ್ಡ ಬಿಸಿನೆಸ್ಗಾರರು, ಸಮಾಜ ಸೇವೆಗಳ ಮೂಲಕ ತಮ್ಮನ್ನು ಗುರುತಿಸಿಕೊಂಡವರು ಹೀಗೆ ಹಲವಾರು ಜನಪ್ರಿಯ ವ್ಯಕ್ತಿಗಳು ಕುಟುಂಬ ಸಮೇತವಾಗಿ ಚಿತ್ರಮಂದಿರಗಳಿಗೆ ತೆರಳಿ ಕಾಂತಾರ ಚಿತ್ರವನ್ನು ವೀಕ್ಷಿಸಿ, ಬಳಿಕ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ.ಇತ್ತೀಚಿಗಷ್ಟೇ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಕಾಂತಾರ ಚಿತ್ರವನ್ನು ವೀಕ್ಷಿಸಿ, ಚಿತ್ರದ ಕುರಿತಾಗಿ ಮಾತನಾಡಿದ್ದಾರೆ.

“ನಾನು ಸಿನಿಮಾವನ್ನು ನೋಡದೆ ಬಹಳ ದಿನಗಳಾಗಿತ್ತು; ಸಾಮಾನ್ಯವಾಗಿ ತೆರೆ ಕಾಣುವ ಚಿತ್ರಗಳಿಗಿಂತ ವಿಭಿನ್ನವಾಗಿ ಮೂಡಿಬಂದ ಕಾಂತಾರ ಚಿತ್ರವು ಕರ್ನಾಟಕದ ಒಂದು ಭಾಗದ ಜನರ ವಿಶೇಷ ಅನುಭವಗಳು, ನಂಬಿಕೆಗಳು, ಆಚರಣೆಗಳನ್ನು ಒಳಗೊಂಡಿತ್ತು. ದೈವರಾದನೆಯಲ್ಲಿರುವ ಸೂಕ್ಷ್ಮತೆಗಳನ್ನು ಬಹಳ ಚೆನ್ನಾಗಿ ರಿಷಬ್ ಶೆಟ್ಟಿಯವರು ಚಿತ್ರದಲ್ಲಿ ಕಾಣಿಸಿದ್ದಾರೆ. ಇಂತಹ ಒಂದು ಚಿತ್ರದಿಂದ ಯುವ ಸಮಾಜಕ್ಕೆ ಹೊಸ ಕಥೆಯೊಂದಿಗೆ ಹಳೆ ಸಂಪ್ರದಾಯಗಳ ಸ್ಮರಣೆಯು ಆದಂತಿದೆ”.

“ಹಳೆ ಸ್ಮರಣೆಗೆ ಹೊಸ ದೃಷ್ಟಿಕೋನವನ್ನು ಲೇಪಿಸಿ ಸತ್ಯದ ರಕ್ಷಣೆ, ಅನ್ಯಾಯದ ವಿರುದ್ಧ ಹೋರಾಟ ಹಾಗೂ ನೆಮ್ಮದಿಯ ಜೀವನ ಇವುಗಳ ಕುರಿತದ ಉತ್ತಮ ಸಂದೇಶವನ್ನು ಚಿತ್ರದ ಮೂಲಕ ನೀಡಿದ್ದಾರೆ. ಜಾತಿ, ಮತ, ಪಂಥಗಳನ್ನು ಮರೆತು ಎಲ್ಲರೂ ಸಹಬಾಳ್ವೆಯಿಂದ ಬಾಳಬೇಕೆಂದು ಈ ಚಿತ್ರವು ಸಾರುತ್ತದೆ” ಎಂದು ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯವನ್ನು ಹಂಚಿಕೊಂಡರು.

ಇದೆ ವೇಳೆಯಲ್ಲಿ ಸಂದರ್ಶನಕಾರರೊಬ್ಬರು ‘ನಟ ಚೇತನ ಅವರು, ಭೂತರಾದನೆ ಹಿಂದೂ ಸಂಸ್ಕೃತಿಯಲ್ಲ..ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದರ ಬಗ್ಗೆ ನೀವೇನು ಹೇಳುತ್ತೀರಿ?’ ಎಂದು ಕೇಳಿದ್ದಾರೆ.

“ದೈವ, ಭೂತ, ಮತ್ತು ನಮ್ಮ ಹಿಂದಿನ ಜನರ ನಂಬಿಕೆಗಳು, ಅಧರ್ಮದ ದಾರಿಯನ್ನು ಎಂದಿಗೂ ತೋರಿಸುವುದಿಲ್ಲ. ದೈವಾರದನೆ ಧರ್ಮದ ಭಾಗ ಹೌದೋ, ಅಲ್ಲವೋ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿರುವ ಆಚರಣೆ. ಧರ್ಮದ ಮೂಲವನ್ನು ಹುಡುಕುತ್ತಾ ಹೋದರೆ ಎಲ್ಲಿಯೂ ಸಿಗುವುದಿಲ್ಲ”.

“ಕರಾವಳಿ ಭಾಗದ ಆಚರಣೆಯ ಮೂಲ ಸ್ವಭಾವವನ್ನು ಅರಿಯದೆ ಮಾತನಾಡಿದರೆ ಅದು ಬೇರೆನೇ ಆಗುತ್ತೆ. ನಮ್ಮ ನಂಬಿಕೆ, ನಡವಳಿಕೆ, ಆಚರಣೆಗಳು ಸ್ವಾಭಾವಿಕವಾಗಿ ನಮ್ಮಲ್ಲಿ ಉಳಿದುಕೊಂಡು ಬಂದದ್ದು. ಇಂತಹ ಆಚರಣೆಗಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ದೈವವಿರಲಿ ಭೂತವಿರಲಿ ಅವು ಎಂದಿಗೂ ಸ್ವಾರ್ಥ ಮತ್ತು ಅಧರ್ಮಗಳನ್ನು ಬೆಂಬಲಿಸುವುದಿಲ್ಲ. ದೈವರಾದನೆ, ಭೂತಾರಾಧನೆ ನಮ್ಮ ನಂಬಿಕೆಯ ಆಚರಣೆ; ನಾವು ಆಚರಿಸುತ್ತೇವೆ ಎಂಬುದಂತೂ ಸತ್ಯ” ಎಂದು ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.

Leave a Comment

error: Content is protected !!