ಪುನೀತ್ ರಾಜಕುಮಾರ್ ಅವರು ಪ್ರತಿ ದಿನ ಮಾಡುತ್ತಿದ್ದ ಆ ಒಂದು ಕೆಲಸವೇ ಅವರ ಸಾ ವಿಗೆ ಕಾರಣವಾಯ್ತು ಎಂದ ಪ್ರಶಾಂತ್ ಸಂಬರಗಿ

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹರಡಿದ ಪುನೀತ್ ರಾಜಕುಮಾರ್ ಅವರ ಹೃದಯಘಾತದ ಸುದ್ದಿಯು ಎಲ್ಲರೂ ದೇವರಲ್ಲಿ ‘ಪುನೀತ್ ಅವರು ಬೇಗನೆ ಗುಣಮುಖವಾಗಿ ಬರಲಿ’ ಎಂದು ಬೇಡುವಂತೆ ಮಾಡಿತ್ತು. ಆದರೆ ಪುನೀತವರು ಮರಳಿ ಬಾರದೂರಿಗೆ ನಡೆದಿದ್ದಾರೆ ಎಂಬ ಸುದ್ದಿಯು ತಿಳಿಯುತ್ತಿದ್ದಂತೆ ಎಲ್ಲರಿಗೂ ಕಾಡಿರುವ ಪ್ರಶ್ನೆ, ‘ಫಿಟ್ನೆಸ್ ಅನ್ನು ಮೈನ್ಟೈನ್ ಮಾಡಿದ್ದ ಮತ್ತು ಉತ್ತಮ ಆರೋಗ್ಯಕ್ಕಾಗಿ ಕಾಳಜಿ ವಹಿಸಿದ ಪುನೀತ ಅವರಿಗೆ ಹೃದಯಘಾತವಾಗಲು ಸಾಧ್ಯವೇ?’ ಎಂಬುದು.

ಪುನೀತ್ ಅವರ ಸಾವಿನ ಸುದ್ದಿ ಸುಳ್ಳಾಗಿರಲಿ ಎಂದು ಅದೆಷ್ಟೋ ಜನ ಆಶಿಸುತ್ತಿದ್ದರು. ಇಂದಿಗೂ ಪುನೀತ್ ಅವರು ಚಿತ್ರೀಕರಣದಲ್ಲಿ ಬಿಜಿಯಾಗಿದ್ದು ಹೊಸದೊಂದು ಚಿತ್ರದೊಂದಿಗೆ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ನಂಬಿಯೇ ಬದುಕುತ್ತಿರುವ ಅಭಿಮಾನಿಗಳು ಕಾಣಸಿಗುತ್ತಾರೆ. ಪುನೀತ್ ಅವರ ಸಾವಿನ ಕಹಿಯ ನೋವನ್ನು ಸಹಿಸಲಾರದೆ ಪುನೀತ್ ಅವರು ಮತ್ತೊಮ್ಮೆ ಕರ್ನಾಟಕದಲ್ಲಿ ಜನಿಸಲಿ ಎಂದು ಕಣ್ಣೀರಿಡುತ್ತಿದ್ದಾರೆ.

ಇದರ ಬೆನ್ನಲ್ಲೇ ಪ್ರಶಾಂತ್ ಸಂಬರ್ಗಿಯವರು ಪುನೀತ್ ಅವರ ಹೃದಯಘಾತಕ್ಕೆ ಅದೊಂದು ಕಾರಣವಿರಬಹುದು ಎಂದು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಶಾಂತ್ ಅವರು ಜರ್ನಲಿಸ್ಟ್ ಅಷ್ಟೇ ಅಲ್ಲದೆ ನಿರ್ಮಾಪಕರು ಹೌದು. ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡು ಮನೆ ಮಂದಿಗೆಲ್ಲ ಪರಿಚಿತರಾಗಿದ್ದಾರೆ.

ಪ್ರಶಾಂತ್ ಸಂಬರಗಿ ಹೇಳಿರುವ ಹಾಗೆ ಪುನೀತ್ ಹಾಗೂ ಪ್ರಶಾಂತವರ ನಡುವೆ ಒಳ್ಳೆಯ ಸ್ನೇಹ ಸಂಬಂಧವಿತ್ತಂತೆ. ಅಕ್ಟೋಬರ್ ಎರಡರಂದು ಫೋನಿನಲ್ಲಿ ವ್ಯವಹರಿಸಿರುವುದೇ ಪುನೀತ್ ಅವರೊಂದಿಗೆ ಪ್ರಶಾಂತ್ ಅವರು ಮಾತನಾಡಿದ ಕೊನೆಯ ಘಳಿಗೆಯಂತೆ. ಹೊಸ ಚಿತ್ರಕ್ಕಾಗಿ ಮುಂಬೈನಿಂದ ನಿರ್ಮಾಪಕರನ್ನು ಕರೆಸಬೇಕೆಂದು ಪ್ರಶಾಂತವರು ತಿಳಿಸಿದಾಗ ಪುನೀತ್ ಅವರು ಕರೆಸಿ ಎಂದಿದ್ದರಂತೆ. ಪುನೀತ್ ಅವರು ಬಿಡುವಿನ ವೇಳೆಯಲ್ಲಿ ಜೊತೆಗಾರರು, ಸ್ನೇಹಿತರೊಂದಿಗೆ ಕಾಲ ಕಳೆಯುವುದಷ್ಟೇ ಅಲ್ಲದೆ ಬೈಕ್ ಹಾಗೂ ಕಾರ್ ರೇಸ್ ಗಳಲ್ಲಿಯೂ ಆಸಕ್ತಿ ಹೊಂದಿದ್ದರಂತೆ. ಪ್ರತಿಯೊಬ್ಬರ ಜೊತೆಗೂ ಮಾತನಾಡುವಾಗ ಪುನೀತ್ ಅವರು ಅವರ ಕುಟುಂಬದವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದಾರಂತೆ.

https://youtu.be/PF0OoTrYraU

ಪ್ರಶಾಂತ್ ಅವರು “ಸಾವು ಯಾರಿಗೆ ಯಾವಾಗ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ; ಯಾಕೆಂದರೆ ಪುನೀತ್ ಅವರು ತುಂಬಾ ಫಿಟ್ ಆಗಿರುವ ವ್ಯಕ್ತಿ ಅಷ್ಟೇ ಅಲ್ಲದೆ, ಅವರ ಆಹಾರ ಕ್ರಮವಾಗಲಿ, ಜೀವನ ಶೈಲಿಯಾಗಲಿ ಕ್ರಮಬದ್ಧವಾಗಿತ್ತು. ನಾನು ಹಲವರಲ್ಲಿ ಪುನೀತ್ ಅವರ ಹೃದಯಾಘಾತದ ವಿಚಾರವಾಗಿ ಮಾತನಾಡಿದಾಗ ಒಂದು ಕಾರಣವನ್ನು ಹುಡುಕಿದ್ದೇನೆ. ಲಾಕ್ಡೌನ್ ಸಮಯದಲ್ಲಿ ಯಾವುದೇ ಚಿತ್ರೀಕರಣವಿಲ್ಲದಿರುವಾಗ ರಾತ್ರಿ ಎಂಟರಿಂದ ಬೆಳಗಿನ ಜಾವ 2:00 ವರೆಗೂ ಎರಡು ಸಿನಿಮಾವನ್ನು ನೋಡಿ ಅದರ ವಿಮರ್ಶೆ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಪುನೀತ್ ಅವರಿಗೆ ಹವ್ಯಾಸವಾಗಿತ್ತು. ಅವರ ನಿದ್ದೆಯೂ ನಾಲ್ಕು ಗಂಟೆಯಷ್ಟೇ ಆಗುತ್ತಿತ್ತು. ಪ್ರತಿದಿನದಂತೆಯೇ ಬೆಳಗಿನ ಜಾವ ವರ್ಕೌಟ್ಸ್ ಮಾಡಲು ತೆರಳುತ್ತಿದ್ದರು. ನಿದ್ದೆ ಕಡಿಮೆಯಾಗಿ ಹೃದಯಘಾತವಾಗಿರಬಹುದು ಎಂಬುದೊಂದು ಊಹೆ” ಎಂದು ಹೇಳಿದ್ದಾರೆ. ಈ ವಿಚಾರವು ಎಷ್ಟು ಸತ್ಯ? ಎಷ್ಟು ಸುಳ್ಳು? ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇದು ಪ್ರಶಾಂತ ಅವರ ಅಭಿಪ್ರಾಯವಷ್ಟೇ..

Leave a Comment

error: Content is protected !!