Shivanna: ಶಿವಣ್ಣನ ಮೊದಲ ಸಿನಿಮಾ ಬಿಡುಗಡೆಯಾದಾಗ ಅವರಿಗೆ ವಿಷ್ಣುದಾದ ನೀಡಿದ ಉಡುಗೊರೆ ಏನು ಗೊತ್ತಾ?

Vishnuvardhan ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ 1986ರಲ್ಲಿ ಬಿಡುಗಡೆಯಾದ ಆನಂದ್ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಅಲ್ಲಿಂದ ಆಚೆಗೆ ಅವರನ್ನು ಕನ್ನಡ ಚಿತ್ರರಂಗದ ಮಹಾರಾಜನಂತೆ ಸಿನಿಮಾ ಪ್ರೇಕ್ಷಕರು ಮೆರೆಸಿಕೊಂಡು ಬಂದಿದ್ದಾರೆ ಎನ್ನುವುದು ನೀವೆಲ್ಲರೂ ಸಾಕ್ಷಿಕರಿಸಿರುವಂತಹ ವಿಚಾರ.

ಇನ್ನು ವಿಷ್ಣು(Vishnu) ಹಾಗೂ ರಾಜ್(Raj) ಕುಟುಂಬಗಳ ನಡುವೆ ಮಾಧ್ಯಮಗಳು ಹಾಗೂ ಕೆಲವೊಂದು ಕಾಣದ ಕೈಗಳು ದ್ವೇಷ ಇದೆ ಎಂಬುದಾಗಿ ಸುಖಾ ಸುಮ್ಮನೆ ಸಮಾಜದಲ್ಲಿ ಹರಡಿ ಬಿಟ್ಟಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಆದರೆ ಅವರಿಬ್ಬರೂ ಕೂಡ ಪರಸ್ಪರ ಸಾಕಷ್ಟು ಪ್ರೀತಿ ಹಾಗೂ ಗೌರವಗಳನ್ನು ಹೊಂದಿದ್ದರು ಎನ್ನುವುದನ್ನು ಎಂದಿಗೂ ಕೂಡ ಅವರ ಕುಟುಂಬಗಳು ಮುಂದುವರಿಸಿಕೊಂಡು ಬಂದಿರುವ ಸ್ನೇಹ ಭಾವನೆಯ ಮೂಲಕವೇ ನಾವು ತಿಳಿದುಕೊಳ್ಳಬಹುದಾಗಿದೆ.

ಅದರಲ್ಲೂ ವಿಶೇಷವಾಗಿ ಆನಂದ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಂದರ್ಭದಲ್ಲಿ ವಿಷ್ಣುವರ್ಧನ್(Vishnuvardhan) ಅವರು ಶಿವಣ್ಣ ಅವರಿಗೆ ಒಂದು ವಿಶೇಷ ಉಡುಗೊರೆ ನೀಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಸ್ವಾಗತಿಸಿದರು ಎಂಬುದಾಗಿ ತಿಳಿದುಬಂದಿದೆ. ಹೌದು ಅದೊಂದು ವಿಶೇಷವಾದ ವಾಚ್ ಆಗಿತ್ತು.

ನಾಗರಹಾವು ಸಿನಿಮಾ ನೋಡಿದ ನಂತರ ತಮಿಳು ಚಿತ್ರರಂಗದ ಲೆಜೆಂಡರಿ ನಟ ಆಗಿರುವಂತಹ ಎಂಜಿಆರ್(MGR) ಅವರು ಈ ವಾಚ್ ಅನ್ನು ನೀಡಿ ನಿನ್ನಂತಹ ಕಲಾವಿದನನ್ನು ನಾನು ನೋಡಿಲ್ಲ ಒಂದು ವೇಳೆ ನಿನಗೂ ಕೂಡ ಒಬ್ಬ ಮಹಾನ್ ಕಲಾವಿದ ಕಾಣಿಸುತ್ತಿದ್ದಾನೆ ಎಂದರೆ ಆತನಿಗೆ ಇದನ್ನು ನೀಡಬಹುದು ಎಂಬುದಾಗಿ ಹೇಳಿದ್ದರಂತೆ. ಅವರ ಮಾತಿನಂತೆಯೇ ಶಿವಣ್ಣನ(Shivanna) ನಟನೆ ನೋಡಿ ವಿಷ್ಣುವರ್ಧನ್ ರವರಿಗೆ ಹಾಗೆ ಅನಿಸಿ ಆ ವಾಚ್ ಅನ್ನು ನೀಡಿ ಅದರ ಮಹತ್ವವನ್ನು ಶಿವಣ್ಣ ಅವರಿಗೆ ತಿಳಿಸಿದರಂತೆ. ಆ ವಾಚ್ ಇಂದಿಗೂ ಕೂಡ ಶಿವಣ್ಣನ ಬಳಿ ಇದೆ ಎಂಬ ಮಾತಿದೆ.

Leave a Comment

error: Content is protected !!