ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದಾರೂ ಸಹ ನಟ ಕಿಶೋರ್ ತಮ್ಮ ಮಕ್ಕಳನ್ನು ಹಳ್ಳಿ ಸ್ಕೂಲ್ ಗೆ ಕಳುಹಿಸುತ್ತೀರೋದು ಯಾಕೆ. ಕಿಶೋರ್ ಪತ್ನಿ ಲಕ್ಷ ಲಕ್ಷ ಸಂಬಳ ಸಿಗುವ ಕೆಲಸ ಬಿಟ್ಟಿದ್ದು ಏಕೆ

ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರೂ ಕೂಡ ನಟ ಕಿಶೋರ್ ರವರು ನಡೆಸುವ ಜೀವನ ಎಂಥದ್ದು ಗೊತ್ತಾ?ನಟ ಕಿಶೋರ್ ರವರು ಇಂದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ ನಲ್ಲಿ ಕೂಡ ಬೇಡಿಕೆಯಲ್ಲಿರುವ ನಟ. ಪ್ರತಿಯೊಂದು ಸಿನಿಮಾಗೆ ಕೋಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಕೂಡ ಪಡೆಯುವಂತಹ ಬಹುಮೂಲ್ಯ ಪ್ರತಿಭೆ. ಹೇಗಿದ್ದರೂ ಕೂಡ ಇವರ ಮಕ್ಕಳು ಹಳ್ಳಿ ವಾತಾವರಣದಲ್ಲಿರುವ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಕಲಿಯುತ್ತಿದ್ದಾರೆ.

ಇನ್ನು ಇವರು ಕೂಡ ಕೃಷ್ಣ ಹಾಗೂ ಬೇಸಾಯವನ್ನು ಮಾಡಿಕೊಂಡು ತಮ್ಮ ಪತ್ನಿ ವಿಶಾಲಾಕ್ಷಿ ಮತ್ತು ಮಕ್ಕಳೊಂದಿಗೆ ಹಳ್ಳಿ ವಾತಾವರಣದಲ್ಲಿ ಇದ್ದಾರೆ. ಒಂದು ಕಾಲದಲ್ಲಿ ಇವರು ಪಾರ್ಟ್ ಟೈಮ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ವಿಶಾಲಾಕ್ಷಿ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಹೀಗಿದ್ದರೂ ಕೂಡ ಒಳ್ಳೆ ಸಂಭಾವನೆ ಸಿಗುವ ಕೆಲಸ ಇವರಿಗೆ ಇರಲಿಲ್ಲ. ನಂತರ ಕಂಠಿ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುತ್ತಾರೆ. ಇದಾದ ನಂತರ ಮತ್ತೆ ಕಿಶೋರ್ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಇನ್ನು ಕಿಶೋರ ಅವರ ಜೊತೆಗೆ ಅವರ ಪತ್ನಿ ವಿಶಾಲಾಕ್ಷಿ ಕೂಡ ಸಿಎ ಆಗಿದ್ದರು.

ಕನಿಷ್ಠಪಕ್ಷ ತಿಂಗಳಿಗೆ 5 ಲಕ್ಷ ಸಂಭಾವನೆ ಬರುವಂತಹ ಕೆಲಸದಲ್ಲಿದ್ದರು. ಆದರೆ ನಂತರದ ದಿನಗಳಲ್ಲಿ ಬೆಂಗಳೂರಿನ ಜೀವನ ಬೇಸರವಾಗಿ ವಿಶಾಲಾಕ್ಷಿ ಅವರು ಬೆಂಗಳೂರಿನ ಸಮೀಪದಲ್ಲಿರುವ ಬನ್ನೇರಘಟ್ಟದ ಪುಟ್ಟ ಹಳ್ಳಿಯಲ್ಲಿ ಎರಡು ಎಕರೆ ಬರಡು ಭೂಮಿಯನ್ನು ಖರೀದಿಸಿ ಅಲ್ಲಿ ಮನೆಯನ್ನು ಕಟ್ಟಿಸಿ ಕೃಷಿ ಕೃಷಿ ಹಾಗೂ ಇನ್ನಿತರ ಕೃಷಿ ಸಂಬಂಧಿತ ಗಿಡಮರಗಳ ಬೆಳವಣಿಗೆ ಹಾಗೂ ಕಾರ್ಯಗಳಲ್ಲಿ ವಿಶಾಲಾಕ್ಷಿ ಅವರು ತೊಡಗುತ್ತಾರೆ. ಇನ್ನು ಈ ಕೆಲಸಕ್ಕೆ ಅವರ ಪತಿ ಹಾಗೂ ನಟ ಕಿಶೋರ್ ಕುಮಾರ್ ಅವರು ಕೂಡ ಸಾಥ್ ನೀಡುತ್ತಾರೆ.

ಇನ್ನು ತಮ್ಮ ಇಬ್ಬರು ಮಕ್ಕಳಿಗೂ ಕೂಡ ಬೇರೆ ಸೆಲೆಬ್ರಿಟಿಗಳ ಹಾಗೆ ಸಿಟಿ ಜೀವನವನ್ನು ತೋರಿಸಿಲ್ಲ ಬದಲಾಗಿ ಹಳ್ಳಿ ಜೀವನವನ್ನು ತೋರಿಸಿ ಹಳ್ಳಿಯಲ್ಲಿಯೇ ಅವರನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಮಕ್ಕಳಿಗೆ ಕೂಡ ಕೃಷಿಯ ಮಹತ್ವ ಹಾಗೂ ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವ ಕುರಿತಂತೆ, ಜೀವನ ಪಾಠವನ್ನು ಇಬ್ಬರೂ ದಂಪತಿಗಳು ಕೂಡ ಸೇರಿ ಕಲಿಸುತ್ತಿದ್ದಾರೆ. ನಿಜಕ್ಕೂ ಕೂಡ ಕಿಶೋರ್ ಅವರಂತಹ ಪಂಚ ಭಾಷಾ ತಾರೆ ಇಷ್ಟೊಂದು ಸಿಂಪಲ್ ಆಗಿ ಜೀವನ ನಡೆಸುತ್ತಿರುವುದು ಬೇರೆ ನಟರಿಗೂ ಕೂಡ ಮಾದರಿಯಾಗಿದೆ ಎನ್ನಬಹುದಾಗಿದೆ.

Leave a Comment

error: Content is protected !!