ಡಿ ಬಾಸ್ ಹಾಗೂ ಕಿಚ್ಚ ಸುದೀಪ್ ಅವರಿಗೆ ಯಶ್ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡೋದಿಲ್ಲ ಯಾಕೆ ಗೊತ್ತಾ?

ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ಎನ್ನುವ ಹೆಸರು ಭಾರತೀಯ ಚಿತ್ರರಂಗದಾದ್ಯಂತ ಎಲ್ಲಾ ಕಡೆ ಮನೆ ಮಾತಾಗಿದೆ ಎಂದರು ತಪ್ಪಾಗಲಾರದು. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪಂಚ ಭಾಷೆಗಳಲ್ಲಿ ಕೂಡ ರಾಕಿಂಗ್ ಸ್ಟಾರ್ ಯಶ್ ಅವರು ಸ್ಟಾರ್ ಪಟ್ಟವನ್ನು ಹೊಂದಿದ್ದಾರೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಇನ್ನು ಈಗ ಯಶ್ ಅವರು ಯಾವ ರೇಂಜ್ನಲ್ಲಿ ಬೆಳೆದು ನಿಂತಿದ್ದಾರೆ ಎಂಬುದನ್ನು ನಿಮಗೆ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಪ್ರತಿಯೊಂದು ಇಂಡಸ್ಟ್ರಿಯಲ್ಲಿ ಕೂಡ ಯಶ್ ಅವರನ್ನು ನಂಬಿಕೊಂಡು ನಿರ್ಮಾಪಕರು ನೂರಾರು ಕೋಟಿ ಬಂಡವಾಳವನ್ನು ಓಡಿ ಬಿಗ್ ಬಜೆಟ್ ಸಿನಿಮಾ ಮಾಡಿದರು ಕೂಡ ಅದಕ್ಕೆ ತಕ್ಕಂತೆ ಯಶಸ್ಸು ಸಿಗುವ ಸಾಧ್ಯತೆ ಸಂಪೂರ್ಣವಾಗಿದೆ ಎಂಬಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ದೇಶದ ಪ್ರತಿಯೊಂದು ರಾಜ್ಯದ ಮೂಲೆಗಳಲ್ಲೂ ಕೂಡ ರಾಕಿಂಗ್ ಸ್ಟಾರ್ ಯಶ್ ಸಂಪಾದಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರಿದಂತೆ ಬಹುತೇಕ ಸ್ಟಾರ್ ನಟರ ಬರ್ತಡೇ ಗಳಿಗೆ ಅಥವಾ ಸಿನಿಮಾಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡೋದಿಲ್ಲ ಎನ್ನುವ ಅಪವಾದ ಕೂಡ ಇದೆ. ಇದಕ್ಕೆ ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನ ಒಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ಸಂಪೂರ್ಣ ವಿವರವಾಗಿ ವಿವರಣೆಯನ್ನು ನೀಡುವ ಮೂಲಕ ಹೇಟರ್ಸ್ ಗಳಿಗೆ ಸರಿಯಾದ ರಿಪ್ಲೈ ನೀಡಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಮಿತ್ರರೇ ಅದೇನೆಂದರೆ ರಾಕಿಂಗ್ ಸ್ಟಾರ್ ಯಶ್ ರವರು ಯಾವತ್ತೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡುವ ಮೂಲಕ ತೋರಿಕೆಯ ಪ್ರೀತಿಯನ್ನು ತೋರಿಸುವದಕ್ಕೆ ಯಾವತ್ತೂ ಕೂಡ ಹೋಗುವುದಿಲ್ಲ. ನೇರವಾಗಿ ಅವರಿಗೆ ಕರೆ ಮಾಡಿ ಅಥವಾ ಅವರನ್ನು ಭೇಟಿಯಾಗಿ ಶುಭಾಶಯಗಳು ತಿಳಿಸುವುದು ರಾಕಿಂಗ್ ಸ್ಟಾರ್ ಯಶ್ ಅವರ ದಾಟಿಯಾಗಿದ್ದು ಇದನ್ನೇ ಅವರು ಉತ್ತರಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!