Yash 19: ಯಶ್ ಅವರ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್. ವೈರಲ್ ಆಯ್ತು ನೋಡಿ ಹೊಸ ಮೂವಿ ಪೋಸ್ಟರ್!

Rocking Star Yash ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್(Yash) ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುರಿತಂತೆ ಸಾಕಷ್ಟು ಗೊಂದಲಗಳು ಹಾಗೂ ಚರ್ಚೆಗಳು ಇಡೀ ಭಾರತೀಯ ಚಿತ್ರರಂಗದ ವಲಯದಲ್ಲಿ ಜೋರಾಗಿಯೇ ನಡೆಯುತ್ತಿದೆ. ಇಷ್ಟೆಲ್ಲ ಚರ್ಚೆ ಹಾಗೂ ಊಹಾಪೋಹಗಳ ನಂತರವೂ ಕೂಡ ಅಧಿಕೃತವಾದ ಮಾಹಿತಿ ಚಿತ್ರದ ಕುರಿತಂತೆ ಅಥವಾ ಚಿತ್ರ ಯಾವಾಗ ಬರಲಿದೆ ಎನ್ನುವ ಕುರಿತಂತೆ ಇಂದಿಗೂ ಕೂಡ ಸಿಕ್ಕಿಲ್ಲ. ಇದು ನಿಜಕ್ಕೂ ಕೂಡ ಅಭಿಮಾನಿಗಳಲ್ಲಿ ಬೇಸರವನ್ನು ಮೂಡಿಸಿದೆ.

ಈಗಾಗಲೇ ರಾಕಿಂಗ್ ಸ್ಟಾರ್ ಯಶ್(Rocking Star Yash) ಒಬ್ಬ ಪ್ಯಾನ್ ಇಂಡಿಯನ್ ನಾಯಕ ನಟನಾಗಿ ಸಾಕಷ್ಟು ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿದ್ದಾರೆ. ಇದು ಮಾಸುವ ಮುನ್ನವೇ ಮತ್ತೊಂದು ಸಿನಿಮಾದಲ್ಲಿ ಅವರು ಕಾಣಿಸಿಕೊಂಡರೆ ಒಳ್ಳೆಯದು ಎನ್ನುವುದು ಕೂಡ ಬಾಕ್ಸ್ ಆಫೀಸ್ ಹಾಗೂ ಸಿನಿಮಾ ಪಂಡಿತರ ಲೆಕ್ಕಾಚಾರವಾಗಿದೆ. ಹೀಗಿದ್ದರೂ ಕೂಡ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅವರ ಮುಂದಿನ ಸಿನಿಮಾದ(Yash Next cinema) ಪೋಸ್ಟರ್ ಎನ್ನಲಾಗಿರುವಂತಹ ಫೋಟೋ ಎಲ್ಲಾ ಕಡೆ ಓಡಾಡುತ್ತಿದ್ದು ಅತ್ಯಂತ ಕಡಿಮೆ ಸಮಯದಲ್ಲಿಯೇ ವೈರಲ್ ಆಗಿದೆ. ಹಾಲಿವುಡ್ ಸಿನಿಮಾ ಆಗಿರುವ ಹರ್ಕ್ಯುಲಸ್ ಮಾದರಿಯಲ್ಲಿ ಮೂಡಿಬಂದಿರುವಂತಹ ಈ ಪೋಸ್ಟರ್ ಅಭಿಮಾನಿಗಳ ಎಡಿಟ್ ಮಾಡಿರುವುದು ಎನ್ನುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಈಗಾಗಲೇ ಸುದ್ದಿಗಳ ಪ್ರಕಾರ ಯಶ್ ರವರು ಹಲವಾರು ಹಾಲಿವುಡ್ ತಂತ್ರಜ್ಞರನ್ನು ಕೂಡ ತಮ್ಮ ಮುಂದಿನ ಸಿನಿಮಾಗಳಿಗೆ ಹಾಕಿಕೊಳ್ಳುವುದು ಕನ್ಫರ್ಮ್ ಆಗಿದ್ದು ಯಶ್ ಅವರ ಮುಂದಿನ ಸಿನಿಮಾ ಯಾವುದೇ ಹಾಲಿವುಡ್ ಸಿನಿಮಾಗು ಕೂಡ ಕಡಿಮೆ ಇಲ್ಲದಂತೆ ಮೂಡಿಬರಲಿದೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತಂತೆ ಸ್ಪಷ್ಟವಾದ ಚಿತ್ರಣ ನಮಗೆ ಸಿಗಲಿದ್ದು ಯಶ್(Yash) ಅವರು ಖಂಡಿತವಾಗಿ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕ ನಾಡು ಮೆಚ್ಚುವಂತಹ ಸಿನಿಮಾವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

Leave a Comment

error: Content is protected !!