Salaar: ಸಲಾರ್ ಕ್ಲೈಮಾಕ್ಸ್ ಪ್ರಭಾಸ್ ಜೊತೆಗೆ ಒಂದಾಗಲಿದ್ದಾರಾ ರಾಕಿ ಬಾಯ್ ಹಾಗೂ ಜೂನಿಯರ್ ಎನ್ಟಿಆರ್? ಲೀಕ್ ಆಯ್ತಾ ಸಿನಿಮಾ ಸೀಕ್ರೆಟ್?

Yash & Jr Ntr ಪ್ರಶಾಂತ್ ನೀಲ್(Prashanth Neel) ಯುನಿವರ್ಸ್ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದಂತಹ ಕಲ್ಪನೆಗಳು ದೊಡ್ಡದಾಗಿ ಓಡಾಡುತ್ತಿವೆ. ಹೌದು ಗೆಳೆಯರೇ ಕೆಜಿಎಫ್ ಸರಣಿ ಚಿತ್ರಗಳ ನಂತರ ಈಗ ಪ್ರಶಾಂತ್ ನೀಲ್ ರೆಬಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್(Prabhas) ನಟನೆಯ ಸಲಾರ್(Salaar) ಸಿನಿಮಾದತ್ತ ಮುಖ ಮಾಡಿದ್ದು ಇನ್ನೇನು ಚಿತ್ರೀಕರಣ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ.

ಆದರೆ ಈ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ಮೂವರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ತರುವ ಮೂಲಕ ನೀಲ್ ಯೂನಿವರ್ಸ್(Neel Universe) ಮನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ.

ಇರುವಂತಹ ಮಾಹಿತಿಗಳ ಪ್ರಕಾರ ಸಲಾರ್ ಸಿನಿಮಾದಲ್ಲಿ ಕ್ಲೈಮಾಕ್ಸ್ ದೃಶ್ಯದಲ್ಲಿ ಪ್ರಭಾಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾಕಿ ಬಾಯ್(Rocky bhai) ಪಾತ್ರದಲ್ಲಿ ಮುಖಾಮುಖಿಯಾಗಲಿದ್ದು ಈ ದೃಶ್ಯಕ್ಕೆ ಜೂನಿಯರ್ ಎನ್ಟಿಆರ್(Jr Ntr) ಅವರ ವಾಯ್ಸ್ ಇರಲಿದೆ ಎಂಬುದಾಗಿದೆ ತಿಳಿದು ಬಂದಿದೆ. ಅಂದರೆ ಪ್ರಶಾಂತ್ ನೀಲ್ ಅವರ ಯೂನಿವರ್ಸ್ ನಲ್ಲಿ ಒಟ್ಟಾರೆಯಾಗಿ ಪ್ರಭಾಸ್ ರಾಕಿಂಗ್ ಸ್ಟಾರ್ ಯಶ್ ಹಾಗೂ ಜೂನಿಯರ್ ಎನ್ಟಿಆರ್ ಅವರು ಕೂಡ ಇರಲಿದ್ದಾರೆ.

ಯಾಕೆಂದರೆ ಪ್ರಶಾಂತ್ ನೀಲ್ ಸಲಾರ್(Prashanth Neel Salaar) ಸಿನಿಮಾದ ನಂತರ ತಮ್ಮ ಮುಂದಿನ ಸಿನಿಮಾವನ್ನು ಜೂನಿಯರ್ ಎನ್ಟಿಆರ್ ಅವರ ಜೊತೆಗೆ ಮಾಡಲಿದ್ದಾರೆ ಎಂಬುದು ಖಾತ್ರಿ ಯಾಗಿದೆ. ಹೀಗಾಗಿ ಈ ಎಲ್ಲಾ ಕಥೆಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿರಲಿವೆ ಎಂಬುದಾಗಿ ಹೇಳಬಹುದಾಗಿದೆ. ಒಂದು ವೇಳೆ ಇದು ಹೇಳಿದಂತೆಯೇ ನಿಜವಾದರೆ ಖಂಡಿತವಾಗಿ ಬಾಕ್ಸ್ ಆಫೀಸ್ ನಲ್ಲಿ ಯಾರೂ ಬರೆಯಲಾಗದ ದಾಖಲೆಯನ್ನು ಈ ಸಿನಿಮಾಗಳು ಬರೆಯಲಿವೆ.

Leave a Comment

error: Content is protected !!