Sandalwood News: ಯಶ್ ರಾಧಿಕಾ ಹಾಗೂ ಸಿಂಹ ಪ್ರಿಯ ದಂಪತಿಗಳ ವ್ಯಾಲೆಂಟೈನ್ಸ್ ಡೇ ಹೇಗಿತ್ತು ಗೊತ್ತಾ?

Yash Radhika ಫೆಬ್ರವರಿ 14ರಂದು ಪ್ರತಿಯೊಬ್ಬರೂ ಕೂಡ ಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತಾರೆ. ಈ ವಿಚಾರದಲ್ಲಿ ನಮ್ಮ ಸ್ಯಾಂಡಲ್ವುಡ್ ನಟ ನಟಿಯರು ಕೂಡ ಹಿಂದೆ ಬಿದ್ದಿಲ್ಲ. ಅದರಲ್ಲಿಯೂ ನಾವು ಮಾತನಾಡಲು ಹೊರಟಿರುವುದು ರಾಕಿಂಗ್ ಸ್ಟಾರ್ ಯಶ್(Rocking Star Yash) ಹಾಗೂ ಸ್ಯಾಂಡಲ್ವುಡ್ ಚಿತ್ರರಂಗದ ಸಿಂಡ್ರೆಲ್ಲಾ ಆಗಿರುವ ರಾಧಿಕಾ ಪಂಡಿತ್ ಮತ್ತು ಸಿಂಹ ಪ್ರಿಯ ಜೋಡಿಗಳ ಬಗ್ಗೆ. ಇವರ ವ್ಯಾಲೆಂಟೆನ್ಸ್ ಡೇ ಸಾಕಷ್ಟು ವಿಶೇಷವಾಗಿತ್ತು ಎನ್ನಬಹುದು.

ನಿಮಗೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೆ ರಾಧಿಕಾ ಪಂಡಿತ್ ಅವರ ಜೊತೆಗೆ. ಕೇವಲ ಸಿನಿಮಾ ಮಾತ್ರವಲ್ಲದೆ ಕಿರುತೆರೆಯ ಧಾರವಾಹಿಯಲ್ಲಿ ಕೂಡ ಯಶ್ ಹಾಗೂ ರಾಧಿಕಾ ಪಂಡಿತ್(Radhika Pandit) ಇಬ್ಬರೂ ಕೂಡ ಜೊತೆಯಾಗಿಯೇ ಪಾದಾರ್ಪಣೆ ಮಾಡುತ್ತಾರೆ. ನಂತರ ಚಿತ್ರರಂಗದಲ್ಲಿ ತಾವು ಅಂದುಕೊಂಡದ್ದನ್ನು ಸಾಧಿಸಿದ ನಂತರ ಇಬ್ಬರು ಪ್ರೀತಿಸಿ ಮದುವೆಯಾಗುತ್ತಾರೆ. ಕನ್ನಡ ಚಿತ್ರರಂಗದ ಯುವ ಪ್ರೇಮಿಗಳಿಗೆ ಇವರ ಪ್ರೀತಿ ಎನ್ನುವುದು ಸ್ಪೂರ್ತಿಯಾಗಿದೆ.

ಇನ್ನೊಂದು ಕಡೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಹಾಗೂ ನಟಿಯಾಗಿರುವ ವಶಿಷ್ಟ ಸಿಂಹ(Vasishta Simha) ಹಾಗೂ ಹರಿಪ್ರಿಯಾ(Haripriya) ಇಬ್ಬರೂ ಕೂಡ ಇತ್ತೀಚಿಗಷ್ಟೇ ಪ್ರೀತಿಸಿ ಸೈಲೆಂಟ್ ಆಗಿಯೇ ಮದುವೆಯಾಗಿರುವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಇವರು ಕೂಡ ಕನ್ನಡ ಚಿತ್ರರಂಗದ ಪ್ರೇಕ್ಷಕರ ನೆಚ್ಚಿನ ಜೋಡಿಗಳಾಗಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಅಂದರೆ ಪ್ರೇಮಿಗಳ ದಿನಾಚರಣೆಯ ದಿನದಂದು ಎರಡು ಜೋಡಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ವ್ಯಾಲೆಂಟೆನ್ಸ್ ಡೇ ದಿನಾಚರಣೆಯ ಶುಭಾಶಯಗಳು ಕೋರಿದ್ದಾರೆ. ನೀವು ಕೂಡ ಆ ಫೋಟೋಗಳನ್ನು ನೋಡಬಹುದಾಗಿತ್ತು ಎರಡು ಜೋಡಿಗಳು ಕೂಡ ಸಾಕಷ್ಟು ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ.

Leave a Comment

error: Content is protected !!