Gastric Tips: ಗ್ಯಾಸ್ಟಿಕ್ ಸಮಸ್ಯೆ ಬಂದಾಗ ಪರಿಹಾರವೇನು ಇಲ್ಲಿದೆ ನೋಡಿ ಸುಲಭ ಮನೆ ಮದ್ದು.

Gastric Tips ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜಗತ್ತು ಆಧುನಿಕತೆಯ ಕಡೆಗೆ ಹೋಗುತ್ತಿದ್ದಂತೆ ಜನರು ಸೇವಿಸುವಂತಹ ಆಹಾರದ ಗುಣಮಟ್ಟ ಕೂಡ ಅತ್ಯಂತ ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಇಂದಿನ ಯುವಜನತೆ ಹೆಚ್ಚಿನದಾಗಿ ಮನೆಯ ಊಟಕ್ಕಿಂತ ಹೊರಗಿನ ಜಂಕ್ ಫುಡ್(Junk Food) ಗಳನ್ನು ಸೇವಿಸುವುದು ಹೆಚ್ಚಾಗಿ ಬಿಟ್ಟಿದೆ. ಹೀಗಾಗಿ ಗ್ಯಾಸ್ಟಿಕ್ ನಂತಹ ಸಮಸ್ಯೆಗಳು ಎಡಬಿಡದಂತೆ ಕಾಡುತ್ತಿವೆ. ಬನ್ನಿ ಇದರ ಕಾರಣಗಳೇನು ಹಾಗೂ ಇದನ್ನು ನಿವಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಸರಿಯಾಗಿ ನೀರು ಕುಡಿಯದೇ ಇರುವುದು ಮಲ ವಿಸರ್ಜನೆ ಮಾಡದೇ ಇರುವುದು ಹಾಗೂ ಆರೋಗ್ಯದಾಯಕ ಆಹಾರಗಳನ್ನು ಸೇವಿಸದೆ ಇರುವುದು ಕೆಂಪು ಮಾಂಸಹಾರವನ್ನು ಹೆಚ್ಚಾಗಿ ತಿನ್ನುವುದು ಹಸಿರು ಸೊಪ್ಪು(Green Palnts) ತರಕಾರಿಗಳನ್ನು ತಿನ್ನದೇ ಇರುವುದು ಆಹಾರವನ್ನು ಸರಿಯಾಗಿ ಜಗಿಯದೆ ತಿನ್ನುವುದು ಕೂಡ ನಿಮಗೆ ಹೊಟ್ಟೆ ಉಬ್ಬರಿಸುವ ಹಾಗೂ ಗ್ಯಾಸ್ಟಿಕ್ ಸಮಸ್ಯೆಯನ್ನು ತಂದುಕೊಡುತ್ತದೆ. ಇದನ್ನು ಹಾಗೆ ನಿರ್ಲಕ್ಷ್ಯ ವಹಿಸಿ ಬಿಟ್ಟರೆ ನಿಮಗೆ ಸಾಕಷ್ಟು ಸಮಸ್ಯೆಗಳನ್ನು ಕೂಡ ಇದು ತಂದೊಡುತ್ತದೆ.

ಆರೋಗ್ಯದ ಸಮಸ್ಯೆ(Health Problems) ದೊಡ್ಡದಾಗಿರಲಿ ಚಿಕ್ಕದಾಗಿರಲಿ ಅದಕ್ಕೆ ಸರಿಯಾದ ಪರಿಹಾರವನ್ನು ಹುಡುಕಿ ಅದನ್ನು ಅಳವಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸಮಸ್ಯೆಗಳನ್ನು ಎದುರಿಸಬೇಕಾದಂತಹ ಸಾಧ್ಯತೆ ಇರುತ್ತದೆ ಹೀಗಾಗಿ ಗ್ಯಾಸ್ಟಿಕ್ ಸಮಸ್ಯೆಯನ್ನು ನಿವಾರಿಸುವಂತಹ ಪಾನೀಯಗಳು ಯಾವುವು ಎಂಬುದನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ನೀವು ಗ್ರೀನ್ ಟೀ(Green Tea) ಅನ್ನು ಪ್ರತಿದಿನ ಸೇವಿಸುವ ಮೂಲಕ ನಿಮ್ಮ ಜೀರ್ಣಕ್ರಿಯೆಯ ಸಿಸ್ಟಮ್ ಅನ್ನು ಚೆನ್ನಾಗಿ ಸುಲಲಿತವಾಗಿ ನಡೆಯುವಂತೆ ಮಾಡಬಹುದು. ಎರಡನೇದಾಗಿ ನೀರಿನಲ್ಲಿ ನಿಂಬೆಹಣ್ಣು ಹಾಗೂ ಸೌತೆಕಾಯಿಯನ್ನು ಹಾಕುವ ಮೂಲಕ ಆ ನೀರನ್ನು ಕುಡಿಯುವುದು. ಇದು ನಿಮ್ಮ ದೇಹದಲ್ಲಿರುವಂತಹ ಟಾಕ್ಸಿಕ್ ಅಂಶಗಳನ್ನು ಹೊರ ತೆಗೆಯುತ್ತದೆ. ಪುದಿನ ನೀರನ್ನು(Pudina Water) ಕೂಡ ಸೇವಿಸುವ ಮೂಲಕ ನಿಮ್ಮ ದೇಹದಲ್ಲಿರುವಂತಹ ಕೆಟ್ಟ ಅಂಶಗಳನ್ನು ಇದು ಹೋಗಲಾಡಿಸುವಂತೆ ಮಾಡುತ್ತದೆ ಹಾಗೂ ನಿಮ್ಮ ಹೊಟ್ಟೆಯ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುತ್ತದೆ.

Leave a Comment

error: Content is protected !!