
ತೂಕ ಹೆಚ್ಚಿಸಿಕೊಳ್ಳಲು ಸುಲಭ ಉಪಾಯಗಳಿವು
ಸಣ್ಣಗಿರುವುದರಿಂದ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆ, ಹೆಲ್ದಿಯಾಗಿ ದಪ್ಪ ಆಗುವುದು ಹೇಗೆ ಸಣ್ಣಗಿರಲು ಕಾರಣಗಳೇನು ಎನ್ನುವ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ತುಂಬಾ ಸಣ್ಣ ಇದ್ದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಣ್ಣ ವಯಸ್ಸಿನಲ್ಲಿ ಸಾಯುವುದು, ಇನ್ಫೆಕ್ಷನ್ ಸಮಸ್ಯೆಯನ್ನು ಕೂಡ ಎದುರಿಸಬೇಕಾಗುತ್ತದೆ. ಕೆಲವೊಬ್ಬರು ಏನೇ ತಿಂದರೂ ದಪ್ಪ ಆಗುವುದಿಲ್ಲ ಇದಕ್ಕೆ ಕಾರಣ ಈಟಿಂಗ್ ಡಿಸಾರ್ಡರ್ ಇದು ಮಾನಸಿಕ ಕಾಯಿಲೆಯಾಗಿದೆ. ಥೈರಾಯ್ಡ್ ಸಮಸ್ಯೆ, ಟೈಪ್ 1 ಡಯಾಬಿಟಿಸ್ ಇದ್ದರೆ, ಕ್ಯಾನ್ಸರ್ ನಂತಹ ಸಮಸ್ಯೆಯನ್ನು ಸಹ ಅನುಭವಿಸುತ್ತಿದ್ದರೆ ದಪ್ಪ ಆಗುವುದಿಲ್ಲ. ಅನ್ ಹೆಲ್ದಿ ಪುಡ್ ತಿಂದು ದಪ್ಪ ಆಗುವುದರಿಂದ ಹೆಚ್ಚು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಹೆಲ್ದಿ ಪುಡ್ ತಿನ್ನುವುದರಿಂದ ದಪ್ಪ ಆಗಬೇಕಾಗುತ್ತದೆ. ಅದಕ್ಕೆ ಪ್ರತಿದಿನ ತಿನ್ನುವುದಕ್ಕಿಂತ 200-300 ಗ್ರಾಂ ಕ್ಯಾಲೋರಿ ಹೆಚ್ಚು ಸೇವಿಸಬೇಕು, ಪ್ರೊಟೀನ್ ಯುಕ್ತ ಆಹಾರವನ್ನು ಸೇವಿಸಬೇಕು, ಕಾರ್ಬೋಹೈಡ್ರೇಟ್ಸ್ ಹೆಚ್ಚಿರುವ ಆಹಾರವನ್ನು ಸೇವಿಸಬೇಕು, ಡ್ರೈ ಪ್ರೂಟ್ಸ್, ನಟ್ಸ್ ಗೋಡಂಬಿ, ಬಾದಾಮಿ ಇವುಗಳನ್ನು ಹೆಚ್ಚು ಸೇವಿಸಬೇಕು, ಮಿಲ್ಕ್, ಚೀಸ್, ಪನ್ನೀರ್ ಈ ರೀತಿಯ ಆಹಾರವನ್ನು ಹೆಚ್ಚು ಸೇವಿಸಬೇಕು, ಮನೆಯಲ್ಲೇ ಮಾಡಿದ ತುಪ್ಪ, ಬೆಣ್ಣೆ ತಿನ್ನಬೇಕು,ತರಕಾರಿಗಳನ್ನು ಹೆಚ್ಚು ತಿನ್ನಬೇಕು. ಅಲ್ಲದೇ ಪ್ರತಿದಿನ 20 ಮಿನಿಟ್ಸ್ ವ್ಯಾಯಾಮ ಮಾಡಬೇಕು. ಜಿಮ್ ಹೋದರೆ ಒಳ್ಳೆಯದು.
ಊಟದ ಮೊದಲು ನೀರನ್ನು ಕುಡಿಯಬಾರದು ಏಕೆಂದರೆ ಅದರಿಂದ ಊಟ ಜಾಸ್ತಿ ಸೇರುವುದಿಲ್ಲ. ದಿನಕ್ಕಿಂತ ಹೆಚ್ಚು ದೊಡ್ಡದಾದ ಪ್ಲೇಟ್ ಬಳಸಿ, ಆಗಾಗ ನಟ್ಸ್ ಅಂತಹ ಆಹಾರವನ್ನು ಹೆಚ್ಚು ಬಳಸಬೇಕು, ಮಲಗುವ ಮುನ್ನ ಒಂದು ಗ್ಲಾಸ್ ಹಾಲನ್ನು ಕುಡಿಯಬೇಕು. ಬಾಳೆಹಣ್ಣು ತಿನ್ನುವುದರಿಂದ ಶಕ್ತಿ ಬರುವುದರ ಜೊತೆಗೆ ತೂಕ ಹೆಚ್ಚುತ್ತದೆ. ಕಾಫಿ ಕುಡಿಯುತ್ತಿದ್ದರೆ ಅದರಲ್ಲಿ ಹೆಚ್ಚು ಕ್ರೀಮ್ ಬಳಸಿ. 8 ಗಂಟೆ ದಿನಕ್ಕೆ ನಿದ್ರೆ ಮಾಡಬೇಕು, ಸ್ಮೋಕ್ ಮಾಡಬಾರದು, ತಿನ್ನುವ ಆಹಾರದಲ್ಲಿ ಪ್ರೊಟೀನ್ ಮತ್ತು ತರಕಾರಿಗಳನ್ನು ಹೆಚ್ಚು ಬಳಸಬೇಕು. ಸ್ಮೂತಿ ಕುಡಿಯಬೇಕು ಹಾಲು ಇಷ್ಟವಿಲ್ಲದವರು ಬಾಳೆಹಣ್ಣು, ಕರ್ಜೂರ, ಗೋಡಂಬಿ, ಬಾದಾಮಿ, ಕಲ್ಲುಸಕ್ಕರೆ ಇವುಗಳನ್ನು ಗ್ರೈಂಡ್ ಮಾಡಿಕೊಂಡು ಕುಡಿಯಿರಿ ದಿನಕ್ಕೆ ಒಂದು ಗ್ಲಾಸ್ ಕುಡಿಯುವುದರಿಂದ ದಪ್ಪ ಆಗುತ್ತದೆ. ಹೆಚ್ಚು ದಪ್ಪಗಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಹಾಗೂ ಹೆಚ್ಚು ಸಣ್ಣವಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಈ ಮಾಹಿತಿಯನ್ನು ಸಣ್ಣಗಿರುವವರಿಗೆ ತಿಳಿಸಿ.]
