
ಮನೆಯ ಬಾಗಿಲ ತೋರಣವನ್ನು ಸರಳವಾಗಿ ತಯಾರಿಸುವ ವಿಧಾನ
ಅವರವರ ಮನೆಯನ್ನು ಸುಂದರವಾಗಿ ಚೆಂದವಾಗಿ ಇಟ್ಟುಕೊಳ್ಳಬೇಕು ಎನ್ನುವುದು ಎಲ್ಲರಿಗೂ ಇಷ್ಟವೇ. ಇತ್ತೀಚಿನ ದಿನಗಳಲ್ಲಿ ನಾವು ಮನೆಯನ್ನು ಅಲಂಕಾರ ಗಳಿಸುವಂತಹ ಜನರನ್ನು ಹೆಚ್ಚಾಗಿ ಕಾಣಬಹುದು. ಕೆಲವರು ಪೇಟೆಗಳಲ್ಲಿ ಸಿಗುವಂತಹ ಅಲಂಕಾರಿಕ ವಸ್ತುಗಳನ್ನು ತಂದು ಮನೆಯನ್ನು ಅಲಂಕರಿಸಿದರೆ ಇನ್ನೂ ಕೆಲವರು ತಾವೇ ತಮ್ಮ ಕೈಯ್ಯಾರೆ ಸ್ವಂತವಾಗಿ ಯಾವುದಾದರೂ ಕರಕುಶಲ ವಸ್ತುಗಳನ್ನು ತಯಾರಿಸಿ ಮನೆಯನ್ನು ಅಲಂಕಾರ ಗೊಳಿಸುತ್ತಾರೆ. ಮನೆಯಲ್ಲಿಯೇ ಕುಳಿತುಕೊಂಡು ಸುಲಭವಾಗಿ ತಮ್ಮ ಮನೆಯನ್ನು ಅಲಂಕಾರಗೊಳಿಸಿ ಕೊಳ್ಳಲು ಆದರೆ ಯಾವುದಾದರೊಂದು ಅಲಂಕಾರ ವಸ್ತುಗಳನ್ನು ಮಾಡಿಕೊಳ್ಳುವುದು ನಾವೇ ಮಾಡಿದ್ದೇವೆ ಎನ್ನುವ ಒಂದು ರೀತಿಯ ಹೆಮ್ಮೆಯೂ ಹೌದು. ಅಂಥವರಿಗಾಗಿ ನಾವು ಈ ಲೇಖನದಲ್ಲಿ ಉಲ್ಲನ್ ಬಳಸಿಕೊಂಡು ತೋರಣ ಮಾಡುವುದು ಹೇಗೆ ಅನ್ನೋದನ್ನು ತಿಳಿಸಿಕೊಡುತ್ತೇವೆ.
ಮೊದಲು ನಿಮಗೆ ಬೇಕಾದ ಯಾವುದೇ ಎರಡು ಬಣ್ಣದ ಉಲ್ಲನ್ ತೆಗೆದುಕೊಂಡು ಅದನ್ನು ಒಂದು ಹತ್ತರಿಂದ ಹದಿನೈದು ಉದ್ದನೆಯ ಎಳೆಗಳನ್ನು ಮಾಡಿ ಮಧ್ಯದಲ್ಲಿ ಅರ್ಧಕ್ಕೆ ಮಡಚಿಕೊಂಡು ಎರಡು ಬಣ್ಣದ ಉಲ್ಲನ್ ಗೆ ಒಂದು ಗೆಳೆಯ ದಾರವನ್ನು ಹಾಕಿ ಕಟ್ಟಿಕೊಂಡು ಅದನ್ನು ಜಡೆಯಂತೆ ಹೆಣೆದುಕೊಳ್ಳಬೇಕು.
ನಂತರ ಬೇಡವಾದ ನ್ಯೂಸ್ ಪೇಪರ್ ಗಳನ್ನು ತೆಗೆದುಕೊಂಡು ಅದನ್ನು ಕಟ್ ಮಾಡಿಕೊಂಡು ರೋಲ್ ಮಾಡಿಕೊಂಡು ಸ್ಟಿಕ್ ಗಳಾಗಿ ಮಾಡಿಕೊಳ್ಳಬೇಕು. ನಂತರ ಈ ಸ್ಟಿಕ್ ಗಳನ್ನು ಒಂದು ಪುಟ್ಟದಾದ ಪೇಂಟ್ ಡಬ್ಬಕ್ಕೆ ಸುರುಳಿ ಸುತ್ತಿಕೊಂಡು ಒಂದುಕ್ಕೊಂದು ಅಂಟಿಸಿಕೊಳ್ಳುತ್ತ ರೋಲ್ ಮಾಡಿಕೊಳ್ಳಬೇಕು. ಈ ರೀತಿಯಾಗಿ ಏಳರಿಂದ ಎಂಟು ರೋಲ್ ಗಳನ್ನು ಮಾಡಿಟ್ಟುಕೊಳ್ಳಬೇಕು ನಂತರ ಪ್ರತಿಯೊಂದಕ್ಕು ಕೂಡ ನಿಮಗೆ ಬೇಕಾದ ಬಣ್ಣದ ಉಲ್ಲನ್ ತೆಗೆದುಕೊಂಡು ಎರಡು ಎಳೆಯಲ್ಲಿ ರೋಲ್ ನ ಸುತ್ತಲೂ ಉಲ್ಲನ್ ಸುತ್ತುತ್ತ ಬರಬೇಕು. ನಂತರ ಅದನ್ನು ಕೊನೆಯಲ್ಲಿ ಸರಿಯಾಗಿ ಉಲ್ಲನ್ ಬಿಚ್ಚದಂತೆ ಸೀಲ್ ಮಾಡಿಕೊಳ್ಳಬೇಕು ಹಾಗೂ ಇದೇ ರೀತಿ ಎಲ್ಲಾ ರೋಲ್ ಗಳಿಗೂ ಕೂಡ ಉಲ್ಲನ್ ಸುತ್ತಿ ಇಟ್ಟುಕೊಳ್ಳಬೇಕು.
ನಂತರ ಒಂದು ಚೌಕ ರಟ್ಟಿನ ಪಿಸಿಗೆ ಇನ್ನೊಂದು ಬಣ್ಣದ ಉಲ್ಲನ್ ಸುತ್ತಿಕೊಂಡುಅದಕ್ಕೆ 15ರಿಂದ 20 ರೌಂಡ್ ಉಲ್ಲನ್ ಸುತ್ತಿಕೊಳ್ಳಬೇಕು ಹಾಗೂ ಅದನ್ನು ಹೊರತೆಗೆದು ವಿರುದ್ಧ ಬಣ್ಣ ಉಲ್ಲನ್ ಅನ್ನು ಮಧ್ಯದಲ್ಲಿ ಕಟ್ಟಿಕೊಂಡು ಇನ್ನೊಂದು ತುದಿಗೆ ಕಟ್ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಎರಡು ಬಂಗಾರದ ಬಣ್ಣದ ಮಣಿಗಳು ಹಾಗೂ ನಾವು ಈಗಾಗಲೇ ಮಾಡಿಟ್ಟುಕೊಂಡಿರುವ ಒಂದು ರೋಲ್ ಹಾಕಿ ಕಟ್ಟಬೇಕು. ನಂತರ ರೋಲ್ ನ ಇನ್ನೊಂದು ತುದಿಗೆ ಮತ್ತೆ ಅದೇ ಬಣ್ಣದ ಉಲ್ಲನ್ ದಾರವನ್ನು ತೆಗೆದು ಕಟ್ಟಿಕೊಂಡು ಅದಕ್ಕೆ ಮತ್ತೆರಡು ಬಂಗಾರದ ಬಣ್ಣದ ಮಣಿಗಳನ್ನು ಹಾಕಿ ಮೊದಲೇ ಜಡೆಯ ಹಾಗೆ ಹೆಣೆದುಕೊಂಡಿರುವ ಅಂತಹ ಉದ್ದನೆಯ ಉಲ್ಲನ್ ಗೆ ರೆಡಿ ಮಾಡಿಟ್ಟುಕೊಂಡ ಎಲ್ಲಾ ರೋಲ್ ಗಳನ್ನು ಸೂಜಿ ಸಹಾಯದಿಂದ ಕಟ್ಟಬೇಕು. ಈ ರೀತಿಯಾಗಿ ಎಲ್ಲವನ್ನು ಜೋಡಿಸಿ ಕೊಟ್ಟರೆ ಸುಂದರವಾದ ಚಂದದ ಬಾಗಿಲಿಗೆ ಹಾಕುವ ತೋರಣ ಸಿದ್ಧವಾಗುತ್ತದೆ.
