125 ವರ್ಷ ವಯಸ್ಸಾದರೂ ಇನ್ನೂ ಬದುಕಿರುವ ಸ್ವಾಮಿ ಶಿವಾನಂದ. ಇನ್ನೂ ಬದುಕಿರೋದಿಕ್ಕೆ ಇವರ ಆಹಾರ ಪದ್ಧತಿಯೇ ಕಾರಣ. ಹೇಗಿದೆ ಗೊತ್ತಾ ಇವರ ದಿನಚರಿ

ಈ ಯುಗದಲ್ಲಿ ಮನುಷ್ಯ ಅರವತ್ತು ಎಪ್ಪತ್ತು ವರ್ಷ ಬದುಕಿದರೆ ಹೆಚ್ಚು. ಆರೋಗ್ಯವಾಗಿರುವ ಮನುಷ್ಯರೇ ಇಲ್ಲ ಎಲ್ಲಿ ನೋಡಿದರೂ ಅನಾರೋಗ್ಯವೇ ತುಂಬಿದೆ. ಹೊಸ ಯುಗದಲ್ಲಿ ನಾನಾ ರೀತಿಯ ವೈ ರಸ್ ಗಳು ಮನುಷ್ಯ ಕುಲವನ್ನೇ ನಾಶ ಮಾಡುತ್ತಿವೆ. ಇಂತಹ ಯುಗದಲ್ಲೂ ಕೂಡ 125 ವರ್ಷ ವಯಸ್ಸು ಆಗಿರುವ ಮನುಷ್ಯ ಜೀವಂತವಾಗಿದ್ದಾನೆ ಎಂದರೆ ಇದು ಪವಾಡವೇ ಸರಿ. ಈತನ ಹೆಸರು ಸ್ವಾಮಿ ಶಿವಾನಂದ.

ಭಾರತದ ವೆಸ್ಟ್ ಬೆಂಗಾಲ್ ರಾಜ್ಯದ ಸಿಲ್ಹೆಟ್ ಜಿಲ್ಲೆಯಲ್ಲಿ ಸ್ವಾಮಿ ಶಿವಾನಂದ ಅವರು ಹುಟ್ಟಿ 125 ವರ್ಷ ಆಗಿದೆ. ಇವರು 1896 ನೆ ಇಸವಿಯಲ್ಲಿ ಹುಟ್ಟಿದ್ದಾರೆ. 125 ವರ್ಷ ಜೀವಂತವಾಗಿ ಬದುಕಿರುವ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಪದ್ಮಶ್ರೀ ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಈ ಮನುಷ್ಯ 125 ವರ್ಷ ಬದುಕಿದ್ದ ಸಲುವಾಗಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೊಟ್ಟಿಲ್ಲ. ಇವರು ತಮ್ಮ ಸಂಪೂರ್ಣ ಜೀವನವನ್ನು ಸಮಾಜ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ.

ಸ್ವಾಮಿ ಶಿವಾನಂದ ಅವರು 6 ವರ್ಷದ ಮಗು ಇದ್ದಾಗಲೇ ಅವರ ತಂದೆ ತಾಯಿ ತೀರಿಕೊಂಡಿದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡ ನಂತರ ಶಿವಾನಂದ್ ಅವರು ನಬಾದ್ವೀಪ್ ಆಶ್ರಮದಲ್ಲಿ ಬೆಳೆದಿದ್ದಾರೆ. ಆಶ್ರಮದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಲಾಗಿತ್ತು. ಮತ್ತು ಶಿಸ್ತುಬದ್ಧ ಜೀವನವನ್ನು ನಡೆಸುವುದು ಹೇಗೆಂದು ಆಶ್ರಮದಲ್ಲಿ ಶಿವಾನಂದ್ ಕಲಿತಿದ್ದರು. ಶಿಸ್ತುಬದ್ಧ ಮತ್ತು ನಿಯಂತ್ರಿತ ಜೀವನವನ್ನು ಸಾಗಿಸಲು ಇವರು ಯೋಗವನ್ನು ಕಲಿತಿದ್ದಾರೆ.

125 ವರ್ಷ ವಯಸ್ಸಾದರೂ ಸಹ ಈ ಮನುಷ್ಯನಿಗೆ ಸಕ್ಕರೆ ಕಾಯಿಲೆ ಆಗಲಿ, ಬಿಪಿ ಆಗಲಿ ಅಥವಾ ಇನ್ನಿತರ ವಯೋಸಹಜ ಯಾವುದೇ ಕಾಯಿಲೆ ಕೂಡ ಇಲ್ಲ. ಈ ವ್ಯಕ್ತಿ ತನ್ನ 120ನೇ ವಯಸ್ಸಿನಲ್ಲಿ ಮೊದಲ ಬಾರಿ ಆಸ್ಪತ್ರೆಗೆ ಕಾಲಿಟ್ಟಿದ್ದರು. ಪವಾಡ ,ಅದ್ಭುತ – ಆಶ್ಚರ್ಯ ಎನಿಸಿದರೂ ನೀವೆಲ್ಲಾ ಈ ಸತ್ಯವನ್ನು ನಂಬಲೇಬೇಕು. ಇಂತಹ ಗಟ್ಟಿಮುಟ್ಟಾದ ಜೀವನ ನಡೆಸಬೇಕೆಂದರೆ ನಮ್ಮ ಆರೋಗ್ಯ ಪದ್ದತಿ ಮತ್ತು ಶಿಸ್ತುಬದ್ಧ ಜೀವನ ವೇ ಕಾರಣ. ಹಾಗಾದರೆ ಈ ಮನುಷ್ಯನ ದಿನಚರಿ ಮತ್ತು ಆಹಾರ ಪದ್ಧತಿ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಮುಂದೆ ಓದಿ.

ಸ್ವಾಮಿ ಶಿವಾನಂದ ಅವರು ಪ್ರತಿದಿನ ಬೆಳಿಗ್ಗೆ 3 ಗಂಟೆಗೆ ಎದ್ದೇಳುತ್ತಾರೆ ಎದ್ದ ತಕ್ಷಣವೇ ಶಿವಾನಂದ್ ಅವರು 1 ನಿಮಿಷ ಕೂಡ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಎದ್ದ ತಕ್ಷಣ ಸ್ವಾಮಿ ಶಿವಾನಂದ ಅವರು ವಾಕಿಂಗ್ ಮತ್ತು ಯೋಗ ಮಾಡುತ್ತಾರೆ. ಹಾಗೆ ಇವರು ಹಲವಾರು ಜನರಿಗೆ ಯೋಗ ಕೂಡ ಕಲಿಸುತ್ತಾರೆ. ಯೋಗ ಟೀಚರ್ ಆಗಿ ಕೂಡ ಇವರು ಕೆಲಸ ಮಾಡುತ್ತಿದ್ದಾರೆ. 125 ವರ್ಷ ವಯಸ್ಸಾದರೂ ಇವರು ಊರುಗೋಲು ಹಿಡಿದಿಲ್ಲ. ಇವರನ್ನು ಹಿಡಿದುಕೊಂಡು ಓಡಾಡಲು ಜನರು ಬೇಕಾಗಿಲ್ಲ.

ಇನ್ನು ಇವರ ಆಹಾರದ ಪದ್ಧತಿ ವಿಷಯಕ್ಕೆ ಬಂದರೆ ಇವರು ಇಲ್ಲಿಯವರೆಗೆ ಎಣ್ಣೆ ಪದಾರ್ಥಗಳನ್ನು ಮುಟ್ಟೇ ಇಲ್ಲ ಇವರು ಪ್ರತಿದಿನ ಊಟಕ್ಕೆ 2 ರೊಟ್ಟಿ ಬೇಯಿಸಿದ ಅನ್ನ ಮತ್ತು ದಾಲ್ ತಿನ್ನುತ್ತಾರೆ. ಹಾಲು ಮತ್ತು ಹಣ್ಣುಗಳನ್ನು ಸಹ ಇವರು ಮುಟ್ಟುವುದಿಲ್ಲವಂತೆ. ಹಸಿ ತರಕಾರಿಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಇವರು ಅತೀ ಖಾರವಾದ ಪದಾರ್ಥಗಳನ್ನು ಸೇವಿಸುವುದೇ ಇಲ್ಲ . ಹಸಿ ಮೆಣಸಿನಕಾಯಿಯನ್ನು ಆಗಾಗ ತಿನ್ನುತ್ತಾರೆ.

ಇವರ ಆಹಾರ ಪದ್ಧತಿ ಹಾಗೂ ಆರೋಗ್ಯದ ಸ್ಥಿತಿಯನ್ನು ನೋಡಿ ಇಂಟರ್ ನ್ಯಾಷನಲ್ ಮೀಡಿಯಾದವರು ಸಹ ದಂಗಾಗಿದ್ದಾರೆ. ಶೀಘ್ರದಲ್ಲೇ ಜಗತ್ತಿನಲ್ಲಿ ಜೀವಂತವಾಗಿರುವ ಹಿರಿಯ ವ್ಯಕ್ತಿಯೆಂಬ ಗಿನ್ನೆಸ್ ರೆಕಾರ್ಡ್ ಇವರ ಪಾಲಾಗಲಿದೆ. ಸ್ವಾಮಿ ಶಿವಾನಂದ ಅವರ ಹಾಗೆ ನಾವೂ ಕೂಡ ಶಿಸ್ತಿನ ಹಾಗೂ ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸಿದರೆ ನಮ್ಮ ಆಯಸ್ಸನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಈ ವ್ಯಕ್ತಿ ಸಾಮಾನ್ಯ ಜನರಿಗೆ ಕೊಟ್ಟ ಸಂದೇಶ ಏನೆಂದರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಅಂತ.

Leave a Comment

error: Content is protected !!