ಎದೆ ಹಾಲನ್ನು ಕೊಡಿ ಎಂದು ವಿನಂತಿಸಿಕೊಂಡ ರಾಧಿಕಾ ಪಂಡಿತ್. ಕಾರಣ ಏನು ಗೊತ್ತಾ?

ರಾಧಿಕಾ ಪಂಡಿತ್ ಅವರು ಅಚ್ಚ ಕನ್ನಡದ ಹುಡುಗಿ. ಕನ್ನಡ ಧಾರಾವಾಹಿಯಲ್ಲಿ ದಕ್ಷಿಣೋತ್ತರ ಕನ್ನಡ ಸಿನಿಮಾಗಳಲ್ಲಿ ಹೆಸರು ಮಾಡಿ ಯಶಸ್ವಿ ನಟಿಯಾದವರು. ಯಶಸ್ವಿ ಸಿನಿಮಾಗಳನ್ನು ನೀಡಿದರೂ ಕೂಡ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಗೆ ಹೋಗದೆ ಭಾಷಾಭಿಮಾನ ತೋರಿದ ರಾಧಿಕಾ ಪಂಡಿತ್ ಅವರು ನಮಗೆಲ್ಲಾ ಹೆಮ್ಮೆ ತರುವಂಥ ಕೆಲಸ ಮಾಡಿದ್ದಾರೆ . ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ರೀತಿಯ ಕಾಂಟ್ರವರ್ಸಿ ಗಳನ್ನು ಮಾಡಿಕೊಳ್ಳದ ಏಕೈಕ ನಟಿಯೆಂದರೆ ರಾಧಿಕಾ ಪಂಡಿತ್ ಮಾತ್ರ.

ಯುವ ನಟಿಯರಿಗೆ ರಾಧಿಕಾ ಪಂಡಿತ್ ಅವರು ಒಬ್ಬ ಮಾದರಿ ನಟಿಯಾಗಿದ್ದಾರೆ. ಅಷ್ಟೇ ಅಲ್ಲ ರಾಧಿಕಾ ಪಂಡಿತ್ ಅವರು ವೈಯಕ್ತಿಕ ಜೀವನದಲ್ಲಿ ಕೂಡ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಇರುತ್ತಾರೆ. ಯಶ್ ಮತ್ತು ರಾಧಿಕಾ ಅವರು ಕಲಾಕ್ಷೇತ್ರದಲ್ಲಿ ಮಾತ್ರವಲ್ಲದೆ ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಕೂಡ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ರಾಧಿಕಾ ಪಂಡಿತ್ ಅವರು ಈಗ ಇನ್ನೊಂದು ಮಹತ್ವದ ಕೆಲಸಕ್ಕೆ ಕರೆ ನೀಡಿದ್ದಾರೆ.

ಎದೆ ಹಾಲಿನ ಮಹತ್ವವನ್ನು ತಿಳಿಸಲು ರಾಧಿಕಾ ಪಂಡಿತ್ ಅವರು ವಿಡಿಯೋ ಮಾಡಿ ಈ ರೀತಿಯಾಗಿ ತಿಳಿಸಿದ್ದಾರೆ. ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಬೇಕಾದ ಅತ್ಯಂತ ಅವಶ್ಯಕ ಪದಾರ್ಥವೆಂದರೆ ಎದೆಹಾಲು ಎದೆಹಾಲಿನ ಅಂತಹ ಪೌಷ್ಟಿಕ ಅಂಶ ಇರುವ ಆಹಾರ ಇನ್ನೊಂದಿಲ್ಲ. ಪ್ರತಿಯೊಂದು ಮಗುವಿಗೂ ಎದೆ ಹಾಲು ಬೇಕೇ ಬೇಕು. ಎದೆಹಾಲಿನಲ್ಲಿ ರೋಗನಿರೋಧಕ ಶಕ್ತಿ ಹಾಗೂ ನ್ಯೂಟ್ರಿಶನ್ ಗಳು ಇರುತ್ತವೆ. ಅದರ ಕೆಲವು ತಾಯಂದಿರಿಗೆ ಹೆಚ್ಚಾಗಿ ಎದೆ ಹಾಲು ಉತ್ಪಾದನೆ ಆಗುವುದಿಲ್ಲ.

ಕೆಲವು ಮಕ್ಕಳಿಗೆ ಎದೆ ಹಾಲಿನ ಕೊರತೆ ಇರುತ್ತೆ.ಇದಕ್ಕಿಂತ ಮಿಲ್ಕ್ ಬ್ಯಾಂಕ್ ಗಳನ್ನು ನಿರ್ಮಿಸಲಾಗಿದೆ. ಅಗತ್ಯಕ್ಕಿಂತಲೂ ಹೆಚ್ಚಾಗಿ ಇರುವ ಎದೆಹಾಲನ್ನು ತಾಯಂದಿರು ಮಿಲ್ಕ್ ಬ್ಯಾಂಕ್ ಗಳಿಗೆ ದಾನ ಮಾಡಬಹುದು. ಇದರಿಂದ ಅಗತ್ಯವಿರುವ ಮಕ್ಕಳ ಬೆಳವಣಿಗೆಗೆ ಸಹಾಯವಾಗುತ್ತದೆ. ಎದೆ ಹಾಲನ್ನು ದಾನ ಮಾಡಲು ಶಕ್ತಿ ಹೊಂದಿರುವ ಎಲ್ಲಾ ತಾಯಂದಿರಿಗೂ ಎದೆಹಾಲನ್ನು ದಾನ ಮಾಡಿ ಎಂಬ ಕಿವಿಮಾತನ್ನು ರಾಧಿಕಾ ಪಂಡಿತ್ ಹೇಳಿದರು.

ಪ್ರತಿಯೊಂದು ಜಿಲ್ಲೆಗಳಲ್ಲೂ ಮಿಲ್ಕ್ ಬ್ಯಾಂಕ್ ಗಳು ಇರುತ್ತವೆ . ನೀವು ಅಲ್ಲಿಗೆ ಹೋಗಿ ಎದೆಹಾಲನ್ನು ದಾನ ಮಾಡಬಹುದು. ಎದೆಹಾಲಿನ ಎಲ್ಲಾ ಉಪಯೋಗಗಳನ್ನು ಜನರಿಗೆ ಅರ್ಥಮಾಡಿಸಲು ಪಾದಯಾತ್ರೆಯನ್ನು ಅತಿ ಶೀಘ್ರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೂ ಎಕ್ಸ್ ಪರ್ಟ್ ವೈದ್ಯರ ಮೂಲಕ ಎದೆಹಾಲಿನ್ನು ಹೇಗೆ ದಾನ ಮಾಡಬೇಕು ಎಂಬ ಪ್ರಕ್ರಿಯೆಯನ್ನು ರಾಧಿಕಾ ಪಂಡಿತ್ ಅವರು ತಿಳಿಸುವ ಪ್ರಯತ್ನ ಮಾಡಿದ್ದಾರೆ. ರಾಧಿಕಾ ಪಂಡಿತ್ ಅವರ ಈ ಸಮಾಜಮುಖಿ ಕೆಲಸಕ್ಕೆ ನಿಜಕ್ಕೂ ಸೆಲ್ಯೂಟ್. ಹಾಗೂ ಎದೆ ಹಾಲನ್ನು ದಾನ ಮಾಡುವ ಎಲ್ಲಾ ತಾಯಂದಿರೂ ಕೂಡ ನಮನಗಳು.

Leave a Comment

error: Content is protected !!