Real Story: ನಡು ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗಿಗೆ ಈ ಪೊರ್ಕಿ ಮಾಡಿದ್ದೇನು ಗೊತ್ತಾ? ವೀಡಿಯೊ ವೈರಲ್!

Real Story ಇತ್ತೀಚಿನ ದಿನಗಳಲ್ಲಿ ನಿಜಕ್ಕೂ ಕೂಡ ನಮ್ಮ ಸಮಾಜದಲ್ಲಿ ಯಾವುದೇ ಆಚರಣೆಗಳಿಗೂ ಕೂಡ ಮೌಲ್ಯವೇ ಇಲ್ಲದಂತಾಗಿಬಿಟ್ಟಿದೆ ಎಂದರೆ ತಪ್ಪಾಗಲಾರದು ಯಾಕೆಂದರೆ ಕೆಲವೊಂದು ಘಟನೆಗಳು ಅದೇ ರೀತಿಯಲ್ಲಿ ಈಗ ನಡೆಯುತ್ತಿವೆ. ಇನ್ನು ನಮ್ಮ ಯುವ ಜನಾಂಗವು(Youths) ಕೂಡ ದಾರಿತಪ್ಪಿಯಾಗಿದೆ ಎನ್ನುವುದು ಹಲವಾರು ಘಟನೆಗಳ ಮೂಲಕ ಸಾಬೀತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇದಕ್ಕೆ ಪುರಾವೆ ಎನ್ನುವಂತೆ ಹಲವಾರು ಘಟನೆಗಳ ವಿಡಿಯೋ ಕೂಡ ವೈರಲ್ ಆಗಿರುವುದು ಕಂಡುಬರುತ್ತದೆ. ಅವುಗಳಲ್ಲಿ ಒಂದು ವಿಡಿಯೋ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿರುವುದು. ನೀವು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ನೋಡಿರಬಹುದು. ಹಾಗಿದ್ದರೆ ಬನ್ನಿ ಈ ವೈರಲ್ ಆಗಿರುವ ವಿಡಿಯೋದಲ್ಲಿ ಆಗಿರುವುದಾದರೂ ಏನು ಎಂಬುದನ್ನು ತಿಳಿಯೋಣ.

ಹೌದು ಗೆಳೆಯರೇ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗುತ್ತಿರುವ ಈ ವಿಡಿಯೋದಲ್ಲಿ ಬೀದಿ ಬದಿಯಲ್ಲಿ ಓಡಾಡುತ್ತಿರುವ ಯಾವನೋ ಒಬ್ಬ ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಹುಡುಗಿಯನ್ನು ಎಳೆದುಕೊಂಡು ಅವಳ ಕುತ್ತಿಗೆಗೆ ತಾಳಿಯನ್ನು ಬಿಗಿಯುತ್ತಿರುವ ವಿಡಿಯೋ ಈಗಾಗಲೇ ವೈರಲ್ ಆಗಿ ಲಕ್ಷಗಟ್ಟಲೆ ವೀಕ್ಷಣೆಯನ್ನು ಪಡೆಯುತ್ತಿವೆ. ಆ ಹುಡುಗನ ಜೊತೆಗೆ ಅಲ್ಲಿ ಅವನ ಸ್ನೇಹಿತರು ಕೂಡ ಅಲ್ಲಿಯೇ ಇರುತ್ತಾರೆ.

ಸದ್ಯಕ್ಕೆ ಇದು ಎಲ್ಲಿ ನಡೆದಿರುವುದು ಎಂಬುದಾಗಿ ಸ್ಪಷ್ಟವಾಗಿ ಕಂಡುಬಂದಿಲ್ಲ ಆದರೂ ಕೂಡ ಅಲ್ಲಿ ಎರಡು ಪ್ರಶ್ನೆಗಳು ಎದ್ದೇಳುತ್ತವೆ. ಒಂದು ಆ ಹುಡುಗ ಅಥವಾ ಹುಡುಗಿ ಇಬ್ಬರೂ ಕೂಡ ಪ್ರೀತಿಸಿ(Love) ಮನೆಯವರ ವಿರೋಧ ಇರುವ ಕಾರಣ ಅಲ್ಲಿ ಮದುವೆಯಾಗುತ್ತಿರಬಹುದು. ಇಲ್ಲವೇ ವಿಡಿಯೋದಲ್ಲಿ ಆ ಹುಡುಗಿ ಕೊಸರಾಡುತ್ತಿರುವುದನ್ನು ನೋಡಿದರೆ ಅವಳಿಗೆ ಇಷ್ಟ ಇಲ್ಲದಿದ್ದರೂ ಕೂಡ ಆತ ಬಲವಂತವಾಗಿ ತಾಳಿ ಕಟ್ಟುತ್ತಿರಬಹುದು. ಇದರ ಬಗ್ಗೆ ನಿಮಗೆ ತಿಳಿದಿದ್ದಲ್ಲಿ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!