Viral News: ಕೋರ್ಟ್ ನಿಂದಲೇ ಈ ವ್ಯಕ್ತಿಗೆ ಬೀದಿ ಬದಿಯಲ್ಲಿ ಬೆತ್ತಲೆ ಓಡಾಡಲು ಅವಕಾಶ! ಕೇಳಿ ಈ ವಿಚಿತ್ರ ಕಥೆಯನ್ನು.

Viral News: ಬಟ್ಟೆ ಇಲ್ಲದೆ ಬೀದಿಬದಿಯಲ್ಲಿ ಬೆತ್ತಲೆ ಓಡಾಡಿದರೆ ಖಂಡಿತವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜನರು ಹುಚ್ಚ ಎಂಬುದಾಗಿ ಅರಿತು ಧರ್ಮದೇಟು ಹಾಕುವುದಂತೂ ಖಚಿತ. ಆದರೆ ಇನ್ನೊಬ್ಬ ವ್ಯಕ್ತಿಗೆ ನ್ಯಾಯಾಲಯ ಇತರ ಓಡಾಡಲು ಅವಕಾಶ ನೀಡಿದೆ ಎಂದರೆ ಖಂಡಿತವಾಗಿ ನೀವು ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾಗುತ್ತೀರಿ. ಇದು ನಡೆದಿರುವುದು ಸ್ಪೆನ್(Spain) ದೇಶದ ವ್ಯಾಲೆನ್ಸಿಯ ಎನ್ನುವ ಪ್ರದೇಶದಲ್ಲಿ. ಇತನ ಮೇಲೆ ದಂಡವನ್ನು ವಿಧಿಸಲಾಗಿತ್ತು ಆದರೆ ಹೈಕೋರ್ಟ್ ಆತನ ದಂಡವನ್ನು ರದ್ದುಗೊಳಿಸಿದೆ.

ಪಟ್ಟಣದ ಬೀದಿಗಳಲ್ಲಿ 29 ವರ್ಷ ವಯಸ್ಸಿನ ಅಲೆಕ್ಸಾಂಡ್ರೋ ಕೊಲೋಮರ್ ಬಟ್ಟೆ ಇಲ್ಲದೆ ಓಡಾಡುತ್ತಿದ್ದ. ಹೀಗಾಗಿ ಈತನ ಮೇಲೆ ದಂಡ ವಿಧಿಸಿದ್ದರು ಕೂಡ ಬಟ್ಟೆ ಇಲ್ಲದೆ ಓಡಾಡುವವರ ವಿರುದ್ಧ ಯಾವುದೇ ಕಾನೂನು ಇಲ್ಲದಿರುವುದು ಈತನಿಗೆ ಪ್ಲಸ್ ಪಾಯಿಂಟ್ ಆಗಿದೆ. ಈತ ನ್ಯಾಯಾಲಯದ ಒಳಗೆ ಕೂಡ ಪೂರ್ತಿಯಾಗಿ ಬಟ್ಟೆ ಧರಿಸದೆ ಒಳಗೆ ಹೋಗಿದ್ದ. ಇಷ್ಟು ಮಾತ್ರವಲ್ಲದೆ ನನ್ನ ಸೈದ್ಧಾಂತಿಕ ಹಕ್ಕನ್ನು ಉಲ್ಲಂಘಿಸುವ ಕಾರ್ಯ ನಡೆದಿದೆ ಎಂಬುದಾಗಿ ಕೋರ್ಟ್(Court) ನಲ್ಲಿ ತನ್ನ ಪರವಾಗಿ ತಾನೇ ವಾದ ಮಾಡಿದ.

ಇದಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಅಲೆಕ್ಸಾಂಡ್ರೋ ನಾನು 2020ರಿಂದಲೂ ಕೂಡ ಹೀಗೆ ಬಟ್ಟೆ ಇಲ್ಲದೆ ಹೋಡಾಡುತ್ತಿದ್ದೇನೆ ಹೆಚ್ಚಾಗಿ ನನಗೆ ಬೆಂಬಲವೇ ದೊರಕಿದೆ ಒಮ್ಮೆ ಮಾತ್ರ ಕಹಿ ಘಟನೆಯನ್ನು ಅನುಭವಿಸಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಸ್ಪೇನ್(Spain) ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ನಗ್ನತೆಯ ಬಗ್ಗೆ ಬೇರೆ ಬೇರೆ ಆದಂತಹ ಕಾನೂನುಗಳು ಈಗಾಗಲೇ ರಚಿತವಾಗಿವೆ. ಇನ್ನು ಆತ ಓಡಾಡಿರುವ ಪ್ರದೇಶದಲ್ಲಿ ದಂಡ ವಿಧಿಸುವಂತಹ ಅಷ್ಟೊಂದು ಕಟ್ಟುನಿಟಿನ ಕಾನೂನು ಇದರ ಪರವಾಗಿ ಇಲ್ಲದೆ ಇರುವುದು ಆತನಿಗೆ ನ್ಯಾಯಾಲಯದಿಂದಲೂ ಕೂಡ ಯಾವುದೇ ಶಿಕ್ಷೆ ಸಿಗದಂತೆ ಮಾಡಿದೆ.

ಈ ಮೂಲಕ ನಾವು ಅರ್ಥಮಾಡಿಕೊಳ್ಳಬಹುದಾಗಿರುವುದು ಏನೆಂದರೆ ಸ್ಪೇನ್ ದೇಶದಲ್ಲಿ ಅಷ್ಟೊಂದು ಕಟ್ಟುನಿಟಿನ ಕಾನೂನು ಕ್ರಮ ಇದರ ಕುರಿತಂತೆ ಇಲ್ಲ ಎನ್ನುವುದು. ಹೇಗಿದ್ದರೂ ಕೂಡ ಕೆಲವು ವರ್ಗದ ಜನರಿಗೆ ಅವರ ಎದುರಿಗೆ ಹೀಗೆ ಯಾವುದೋ ಅಪರಿಚಿತ ವ್ಯಕ್ತಿಗಳು ಬಟ್ಟೆ ಇಲ್ಲದೆ ಓಡಾಡುವುದು ಸಾಕಷ್ಟು ಕಸಿವಿಸಿಯನ್ನು ತರಬಹುದು ಎನ್ನುವುದು ಕೆಲವರ ಅಭಿಪ್ರಾಯವಾಗಿದೆ ಇದನ್ನು ಕೂಡ ಕಾನೂನು(Court) ಪರಿಗಣಿಸಬೇಕು.

Leave a Comment

error: Content is protected !!