ಬಾಲ್ಯದ ಸ್ನೇಹಿತರು ಮದುವೆ ಆಗಬೇಕು ಅನ್ನುವಷ್ಟರಲ್ಲಿಯೇ ನಡೆದು ಹೋಯಿತು ಹೈ ಡ್ರಾಮಾ

‘ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು’ ಎಂಬ ಹಾಡಿದೆ. ಇಲ್ಲೊಂದು ಜೋಡಿ ಯಾರಿಗೂ ಹೆದರದೆ ಓಡಿಹೋಗಿ ಮದುವೆಯಾಗಿದ್ದಾರೆ. ಮದುವೆ ಎಂಬುದು 2 ಕುಟುಂಬಗಳ ಒಂದುಗೂಡುವಿಕೆಯಂತೆ. ಪ್ರೀತಿಸಿದವರು ವಿವಾಹವಾಗಲು ಒಪ್ಪಿದರೆ ಸಾಲದು. ಅವರ ತಂದೆ-ತಾಯಿ, ಕುಟುಂಬಸ್ಥರು ಒಪ್ಪಬೇಕು. ಇಲ್ಲದಿದ್ದರೆ ಜಗಳ, ರಂಪಾಟಗಳು ನಡೆಯುವುದು ಖಚಿತ.

ಚಿಕ್ಕಬಳ್ಳಾಪುರ ನಗರದ, ವಾಪಸಂದ್ರ ಗ್ರಾಮದ 20 ವರ್ಷದ ನಯನ ಎಂಬ ಹುಡುಗಿಯು ಚಿಕ್ಕಬಳ್ಳಾಪುರ ನಗರದ ಟೌನ್ ಹಾಲಗ್ ನ ನಿವಾಸಿಯಾದ ರಾಮು ಎಂಬಾತನನ್ನು ವಿವಾಹವಾಗಿದ್ದಾಳೆ. ಆತನಿಗೆ 22 ವರ್ಷ. ಪ್ರೌಢಶಾಲೆಯಿಂದಲೂ ಇವರಿಬ್ಬರು ಒಳ್ಳೆಯ ಸ್ನೇಹಿತರು. ಕಾಲೇಜು ಕಲಿಯುತ್ತಿರುವಾಗಲೇ ಸ್ನೇಹವು ಪ್ರೀತಿಯಾಗಿ ತಿರುಗಿತ್ತು. ಇವರಿಬ್ಬರೂ ಗಾಢವಾಗಿ ಪ್ರೀತಿಸಿ, ಮದುವೆಯಾಗಬೇಕೆಂದು ನಿರ್ಧರಿಸಿದರು. ನಯನ ವಿದ್ಯಾಭ್ಯಾಸದಲ್ಲಿ ಮುಂದಿದ್ದಳು. ಆಕೆ ಬಿ ಎಸ್ ಸಿ ಪದವೀಧರೆ. ಕಲಿಯುವುದರಲ್ಲಿ ಹಿಂದಿದ್ದ ರಾಮುನೊಂದಿಗೆ ಹೆಚ್ಚಾದ ಮಾತು, ಓಡಾಟಗಳಿಗೂ ಮನೆಯವರಿಂದ ವಿರೋಧವಿತ್ತು. ಇಬ್ಬರೂ ಒಟ್ಟಿಗೆ ಬಾಳಬೇಕೆಂದು ನಿರ್ಧರಿಸಿದ ವಿಚಾರವಾಗಿ ನಯನಾವರ ಮನೆಯಿಂದ ತೀವ್ರವಾಗಿಯೇ ವಿರೋಧ ವ್ಯಕ್ತವಾಯಿತು.

ಇದರಿಂದ ಬೇಸತ್ತ ಇಬ್ಬರೂ ಮನೆಯಿಂದ ಬಂದು ದೇವಸ್ಥಾನದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಅಷ್ಟರಲ್ಲಿ ನಯನ ಅವರ ತಂದೆ ಶ್ರೀನಿವಾಸ್ ಊರಿನ ಚಿಕ್ಕಬಳ್ಳಾಪುರದ ಮಹಿಳಾ ಠಾಣೆಯಲ್ಲಿ ‘ಮಗಳು ಕಾಣೆಯಾಗಿದ್ದಾಳೆ’ ಎಂದು ದೂರು ನೀಡಿದ್ದರು. ವಿವಾಹಿತರು ಕಾರಿನಲ್ಲಿ ಬಂದು ಇಳಿದು ಪೊಲೀಸ್ ಠಾಣೆಯ ಮೆಟ್ಟಿಲನ್ನು ಹತ್ತಬೇಕು ಎನ್ನುವಷ್ಟರಲ್ಲಿ ವಧುವಿನ ಕಡೆಯವರು ಪೊಲೀಸ್ ಠಾಣೆಯ ಗೇಟ್ ಗೆ ಬ್ಯಾರಿಕೇಡ್ಗಳನ್ನು ಹಾಕಿ, ನವದಂಪತಿಗಳನ್ನು ಕಾರಿನಿಂದ ಇಳಿಸಿ ಧರಧರನೆ ಎಳೆದೊಯ್ದರು.

ನಯನಾಳ ಅಣ್ಣ ಇವರನ್ನು ನೋಡುತ್ತಿದ್ದಂತಯೇ ಕೋಪ ತಾಳಲಾರದೆ, ವಧು ವರರ ಕಾರಿಗೆ ಕಲ್ಲನ್ನು ಎತ್ತಿ ಹಾಕಿ ರಾಮು ವಿನೊಂದಿಗೆ ಜಗಳ ಮಾಡಿ ಪೋಲಿಸ್ ಠಾಣೆಯ ಎದುರೇ ರಂಪಾಟ ಮಾಡಿದ್ದಾನೆ. ‘ನಯನ ವಿದ್ಯಾವಂತೆಯಾಗಿದ್ದರೂ,ವಯಸ್ಸಿನಲ್ಲಿ ಚಿಕ್ಕವಳು. ರಾಮುವೇ ಪ್ರೀತಿ, ಪ್ರೇಮ ಎಂದು ಆಕೆಯ ತಲೆಕೆಡಿಸಿ ಕರೆದುಕೊಂಡು ಹೋಗಿದ್ದಾನೆ. ಈ ಮದುವೆ ಸಮಂಜಸವಲ್ಲ. ಆಕೆಯನ್ನು ರಾಮುನಿಂದ ಬಿಡಿಸಿಕೊಡಿ’ ಎಂದು ನಯನಾಳ ಸಂಬಂಧಿಕರು ಪೊಲೀಸರಲ್ಲಿ ಬೇಡಿಕೊಂಡಿದ್ದಾರಂತೆ.

ಕಾನೂನಿನ ಪ್ರಕಾರ ಇವರಿಬ್ಬರದು ಮದುವೆಯ ವಯಸ್ಸು. ಅಲ್ಲದೆ ತಮಗೆ ಇಷ್ಟ ಬಂದವರ ಜೊತೆಯಲ್ಲಿ ಬದುಕಲು ಎಲ್ಲರಿಗೂ ಹಕ್ಕಿದೆ. ಇಷ್ಟೊಂದು ಕೂಗಾಟ ಎಳೆದಾಟಗಳು ಚಿಕ್ಕಬಳ್ಳಾಪುರದ ಪೊಲೀಸ್ ಠಾಣೆಯ ಎದುರಲ್ಲೇ ನಡೆಯುತ್ತಿದ್ದರೂ, ಪೋಲಿಸರು ಗಲಾಟೆಯ ಮಧ್ಯೆ ಪ್ರವೇಶಿಸದೆ, ತಮಗೆ ಬೇಡದ ವಿಷಯ ಎಂಬಂತೆ ವರ್ತಿಸಿದ್ದಾರಂತೆ.

Leave a Comment

error: Content is protected !!