ರವಿಚಂದ್ರನ್ ಅವರು ಸಾಲ ಮಾಡಿ ಮನೆ ಮಾರಿರುವ ವಿಷಯ ಬಗ್ಗೆ ಅವರು ಪತ್ನಿ ಹೇಳಿದ್ದೇನು ಗೊತ್ತಾ?

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇತ್ತೀಚಿಗಷ್ಟೇ ತಾವು ಹುಟ್ಟಿ ಬೆಳೆದಿರುವ ಮನೆಯನ್ನು ಮಾಡಿರುವ ಕುರಿತಂತೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿಮಾಧ್ಯಮಗಳಲ್ಲಿ ಅಪಸ್ವರ ಎನಿಸುವಂತಹ ಗಾಳಿ ಸುದ್ದಿಗಳು ಹರಿದಾಡತೊಡಗಿದವು. ಆಗ ರವಿಚಂದ್ರನ್ ಅವರು ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರ ವೇದಿಕೆಯಲ್ಲಿ ಎಲ್ಲಾ ವಿಚೋರಗಳಿಗೆ ಪರದೆ ಎಳೆಯುವಂತೆ ಭಾವನಾತ್ಮಕವಾಗಿ ಮಾತನಾಡಿದ್ದು ಈಗ ಎಲ್ಲರಿಗೂ ಕಣ್ಣಂಚಿನಲ್ಲಿ ನೀರು ತರಿಸುವಂತೆ ಮಾಡಿದೆ.

ಹೌದು ನಾನು ಮನೆ ಮಾರಿರುವುದು ನಿಜ ಹಲವಾರು ಸಿನಿಮಾಗಳಲ್ಲಿ ಸಾಲು ಸಾಲಾಗಿ ಸೋತಿದ್ದೇನೆ ಆದರೆ ಸೋತಿರುವುದು ನಿಮಗಾಗಿ. ನಾನು ಸಿನಿಮಾದಲ್ಲಿ ಹಣವನ್ನು ಗಳಿಸಿದಾಗಲೆಲ್ಲ ಅದನ್ನು ನನ್ನ ಆಡಂಬರವನ್ನು ಹೆಚ್ಚು ಮಾಡಿಕೊಳ್ಳಲು ಬಳಸುವ ಅದನ್ನು ಮತ್ತೊಮ್ಮೆ ಸಿನಿಮಾ ಮಾಡಿ ನಿಮ್ಮನ್ನು ರಂಜಿಸಲು ಉಪಯೋಗಿಸಿದ್ದೇನೆ ಆದರೆ ಅದರಲ್ಲಿ ನಾನು ಸೋತಿದ್ದೇನೆ ಎಂಬುದಾಗಿ ನನಗೆ ಬೇಸರವಿದೆ ಎಂಬುದಾಗಿ ರವಿಚಂದ್ರನ್ ಅವರು ಹೇಳಿದ್ದಾರೆ.

ಇದರ ಕುರಿತಂತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇನ್ನು ರವಿಚಂದ್ರನ್ ಅವರ ಪತ್ನಿ ಆಗಿರುವ ಸುಮತಿ ಅವರು ಕೂಡ ಈ ಹೇಳಿಕೆಗೆ ಹಾಗೂ ಘಟನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಯಜಮಾನರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಸೋತು ಹಣವನ್ನು ಕಳೆದುಕೊಂಡಿರಬಹುದು ಆದರೆ ಮುಂದೊಂದು ದಿನ ಖಂಡಿತವಾಗಿ ಅವರು ನಿಮಗಾಗಿ ನೋಡಲು ಚೆನ್ನಾಗಿ ಇರುವಂತಹ ಸಿನಿಮಾವನ್ನು ಮಾಡಿ ಗೆದ್ದೇ ಗೆಲ್ಲುತ್ತಾರೆ ಎಂಬ ನಂಬಿಕೆ ನನ್ನಲ್ಲಿ ಇದೆ ಎಂಬುದಾಗಿ ಅವರು ಹೇಳಿದ್ದಾರೆ. ಅವರು ಸೋತಿರುವುದು ಗೆದ್ದಿರುವುದು ಎಲ್ಲವು ನಿಮಗಾಗಿ ಎಂಬುದಾಗಿ ಈ ಸಂದರ್ಭದಲ್ಲಿ ಅವರು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಸಿನಿಮಾ ಅಭಿಮಾನಿಗಳನ್ನು ಹಾಗೂ ವಿಶೇಷ ವರ್ಗದ ಸಿನಿಮಾ ಮೇಕಿಂಗ್ ಅನ್ನು ಹೊಂದಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲಾಗಿ ಸೋಲುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ದುಃಖ ತರಿಸುವಂತಹ ವಿಚಾರ. ಕನ್ನಡ ಚಿತ್ರರಂಗದ ರಣಧೀರ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾವನ್ನು ನೀಡುವ ಮೂಲಕ ಗೆದ್ದು ಬರಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!