Kgf Babu: ತನ್ನ ಸ್ವಂತ ದುಡ್ಡಿನಿಂದಲೇ ಸಿಲಿಂಡರ್ ಗ್ಯಾಸ್ ಲೈಫ್ ಲಾಂಗ್ ಫ್ರೀ ಕೊಡ್ತೀನಿ ಎಂದ ಕೆಜಿಎಫ್ ಬಾಬು! ಎಲ್ರೂ ಶಾ’ ಕ್!

Trending News ಆಗಾಗ ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವ್ಯಕ್ತಿಗಳ ಕುರಿತಂತೆ ನಮಗೆ ಮೊದಲ ಬಾರಿಗೆ ತಿಳಿದು ಬರುತ್ತದೆ. ಅವರ ಅಸಲಿಯತ್ತು ಏನಾಗಿರುತ್ತೋ ಗೊತ್ತಿಲ್ಲ ಆದರೆ ಅಲ್ಲಂತೂ ಅವರ ವೈಭವಿಕರಣ ನಡೆದಿರುತ್ತದೆ. ಅದೇ ರೀತಿಯ ವ್ಯಕ್ತಿಗಳ ಸಾಲಿಗೆ ಕೆಜಿಎಫ್ ಬಾಬು(KGF Babu) ಸೇರಿಕೊಳ್ಳುತ್ತಾರೆ. ಇವರು ಮೊದಲು ಸುದ್ದಿಯಾಗಿದ್ದು ಅಮಿತಾಬ್ ಬಚ್ಚನ್(Amitabh Bachchan) ರವರ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿರುವ ವಿಚಾರಕ್ಕಾಗಿ.

ಎಲ್ಲರೂ ಕೂಡ ಕೆಜಿಎಫ್ ಬಾಬು ಅಮಿತಾಬ್ ಬಚ್ಚನ್ ಅವರ ಬಳಿ ಕೋಟಿ ಹಣ ನೀಡಿ ಅವರ ರೋಲ್ಸ್ ರಾಯ್ಸ್ ಕಾರನ್ನು(Rolls Royce Car) ಖರೀದಿಸಿದ್ದಾರೆ ಎಂಬುದಾಗಿ ಭಾವಿಸಿದ್ದಾರೆ. ಇದು ಎಷ್ಟರಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ಯಾರು ಕೂಡ ವಿಮರ್ಶಿಸಲು ಹೋಗಿಲ್ಲ. ಇನ್ನು ಇವರು ರಾಜಕಾರಣದಲ್ಲಿ ಕೂಡ ಸಕ್ರಿಯ ರಾಗಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್(Congress) ಪರ ಚುನಾವಣೆಯಲ್ಲಿ ನಿಂತು ಸೋತಿರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇನ್ನು ಈಗ ಈ ಬಾರಿಯ ಚುನಾವಣೆ ಹತ್ತಿರ ಬರುತ್ತಿದಂತೆ ಕೆಜಿಎಫ್ ಬಾಬು ಈಗ ಮತ್ತೊಂದು ಆಫರ್ ಅನ್ನು ಜನರಿಗೆ ನೀಡುವತ್ತ ಘೋಷಣೆ ಮಾಡಿದ್ದಾರೆ.

ಹೌದು ಗೆಳೆಯರೇ ಇತ್ತೀಚಿಗಷ್ಟೇ ಉಪ್ಪಾರಹಳ್ಳಿಯ ವ್ಯಾಪ್ತಿಗೆ ಕೆಜಿಎಫ್ ಬಾಬು(KGF Babu) ಭೇಟಿ ನೀಡಿದ್ದು ಅಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಅಂದರೆ ಸರಿ ಸುಮಾರು 23,000 ಜನರಿಗೆ ಅಥವಾ ಕುಟುಂಬಗಳಿಗೆ ಲೈಫ್ ಲಾಂಗ್ ಎಲ್ಪಿಜಿ ಗ್ಯಾಸ್(LPG Gas) ಅನ್ನು ಉಚಿತವಾಗಿ ನೀಡುವಂತಹ ಭರವಸೆಯನ್ನು ವ್ಯಕ್ತಪಡಿಸಿದ್ದು ಈಗಾಗಲೇ ಚೆಕ್ ಮುಖಾಂತರ ಹಣವನ್ನು ಕೂಡ ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಕೆಲವರು ಇದನ್ನು ಚುನಾವಣೆ ಪ್ರಚಾರದ ಸರ್ಕಸ್ ಎಂದರೆ ಇನ್ನು ಕೆಲವರು ಒಳ್ಳೆ ಕೆಲಸ ಮಾಡುತ್ತಿದ್ದೀರಾ ಬಾಬು ಅವರೇ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ.

Leave a Comment

error: Content is protected !!