Kumaraswamy: ನಿಮ್ಮದು ಲವ್ ಮ್ಯಾರೇಜಾ ಅರೆಂಜ್ ಮ್ಯಾರೇಜಾ ಎಂಬ ಪ್ರಶ್ನೆಗೆ ಎಚ್ ಡಿ ಕುಮಾರಸ್ವಾಮಿ ನೀಡಿದ ಉತ್ತರ ಎಂಥದ್ದು ನೀವೆ ನೋಡಿ!

HD Kumaraswamy ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಹೆಸರುಗಳು ಇದುವರೆಗೂ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ದನ್ನು ಮಾಡಿದೆ. ಅವರಲ್ಲಿ ಪ್ರಮುಖವಾಗಿ ಕೇಳಿ ಬರುವಂತಹ ಹೆಸರುಗಳಲ್ಲಿ ಎಚ್ ಡಿ ಕುಮಾರಸ್ವಾಮಿ(HD Kumaraswamy) ಅವರ ಹೆಸರು ಕೂಡ ಒಂದಾಗಿದೆ. ಕೇವಲ ರಾಜಕಾರಣದಲ್ಲಿ ಮಾತ್ರವಲ್ಲದೆ ಸಿನಿಮಾ ರಂಗದಲ್ಲಿ ಕೂಡ ನಿರ್ಮಾಪಕರಾಗಿ ಕೂಡ ಕುಮಾರಸ್ವಾಮಿಯವರು ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಹಲವಾರು ಸಿನಿಮಾಗಳನ್ನು ಕೂಡ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹಿಡಿತವನ್ನು ಹೊಂದಿದ್ದಾರೆ.

ಇನ್ನು ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ದ್ವಂದ್ವಗಳು ಇದ್ದರೂ ಕೂಡ ಒಬ್ಬ ರಾಜಕಾರಣಿಯಾಗಿ ಈಗಾಗಲೇ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಎಚ್ ಡಿ ಕುಮಾರಸ್ವಾಮಿ(Kumaranna) ಅವರು ಭಾಗವಹಿಸಿದ್ದು ಈ ಸಂದರ್ಭದಲ್ಲಿ ಅವರ ಜೀವನದ ಕುರಿತಂತೆ ಹಲವಾರು ಪ್ರಶ್ನೆಗಳನ್ನು ಕೇಳಲಾಗಿತ್ತು. ಹಾಗಿದ್ದರೆ ಅದಕ್ಕೆ ಅವರು ನೀಡಿರುವಂತಹ ಉತ್ತರಗಳನ್ನು ತಿಳಿಯೋಣ ಬನ್ನಿ.

ಅವರ ತಾಯಿಯ ಬಗ್ಗೆ ಮಾತನಾಡಿದಾಗ ನಾನು ರಾಜ್ಯದ ಜನತೆಗೆ ರಾಜಕಾರಣಿಯಾಗಿ ನೀಡಿರುವಂತಹ ಸೇವೆಗಳನ್ನು ಒಬ್ಬ ತಾಯಿಯಾಗಿ ಅವರು ಹೆಮ್ಮೆಯಿಂದ ನೀನು ನಮ್ಮ ಕುಟುಂಬದ ಮರ್ಯಾದೆಯನ್ನು ಉಳಿಸಿದ್ದೀಯ ಎಂಬುದಾಗಿ ಹೇಳುತ್ತಾರೆ ಎಂದು ಹೆಮ್ಮೆಯಿಂದ ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ. ಇನ್ನು ಕುಮಾರಸ್ವಾಮಿ ಅವರಿಗೆ ನಿಮ್ಮದು ಹಾಗೂ ಅನಿತಾ ಕುಮಾರಸ್ವಾಮಿ(Anitha Kumaraswamy) ಅವರ ಮದುವೆ ಲವ್ ಮ್ಯಾರೇಜಾ ಅರೆಂಜ್ ಮ್ಯಾರೇಜಾ ಎಂದು ಕೇಳಿದಾಗ ಕುಮಾರಸ್ವಾಮಿ ಅವರು ನೀಡಿದ ಉತ್ತರ ಏನು ಗೊತ್ತಾ.

ಹೌದು ಈ ಪ್ರಶ್ನೆಗೆ ಉತ್ತರ ನೀಡುತ್ತಾ ಕುಮಾರಸ್ವಾಮಿ ಅವರು ನಮ್ಮ ಮದುವೆ ಎಲ್ಲಾ ನಮ್ಮ ತಾಯಿಯ ನಿರ್ಧಾರವಾಗಿತ್ತು ಹೀಗಾಗಿ ಅದರಲ್ಲಿ ಯಾವುದೇ ನನಗೆ ಅಸಮಾಧಾನ ಇರಲಿಲ್ಲ ಇಂದಿಗೂ ಕೂಡ ನಾವು ಚೆನ್ನಾಗಿ ಜೀವನ ನಡೆಸುತ್ತಿದ್ದೇವೆ. ಮದುವೆಯಾದ ನಂತರ ತಾಯಿಯ ಜೊತೆಗೆ ನನ್ನ ಬಾಂಧವ್ಯ ಇನ್ನಷ್ಟು ಬಿಗಿಯಾಗಿತ್ತು ಹಾಗೂ ನನ್ನ ಎಲ್ಲಾ ಕಾರ್ಯಗಳಿಗೂ ಕೂಡ ಅವರ ಬೆಂಬಲ ಹಾಗೂ ಆಶೀರ್ವಾದ ಇತ್ತು ಎಂಬುದಾಗಿ ತಮ್ಮ ತಾಯಿಯ ಕುರಿತಂತೆ, ಕುಮಾರಸ್ವಾಮಿಯವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Leave a Comment

error: Content is protected !!