Rashmika: ಮುಖ ಚೆನ್ನಾಗಿ ಕಾಣಿಸಬೇಕು ಎಂದು ಮಾಡಬಾರದ ಕೆಲಸ ಮಾಡಿಕೊಂಡ್ರಾ ನಟಿ ರಶ್ಮಿಕ ಮಂದಣ್ಣ?

Rashmika Mandanna ನಟಿ ರಶ್ಮಿಕಾ(Actress Rashmika) ಮಂದಣ್ಣ ಅತ್ಯಂತ ಕಡಿಮೆ ಸಮಯದಲ್ಲಿ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಗಳ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಸಾಧನೆಯನ್ನು ಮಾಡಿದವರು. ನಿಜಕ್ಕೂ ಕೂಡ ಅವರ ವಯಸ್ಸಿಗೆ ಅವರು ಮಾಡಿರುವಂತಹ ಸಾಧನೆ ಹಾಗೂ ಮಾಡುತ್ತಿರುವ ಸಿನಿಮಾಗಳ ಪ್ರಭಾವ ನಿಜಕ್ಕೂ ಕೂಡ ದೊಡ್ಡದೇ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಕುರಿತಂತೆ ಒಂದು ಸುದ್ದಿ ಓಡಾಡುತ್ತಿದ್ದು ಇದೇ ವಿಚಾರವಾಗಿ ನೆಟ್ಟಿಗರು ಕೂಡ ರಶ್ಮಿಕ ಮಂದಣ್ಣ(Rashmika Mandanna) ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ರಶ್ಮಿಕ ಮಂದಣ್ಣ ಒಬ್ಬ ಸುಂದರ ನಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅವರ ಸೌಂದರ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಂಚಮಟ್ಟಿಗೆ ಬದಲಾವಣೆ ಕಂಡು ಬಂದಿದೆ ಎನ್ನುವುದಾಗಿ ತಿಳಿದುಬಂದಿದೆ.

ಹೌದು ಮಿತ್ರರೇ, ರಶ್ಮಿಕ ಮಂದಣ್ಣ ಅವರ ಮುಖದಲ್ಲಿ ಕೊಂಚಮಟ್ಟಿಗೆ ಬದಲಾವಣೆ ಕಂಡು ಬಂದಿದ್ದು ಎಲ್ಲರೂ ಕೂಡ ಇದನ್ನು ರಶ್ಮಿಕಾ ಮಂದಣ್ಣ ಅವರು ಪ್ಲಾಸ್ಟಿಕ್ ಸರ್ಜರಿ(Plastic Surgery) ಮಾಡಿಸಿಕೊಂಡಿರಬಹುದು ಎನ್ನುವುದಾಗಿ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ ರಶ್ಮಿಕ ಮಂದಣ್ಣ ಅವರ ಅಭಿಮಾನಿಗಳು ಇದಕ್ಕೆ ನೀಡುತ್ತಿರುವಂತಹ ಕಾರಣವೇ ಬೇರೆಯಾಗಿದೆ ಅದನ್ನು ಕೂಡ ತಿಳಿದುಕೊಳ್ಳೋಣ ಬನ್ನಿ.

ರಶ್ಮಿಕ ಮಂದಣ್ಣ(Rashmika Mandanna) ಅಭಿಮಾನಿಗಳ ಪ್ರಕಾರ ಇದು ಪ್ಲಾಸ್ಟಿಕ್ ಸರ್ಜರಿ ಅಲ್ಲ ಬದಲಾಗಿ ಮೇಕಪ್ ಮಾಡೋ ವಿಧಾನದಲ್ಲಿ ಬೇರೆ ಸ್ಟೈಲ್ ಆಗಿದ್ದು ಇದಕ್ಕಾಗಿ ಮುಖದಲ್ಲಿ ಕೊಂಚಮಟ್ಟಿಗೆ ಬದಲಾವಣೆ ಕಂಡು ಬಂದಂತೆ ಕಾಣಿಸುತ್ತದೆ ಎಂಬುದಾಗಿ ತಮ್ಮ ನಟಿಯ ಪರವಾಗಿ ಬ್ಯಾಟ್ ಬೀಸಿದ್ದಾರೆ. ಅದೇನೇ ಇರಲಿ ಈ ವಿಚಾರದ ಕುರಿತಂತೆ ಯಾರು ಕೂಡ ನಿಜವಾದ ವಿಚಾರವನ್ನು ಹೊರ ಹಾಕುವುದಕ್ಕೆ ಸಿದ್ಧರಿಲ್ಲ ಹೀಗಾಗಿ ನಮಗೆ ಸಮಾಧಾನ ಆಗುವಂತಹ ಉತ್ತರವನ್ನು ನಾವೇ ನೀಡಿಕೊಳ್ಳಬೇಕಾಗಿದೆ.

Leave a Comment

error: Content is protected !!