ವಿಶ್ವದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಕುರಿ. ಸೇಲ್ ಆಗಿರೋ ರೇಟ್ ಕೇಳಿದರೆ ಶಾಕ್ ಆಗಿತ್ತೀರಿ

ಸಾಮಾಜಿಕ ಜಾಲತಾಣಗಳಲ್ಲಿ ನಾವು ಆಗಾಗ ಕೆಲವೊಂದು ಚಿತ್ರ ವಿಚಿತ್ರವಾದ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಒಂದು ವಿಚಾರದ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಹೌದು ನಾವು ಮಾತನಾಡಲು ಹೊರಟಿರುವುದು ದುಬಾರಿ ಬೆಲೆಯ ಕುರಿಯ ಮಾರಾಟದ ಬಗ್ಗೆ.

ಆಸ್ಟ್ರೇಲಿಯನ್ ವೈಟ್ ಸ್ಟಡ್ ಕುರಿಯನ್ನು ಸಾಮಾಜಿಕ ಬರೋಬರಿ ಎರಡು ಕೋಟಿ ರೂಪಾಯಿ ಬೆಲೆಗೆ ಖರೀದಿಸಲಾಗಿದೆ ಎಂಬುದಾಗಿ ಜಾಲತಾಣಗಳಲ್ಲಿ ವರದಿಯಾಗಿದೆ. ಇನ್ನು ಈ ದುಬಾರಿ ಬೆಲೆಗೆ ಈ ಕುರಿಯನ್ನು ಖರೀದಿಸಿರುವುದು ಆಸ್ಟ್ರೇಲಿಯನ್ ವೈಟ್ ಸಿಂಡಿಕೇಟ್ ಸಂಸ್ಥೆ. ಈ ಸಿಂಡಿಕೇಟ್ ಸಂಸ್ಥೆಯ ಪ್ರತಿಯೊಬ್ಬ ಸದಸ್ಯರು ಕೂಡ ಈ ಕುರಿಯನ್ನು ನೋಡಿಕೊಳ್ಳುತ್ತಾರೆ ಎಂಬುದಾಗಿ ಸಿಂಡಿಕೇಟ್ ನ ಸದಸ್ಯ ಆಗಿರುವ ಪೆಡ್ರಿಕ್ ಹೇಳಿದ್ದಾರೆ.

ಈ ಕುರಿ ಅತ್ಯಂತ ವೇಗವಾಗಿ ಬೆಳೆಯುತ್ತದೆ ಇದೇ ರೀತಿಯ ಇತರ ಕುರಿಗಳನ್ನು ಬಲಪಡಿಸಲು ತಳಿ ಶಾಸ್ತ್ರವನ್ನು ಬಳಸಲಾಗುತ್ತದೆ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಆಶ್ಚರ್ಯ ಎನ್ನುವಂತೆ ಈ ಗುರಿಯನ್ನು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಬಹುದು ಎಂಬುದನ್ನು ಆ ಕುರಿಯ ಮಾಲೀಕ ಆಗಿರುವ ಗಿಲ್ಮೊರ್ ಗೆ ಕೂಡ ಇಂದಿಗೂ ನಂಬಲು ನಿಜಕ್ಕೂ ಕೂಡ ಸಾಧ್ಯವಾಗುತ್ತಿಲ್ಲ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಕುರಿಗಿರುವ ಬೇಡಿಕೆಯನ್ನು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದೆ.

ಇನ್ನು ಎರಡು ಕೋಟಿ ರೂಪಾಯಿ ಬೆಲೆಗೆ ಮಾರಾಟವಾಗಿರುವ ಈ ಕುರಿ ಮಾಂಸಕ್ಕಾಗಿ ಆಸ್ಟ್ರೇಲಿಯಾದಲ್ಲಿ ಬೆಳೆಸಲಾಗುತ್ತದೆ. ಇನ್ನು ಈ ಕುರಿಯನ್ನು ಬಿಟ್ಟರೆ ಇದರ ಹಿಂದಿನ ಅತ್ಯಂತ ದುಬಾರಿ ಬೆಲೆಯ ಕುರಿ ಎಂದರೆ ಅದು ಕಳೆದ ವರ್ಷ 1.35 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದು ದಾಖಲೆಯ ಬೆಲೆ ಆಗಿತ್ತು. ಈ ದಾಖಲೆಯನ್ನು ಈ ವರ್ಷ ಆಸ್ಟ್ರೇಲಿಯನ್ ವೈಟ್ ಸ್ಟಡ್ ಕುರಿ 2 ಕೋಟಿ ರೂಪಾಯಿಗೆ ಮಾರಾಟ ಆಗುವ ಮೂಲಕ ಮರಿದಿದೆ.

Leave a Comment

error: Content is protected !!