Mukesh Ambani: ನಿಮಗೆ ಅಡುಗೆ ಬರುತ್ತಾ, ಹಾಗಿದ್ದರೆ ಅಂಬಾನಿ ಮನೆಯಲ್ಲಿ ಸೇರಿಕೊಂಡು ಬಿಡಿ! ಸಂಬಳ ಕೇಳಿದರೆ ನೀವು ಕೂಡ ಬೆಚ್ಚಿಬಿಳ್ತೀರಾ.

Mukesh Ambani ಜಗತ್ತಿನ ಅತ್ಯಂತ ಶ್ರೀಮಂತರ ಪೈಕಿಯಲ್ಲಿ ಕೂಡ ಕಾಣಿಸಿಕೊಳ್ಳುವಂತಹ ಮುಕೇಶ್ ಅಂಬಾನಿ(Mukesh Ambani) ಯಾವುದೇ ಐಷಾರಾಮಿ ವಿಚಾರದಲ್ಲಿ ಕೂಡ ಜಗತ್ತಿನ ಯಾವ ಶ್ರೀಮಂತನ ಎದುರು ಕೂಡ ಹಿಂದೆ ಬಿದ್ದಿಲ್ಲ ಎಂದು ಹೇಳಬಹುದಾಗಿದೆ. ಅವರು ಖರೀದಿಸಬೇಕೆಂದಿರುವ ವಸ್ತುವನ್ನು ಕ್ಷಣಮಾತ್ರದಲ್ಲಿ ತರುವಂತಹ ಸಾಮರ್ಥ್ಯ ಅವರಲ್ಲಿದೆ.

ಇತ್ತೀಚಿಗಷ್ಟೇ ಅವರ ಹಳೆಯ ಕೆಲಸಗಾರ ಆಗಿರುವಂತಹ ಮನೋಜ್ ಮೋದಿ(Manoj Modi) ಅವರಿಗೆ 1500 ಕೋಟಿ ಮೌಲ್ಯದ ಮನೆಯನ್ನು ಖರೀದಿಸಿ ಕೊಟ್ಟಿದ್ದಾರೆ ಎಂದರೆ ಅರ್ಥ ಮಾಡಿಕೊಳ್ಳಿ ಅವರು ಯಾವ ಮಟ್ಟಿಗೆ ಆರ್ಥಿಕವಾಗಿ ಸಬಲರಾಗಿದ್ದಾರೆ ಅಥವಾ ತಮ್ಮ ಕೆಲಸದವರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು.

ಇನ್ನು ಮುಕೇಶ್ ಅಂಬಾನಿ(Ambani) ತಮ್ಮ ಅಡುಗೆ ಭಟ್ಟನಿಗೆ ನೀಡುವಂತಹ ಸಂಭಾವನೆ ಕೇಳಿದ್ರೆ ಖಂಡಿತವಾಗಿ ನೀವು ಕೂಡ ಕೆಲಸಕ್ಕೆ ಸೇರ್ತೀನಿ ಅಂತ ಹೇಳುವುದರಲ್ಲಿ ಅನುಮಾನವಿಲ್ಲ ಆದರೆ ಅದಕ್ಕಾಗಿ ನಿಮಗೆ ಎಲ್ಲಾ ರೀತಿಯ ಅಡುಗೆ ವೈಶಿಷ್ಟತೆಗಳನ್ನು ಕಲಿಯುವಂತಹ ಅವಶ್ಯಕತೆ ಇರುತ್ತದೆ. ಅದರಲ್ಲೂ ವಿಶೇಷವಾಗಿ ಸೌತ್ ಇಂಡಿಯನ್ ನಾರ್ತ್ ಇಂಡಿಯನ್ ಥೈ ಹಾಗೂ ಇಟಾಲಿಯನ್ ಸೇರಿದಂತೆ ಇನ್ನು ಕೆಲವು ಖಾದ್ಯಗಳನ್ನು ತಯಾರಿಸಲು ನೀವು ಕಲಿತಿರಬೇಕು.

ಹೇಳಿದ ಸಮಯಕ್ಕೆ ಹೇಳಿದ ಖಾದ್ಯಗಳನ್ನು ಸರಿಯಾಗಿ ರುಚಿ ರುಚಿಯಾಗಿ ತಯಾರಿಸುವಂತಹ ಕ್ಷಮತೆ ನಿಮ್ಮಲ್ಲಿ ಇದ್ದರೆ ಅಡುಗೆಭಟ್ಟನಾಗಿ ಕೆಲಸ ಮಾಡಲು ತಿಂಗಳಿಗೆ ಭರ್ಜರಿ 2 ಲಕ್ಷ ಸಂಪಾದನೆಯನ್ನು ಮುಕೇಶ್ ಅಂಬಾನಿಯವರು(Mukesh Ambani) ನಿಮಗೆ ನೀಡುತ್ತಾರೆ. ಆದರೆ ಅದಕ್ಕಾಗಿ ನೀವು ಸರ್ಟಿಫೈಡ್ ಶೆಫ್ ಆಗಿರಲೇಬೇಕು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!