Modiji ನರೇಂದ್ರ ಮೋದಿ ಅವರ ಪತ್ನಿ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Narendra Modi ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿ ಅವರ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ ಹಾಗೂ ಅವರ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳು ಕೂಡ ಆಗಾಗ ನಡೆಯುತ್ತಲೇ ಇರುತ್ತವೆ ಆದರೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಅವರ ಪತ್ನಿಯಾಗಿರುವ ಜಶೋದ ಬೆನ್(Jashoda Ben Modi) ಮೋದಿ ಅವರ ಕುರಿತಂತೆ. ಅತ್ಯಂತ ಚಿಕ್ಕವಯಸ್ಸಿಗೆ ತಾಯಿಯನ್ನು ಕಳೆದುಕೊಳ್ಳುವ ಅವರು ತಮ್ಮ ತಂದೆಯ ಆರೈಕೆಯಲ್ಲಿ ಬೆಳೆಯುತ್ತಾರೆ. ಚಿಕ್ಕವಯಸ್ಸಿಗೆ ಇವರಿಬ್ಬರಿಗೂ ಕೂಡ ಮದುವೆ ಮಾಡಿಸುವ ನಿರ್ಧಾರವನ್ನು ಎರಡು ಕುಟುಂಬದವರು ಮಾಡಿರುತ್ತಾರೆ.

ಹೀಗಾಗಿ ನರೇಂದ್ರ ಮೋದಿ ಹಾಗೂ ಜಶೋಧ ಇಬ್ಬರೂ ಕೂಡ 13 ಹಾಗೂ 12 ದವರಿರಬೇಕಾದರೆ ಮದುವೆ ಮಾಡಿಸಲಾಗುತ್ತದೆ ಹಾಗೂ ಜಶೋದ ಬೆನ್ 17 ವರ್ಷದವರಾಗಿರಬೇಕಾದರೆ ನರೇಂದ್ರ ಮೋದಿಯವರ ಮನೆಗೆ ಕಳಿಸಿಕೊಡಲಾಗುತ್ತದೆ. ಆ ಸಂದರ್ಭದಲ್ಲಿ ನರೇಂದ್ರ ಮೋದಿಯವರಿಗೆ ದೇಶ ಸುತ್ತುವ ಆರ್ ಎಸ್ ಎಸ್ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಹಿಮಾಲಯಕ್ಕೆ ಹೋಗುವ ತಯಾರಿಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿಗೆ ಯಾಕೆ ಬಂದಿರಿ ನೀವು ನಿಮ್ಮ ವಿದ್ಯಾಭ್ಯಾಸವನ್ನು ಪೂರೈಸಿ ಎಂಬುದಾಗಿ ಹೇಳಿ ದೇಶ ಪರ್ಯಟನೆಗೆ ಹೊರಡುತ್ತಾರೆ. ಅದಾದ ಮೇಲೆ ಕೂಡ ಆಗಾಗ ಜಶೋದಾ ಮೋದಿ ಅವರ ಮನೆಗೆ ಬರುತ್ತಲೇ ಇರುತ್ತಾರೆ ಆದರೆ ಮೋದಿ ಅವರು ಅಷ್ಟೊಂದು ಸರಿಯಾಗಿ ಸಿಗುವುದಿಲ್ಲ.

ಮೂರು ವರ್ಷ ಮೋದಿ ಅವರ ಮನೆಗೆ ಜಶೋಧ ಇದ್ದಿದ್ರು ಆ ಸಂದರ್ಭದಲ್ಲಿ ಒಟ್ಟಿಗೆ ಇದ್ದಿದ್ದು ಕೇವಲ ಮೂರು ತಿಂಗಳು ಮಾತ್ರ. ನಂತರ ಸಂಪೂರ್ಣವಾಗಿ ತಮ್ಮ ತಂದೆಯ ಮನೆಗೆ ಹೋಗುವ ಜಶೋದ ಬೆನ್ ಟೀಚರ್ ಟ್ರೈನಿಂಗ್ ಮುಗಿಸಿ ಹಲವಾರು ಶಾಲೆಗಳಲ್ಲಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ಸಂದರ್ಭದಲ್ಲಿ ಎಲ್ಲಿಯೂ ಕೂಡ ಅವರು ತಾನು ನರೇಂದ್ರ ಮೋದಿ ಅವರ ಹೆಂಡತಿ ಎಂಬುದನ್ನು ಹೇಳಿಕೊಂಡಿರಲಿಲ್ಲ. ಈ ಸಂದರ್ಭದಲ್ಲಿ ರಾಜಕೀಯವಾಗಿ ನರೇಂದ್ರ ಮೋದಿಯವರು ಒಂದೊಂದೇ ಹೆಜ್ಜೆಯನ್ನು ಮೇಲಿಡುತ್ತಾ ಗುಜರಾತಿನ ರಾಜ್ಯದ ಮುಖ್ಯಮಂತ್ರಿಯಾಗಿ ಹಲವಾರು ಬಾರಿ ಚುನಾಯಿತರಾಗುತ್ತಾರೆ. ಆದರೆ ಮೊದಲ ಬಾರಿಗೆ 2002ರಲ್ಲಿ ಇವರ ಕುರಿತಂತೆ ಮೀಡಿಯಾದವರಿಗೆ ತಿಳಿದು ಬರುತ್ತದೆ.

ಇಬ್ಬರೂ ಕೂಡ ಈ ಸುದ್ದಿಯನ್ನು ದೂರ ತಳ್ಳುತ್ತಲೇ ಬಂದರೂ ಆದರೆ 2014 ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಫಾರಂ ಫಿಲಂ ಮಾಡುವಾಗ ತಮ್ಮ ಪತ್ನಿಯ ಹೆಸರನ್ನು ಬರೆದು ಈ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ. ಇಷ್ಟೆಲ್ಲಾ ಲಾಭಗಳನ್ನು ಉಪಯೋಗಿಸಿಕೊಳ್ಳಬಹುದಾದ ಅವಕಾಶ ಇದ್ದರೂ ಕೂಡ ಜಶೋದ ಬೆನ್ ಮೋದಿ ಈಗಲೂ ತಮ್ಮ ಶಿಕ್ಷಕ ವೃತ್ತಿಯಿಂದ ಬರುವಂತಹ ಪೆನ್ಷನ್ ಹಣದಿಂದಲೇ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ತಮ್ಮ ಗಂಡನಿಗಾಗಿ ತಮ್ಮ ಜೀವನವನ್ನೇ ಈ ರೀತಿ ತ್ಯಾಗ ಮಾಡಿದ್ದು ನಿಜಕ್ಕೂ ಕೂಡ ಅವರ ವ್ಯಕ್ತಿತ್ವದ ಹಿರಿಮೆಯನ್ನು ಸಾಬೀತುಪಡಿಸುತ್ತದೆ.

Leave a Comment

error: Content is protected !!