Prakash Raj: ಅದಾನಿ ಹಾಗೂ ಮೋದಿ ಸಂಬಂಧವನ್ನು ಟೈಟಾನಿಕ್ ಪ್ರೀತಿಗೆ ಹೋಲಿಸಿದ ನಟ ಪ್ರಕಾಶ್ ರಾಜ್!

Prakash Raj ನಟನೆಯ ವಿಚಾರಕ್ಕೆ ಬಂದರೆ ಭಾರತದ ಹಲವಾರು ಭಾಷೆಗಳಲ್ಲಿ ನಿರ್ದೇಶಕರು ಮೊದಲು ಆಯ್ಕೆ ಮಾಡುವಂತಹ ಕಲಾವಿದ ಎಂದರೆ ಅದು ನಮ್ಮ ಕನ್ನಡದ ಹೆಮ್ಮೆಯ ನಟ ಆಗಿರುವ ಪ್ರಕಾಶ್ ರಾಜ್(Prakash Raj) ಅವರು. ನಟನೆಯ ವಿಚಾರಕ್ಕೆ ಬಂದರೆ ಪ್ರತಿಯೊಂದು ಪಾತ್ರಕ್ಕೆ ನ್ಯಾಯ ಸಲ್ಲಿಸುವಂತೆ ಆ ಪಾತ್ರದ ಪರಕಾಯ ಪ್ರವೇಶ ಮಾಡುವಂತಹ ಪ್ರಕಾಶ್ ರಾಜ್ ಪ್ರತಿಯೊಬ್ಬ ಪ್ರೇಕ್ಷಕನ ನೆಚ್ಚಿನ ನಟ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೇವಲ ಸಿನಿಮಾ ನಟನೆಯಲ್ಲಿ ಮಾತ್ರವಲ್ಲದೆ ರಾಜಕೀಯವಾಗಿ ಕೂಡ ತಮ್ಮ ವಿಚಾರಧಾರೆಗಳನ್ನು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಾಗೂ ಹಲವಾರು ಕಾರ್ಯಕ್ರಮಗಳಲ್ಲಿ ಮುಂದಿಡುತ್ತಲೇ ಬಂದಿದ್ದಾರೆ. ಇದಕ್ಕಾಗಿ ಪ್ರಕಾಶ್ ರೈ ಅವರನ್ನು ಸಿನಿಮಾದ ವಿಚಾರದಲ್ಲಿ ಕೆಲವರು ಇಷ್ಟಪಟ್ಟರೆ ರಾಜಕೀಯ ವಿಚಾರಗಳಲ್ಲಿ ಅವರನ್ನು ದ್ವೇಷಿಸುವವರು ಕೂಡ ಇದ್ದಾರೆ. ಹೇಗಿದ್ದರೂ ಕೂಡ ಯಾರ ರಾಜಿಗೂ ಒಳಗಾಗದೆ ನೇರ ನುಡಿಯಿಂದ ತಮಗನಿಸಿದ್ದನ್ನು ನೇರವಾಗಿ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಪ್ರಕಾಶ್ ರಾಜ್ ಹೇಳುತ್ತಾರೆ.

prakash Rai

ಇನ್ನು ಅದರಲ್ಲೂ ವಿಶೇಷವಾಗಿ ಪ್ರಕಾಶ್ ರಾಜ್ ಅವರಿಗೆ ಮೋದಿ ಹಾಗೂ ಅವರ ನೇತೃತ್ವ ಬಿಜೆಪಿ ಸರ್ಕಾರದ ವಿರುದ್ಧವಾಗಿ ವಿರೋಧಿ ಹೇಳಿಕೆಗಳನ್ನು ಆಗಾಗ ನೀಡುವಂತಹ ಹವ್ಯಾಸ ಹೆಚ್ಚಾಗಿ ಬಿಟ್ಟಿದೆ. ಇದು ಮೋದಿ ಹಾಗೂ ಬಿಜೆಪಿ ಬೆಂಬಲಿತ ಜನರಿಗೆ ಇಷ್ಟ ಆಗದೇ ಇರಬಹುದು. ಅದೇ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ ಮೋದಿ(Modi) ಹಾಗೂ ಅದಾನಿ(Adani) ಅವರ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ನಿಮಗೆಲ್ಲರಿಗೂ ತಿಳಿದಿದೆ. ಈ ಬಗ್ಗೆ ಕೂಡ ಪ್ರಕಾಶ್ ರೈ ಒಂದು ಫೋಟೋ ಮೂಲಕ ಇದರ ಕುರಿತಂತೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಹೌದು ಮಿತ್ರರೇ ಅದಾನಿ ಹಾಗೂ ನರೇಂದ್ರ ಮೋದಿ ಅವರನ್ನು ಟೈಟಾನಿಕ್ ಸಿನಿಮಾದಲ್ಲಿ ಹಡಗಿನ ಮೇಲೆ ಹೀರೋ ಹಾಗೂ ಹೀರೋಯಿನ್ ನಿಂತಿರುವ ಹಾಗೆ ಎಡಿಟ್ ಮಾಡಿ ಚಿತ್ರಿಸಲಾಗಿದ್ದು ಈ ಮೂಲಕ ಈಗ ನಡೆಯುತ್ತಿರುವ ಅದಾನಿಯವರ ವಿಚಾರದಲ್ಲಿ ಮೋದಿ ಅವರ ಬೆಂಬಲವೂ ಕೂಡ ಇದೆ ಎಂಬ ರೀತಿಯಲ್ಲಿ ಪರೋಕ್ಷವಾಗಿಯೇ ಪ್ರಕಾಶ್ ರೈ ಈ ವಿಚಾರದ ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರ ಕೆಳಗೆ ಜಸ್ಟ್ ಆಸ್ಕಿಂಗ್ ಎನ್ನುವ ರೀತಿಯಲ್ಲಿ ಕ್ಯಾಪ್ಶನ್ ಬರೆದಿದ್ದಾರೆ.

Leave a Comment

error: Content is protected !!