Suniel Shetty: ಅಪ್ಪಂದಿರ ದಿನದಂದು ಕೆಎಲ್ ರಾಹುಲ್ ಗೆ ಸುನಿಲ್ ಶೆಟ್ಟಿ ಹೇಳಿದ್ದೇನು?

Suniel Shetty ಬಾಲಿವುಡ್ ಚಿತ್ರರಂಗದ ನಾಯಕ ನಿರ್ಮಾಪಕ ಹಾಗೂ ಹೋಟೆಲ್ ವ್ಯವಹಾರಗಳ ಮೂಲಕ ಉದ್ಯಮಿ ಕೂಡ ಆಗಿ ಕಾಣಿಸಿಕೊಂಡಿರುವ ಸುನಿಲ್ ಶೆಟ್ಟಿ ರವರು ತಮ್ಮ ಮಗಳಾಗಿರುವ ಅಥಿಯಾ(Athiya Shetty) ಅವರನ್ನು ಈಗಾಗಲೇ ಭಾರತದ ಪ್ರತಿಭಾನ್ವಿತ ಕ್ರಿಕೆಟಿಗ ಆಗಿರುವಂತಹ ಕೆ ಎಲ್ ರಾಹುಲ್(KL Rahul) ಅವರಿಗೆ ಮದುವೆ ಮಾಡಿಕೊಟ್ಟಿದ್ದಾರೆ.

ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಇಬ್ಬರು ಜೋಡಿಗಳು ಕೂಡ ಜನವರಿ ತಿಂಗಳಲ್ಲಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯಕ್ಕೆ ಕೆ ಎಲ್ ರಾಹುಲ್ ರವರ ಬಗ್ಗೆ ಮಾತನಾಡುವುದಾದರೆ ಐಪಿಎಲ್(IPL) ವೇಳೆ ಇಂಜುರಿ ಆಗಿದ್ದ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಂಡು ಈಗ ಭಾರತಕ್ಕೆ ವಾಪಸ್ ಆಗಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಅಪ್ಪಂದಿರ ದಿನಾಚರಣೆಯನ್ನು ಪ್ರತಿಯೊಬ್ಬರೂ ಕೂಡ ಆಚರಿಸಿದ್ದು ಈ ಸಂದರ್ಭದಲ್ಲಿ ವಿಶೇಷ ಎನ್ನುವಂತೆ ಕೆ ಎಲ್ ರಾಹುಲ್ ರವರು ತಮ್ಮ ತಂದೆಯ ಫೋಟೋ ಜೊತೆಗೆ ಸುನಿಲ್ ಶೆಟ್ಟಿ(Suniel Shetty) ಅವರ ಫೋಟೋವನ್ನು ಕೂಡ ಪೋಸ್ಟ್ ಮಾಡಿ ಅಪಂದಿರ ದಿನಾಚರಣೆಯ ಶುಭಾಶಯಗಳು ಎಂಬುದಾಗಿ ಶುಭಾಶಯಗಳನ್ನು ಕೋರಿದ್ದಾರೆ.

ಈ ಪೋಸ್ಟಿಗೆ ಸುನಿಲ್ ಶೆಟ್ಟಿ ಅವರು ನಿನ್ನಂತಹ ಮಗನನ್ನು ಪಡೆಯುವುದಕ್ಕೆ ನಾವು ಧನ್ಯರಾಗಿದ್ದೇವೆ ಎಂಬುದಾಗಿ ಕೂಡ ರಿಪ್ಲೈ ಮಾಡಿದ್ದಾರೆ. ಈ ಕಾಮೆಂಟ್ ಎನ್ನುವುದು ಇವರಿಬ್ಬರ ನಡುವೆ ಬಾಂಧವ್ಯ ಯಾವ ಮಟ್ಟಿಗೆ ಬಿಗಿಯಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!