ಪ್ರೇಮಿಯ ಜೊತೆಗೆ ಹೋಟೆಲ್ ನಲ್ಲಿ ಸಿಕ್ಕಿಬಿದ್ದ ಮಗಳು. ನಂತರ ನಡೀದಿದ್ದೇ ಬೇರೆ.

Kannada News ಫೆಬ್ರವರಿ 14 ಬಂತೆಂದರೆ ಸಾಕು ಯುವ ಪ್ರೇಮಿಗಳು ಪಾರ್ಕ್ ಹೋಟೆಲ್ ಹೀಗೆ ಸಿಕ್ಕ ಸಿಕ್ಕಲ್ಲಿ ಚೆಲ್ಲಾಟ ಆಡುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಪೋಷಕರ ಕಣ್ತಪ್ಪಿಸಿಯು ಕೂಡ ಕೆಲವೊಮ್ಮೆ ಸಿಕ್ಕಿ ಬಿದ್ದು ಅವಾಂತರಗಳು ನಡೆಯುವಂತಹ ಪರಿಸ್ಥಿತಿಗಳು ಉಂಟಾಗುತ್ತವೆ. ಇಂದು ಹೇಳ ಹೊರಟಿರುವ ಕಥೆ ಕೂಡ ಅದೇ ರೀತಿ ನಡೆದಿರುವಂತಹ ಘಟನೆಯಾಗಿದೆ. ತನ್ನ ಬಾಯ್ ಫ್ರೆಂಡ್ ಜೊತೆಗೆ ರೆಸ್ಟೋರೆಂಟ್ ನಲ್ಲಿ ಇದ್ದ ಸಂದರ್ಭದಲ್ಲಿ ತಾಯಿಯ ಕೈಗೆ ಸಿಕ್ಕಿ ಬಿದ್ದು ಆ ವಿಡಿಯೋ ವೈರಲ್(Video Viral) ಆಗಿರುವ ವಿಚಾರ ಈಗ ತಿಳಿದುಬಂದಿದೆ.

ತನ್ನ ಬಾಯ್ ಫ್ರೆಂಡ್ ಜೊತೆಗೆ ರೆಸ್ಟೋರೆಂಟ್ ನಲ್ಲಿ ವ್ಯಾಲೆಂಟೈನ್ಸ್ ಡೇ(Valentine’s Day) ಅನ್ನು ಆಚರಿಸಲು ಬಂದಿದ್ದ ಯುವತಿ ತನ್ನ ತಾಯಿಯಿಂದಲೇ ಥಳಿತಕ್ಕೆ ಒಳಗಾಗಿರುವಂತಹ ಘಟನೆ ನಡೆದಿದೆ. ತನ್ನ ಬಾಯ್ ಫ್ರೆಂಡ್ ಗೆ ತಾಯಿ ಬಾರಿಸುತ್ತಿರುವ ಸಂದರ್ಭದಲ್ಲಿ ತಡೆಯಲು ಬಂದ ಮಗಳಿಗೂ ಕೂಡ ಗೂಸಾ ಬಿದ್ದಿದೆ. ಇಬ್ಬರಿಗೂ ಸಹ ಈ ಮಹಾತಾಯಿ ಚಪ್ಪಲಿ ಸೇವೆಯನ್ನು ಮಾಡಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

ಇಬ್ಬರೂ ಕೂಡ ಪ್ರೇಮಿಗಳ ದಿನಾಚರಣೆಯನ್ನು ಸಂತೋಷವಾಗಿ ಆಚರಿಸುವ ನಿಟ್ಟಿನಲ್ಲಿ ರೆಸ್ಟೋರೆಂಟ್ ನಲ್ಲಿ ಡಿನ್ನರ್(Dinner) ಮಾಡಲು ಬಂದಿದ್ದರು ಆದರೆ ಅಲ್ಲಿ ಅವರ ಹಣೆಬರಹವೇ ಬೇರೆಯಾಗಿತ್ತು. ಇನ್ನೇನು ಡಿನ್ನರ್ ಪ್ರಾರಂಭಿಸಬೇಕು ಎನ್ನುವ ಸಮಯದಲ್ಲಿಯೇ ಹುಡುಗಿಯ ತಾಯಿ ರೆಸ್ಟೋರೆಂಟ್ ಗೆ ಕಾಲಿಟ್ಟಿದ್ದು ಇರುವಂತಹ ಎಲ್ಲಾ ಸಂತೋಷದ ಕ್ಷಣಗಳು ಕೂಡ ಒಂದೇ ಕ್ಷಣ ಬಲೂನು ಹೊಡೆದಂತೆ ಒಡೆದುಹೋಗಿದೆ. ಮಗಳನ್ನು ಬೇರೆ ಹುಡುಗನ ಜೊತೆಗೆ ನೋಡಿ ತಾಯಿ ರೌದ್ರಾವತಾರವನ್ನು ತಾಳಿದ್ದಾರೆ.

ಈ ವಿಡಿಯೋ ಈಗಾಗಲೇ ಬೇರೆ ಯಾರದೋ ಮೊಬೈಲ್ ಕ್ಯಾಮೆರಾದಲ್ಲಿ ಸರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ನಿಜಕ್ಕೂ ಕೂಡ ಪ್ರೇಮಿಗಳ ದಿನಾಚರಣೆಯ ಸಂತೋಷದ ದಿನದಂದು ಈ ಪ್ರೇಮಿಗಳಿಗೆ ಹೀಗಾಗಬಾರದಾಗಿತ್ತು ಎಂಬುದು ಎಲ್ಲರ ಪ್ರತಿಕ್ರಿಯೆಯಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!