Veerendra Heggade: ಮೊಮ್ಮಕ್ಕಳ ಜೊತೆಗೆ ಕ್ರಿಕೆಟ್ ಆಡುತ್ತಿರುವ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ವಿಡಿಯೋ ವೈರಲ್.

Dharmasthala ನಮ್ಮ ಕರ್ನಾಟಕದ ಅತ್ಯಂತ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಧರ್ಮಸ್ಥಳ ಕ್ಷೇತ್ರವನ್ನು ಯಾರು ತಾನೆ ಭೇಟಿಯಾಗಿಲ್ಲ ಹೇಳಿ. ಧರ್ಮಸ್ಥಳ ಕ್ಷೇತ್ರದ ಮಂಜುನಾಥನ ಕೃಪೆಗೆ ಪಾತ್ರರಾದವರು ಜೀವನದಲ್ಲಿ ತಮ್ಮ ಕಷ್ಟವನ್ನು ಕಳೆದುಕೊಂಡು ಗೆಲುವಿನ ಹಾದಿಗೆ ಸಾಗಿದ್ದಾರೆ. ಅಂತಹ ಪುಣ್ಯಕ್ಷೇತ್ರದ ಧರ್ಮಾಧಿಕಾರಿಗಳಾಗಿರುವ ವೀರೇಂದ್ರ ಹೆಗಡೆಯವರ(Veerendra Heggade) ಕುರಿತಂತೆ ಇಂದು ಮಾತನಾಡಲು ಹೊರಟಿದ್ದೇವೆ.

ಕೇವಲ ಧರ್ಮಾಧಿಕಾರಿಯಾಗಿ(Dharmadhikari) ಮಾತ್ರವಲ್ಲದೆ ಸಾಕಷ್ಟು ಜನ ಉಪಯೋಗಿ ಕಾರ್ಯಗಳಲ್ಲಿ ಕೂಡ ಶ್ರೀ ವೀರೇಂದ್ರ ಹೆಗಡೆಯವರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಭಾರತ ಸರ್ಕಾರದ ಹಲವಾರು ಸನ್ಮಾನಗಳಿಗೂ ಕೂಡ ಪುರಸ್ಕೃತರಾಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಅವರ ಕುರಿತಂತೆ ಒಂದು ವಿಡಿಯೋ ಹರಿದಾಡುತ್ತಿದ್ದು ಎಲ್ಲರ ಕಣ್ಣಂಚಿನಲ್ಲಿ ನಗು ಮೂಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಬನ್ನಿ ಆ ವಿಡಿಯೋ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಖಾವಂದರಾಗಿರುವ(Khavandar) ವೀರೇಂದ್ರ ಹೆಗಡೆಯವರು ತಮ್ಮ ಮೊಮ್ಮಗನ ಜೊತೆಗೆ ಕ್ರಿಕೆಟ್ ಆಡುತ್ತಿರುವಂತಹ ಅಪರೂಪದ ದೃಶ್ಯಾವಳಿಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲ್ಪಟ್ಟಿದೆ. ಇದರ ಮೂಲಕ ಬಿಡುವಿನ ಸಮಯದಲ್ಲಿ ವೀರೇಂದ್ರ ಹೆಗ್ಗಡೆಯವರು ಏನು ಮಾಡುತ್ತಾರೆ ಎಂದು ಕೇಳುವವರಿಗೆ ಈ ವಿಡಿಯೋ ಉತ್ತರ ಎನಿಸಿದಂತಿದೆ.

ಮೇಲ್ನೋಟಕ್ಕೆ ವೀರೇಂದ್ರ ಹೆಗ್ಗಡೆಯವರು(Veerendra Heggade) ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮ ಮೊಮ್ಮಗನ ಜೊತೆಗೆ ಮನೆಯ ಆವರಣದಲ್ಲಿ ಕ್ರಿಕೆಟ್ ಆಡುತ್ತಿರುವ ದೃಶ್ಯ ಇದಾಗಿದೆ ಎಂದು ಹೇಳಬಹುದು. ಮತ್ತೊಬ್ಬ ಬಾಲಕ ಕೂಡ ಈ ಸಂದರ್ಭದಲ್ಲಿ ಫೀಲ್ಡಿಂಗ್ ಮಾಡುತ್ತಿರುವುದು ಕಂಡುಬಂದಿತು. ಈ ವಯಸ್ಸಿನಲ್ಲಿ ಕೂಡ ಮೊಮ್ಮಕ್ಕಳಿಗಾಗಿ ಸಮಯವನ್ನು ಬಿಡುವು ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಅಪರೂಪದ ದೃಶ್ಯವಾಗಿದೆ ಎಂದರೆ ತಪ್ಪಾಗಲಾರದು. ಈ ದೃಶ್ಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡೋ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!