98 ಸಲ ಡಯಾಲಿಸಿಸ್​ಗೆ ಒಳಗಾದ ಗಂಡನನ್ನು ಬದುಕಿಸಲು ಹೆಂಡತಿ ಮಾಡಿದ ತ್ಯಾಗ ಏನು ಗೊತ್ತಾ ನಿಜಕ್ಕೂ ಆಶ್ಚರ್ಯ

ಸಾಮಾನ್ಯವಾಗಿ ಜನರಿಗೆ ತಮ್ಮಲ್ಲಿರುವ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಮನಸಿರುವುದಿಲ್ಲ. ವಸ್ತುವಾಗಿರಲಿ, ಅಂಗಾಂಗಗಳೇ ಆಗಿರಲಿ ಅದನ್ನು ದಾನ ಮಾಡಲು ವಿಶಾಲವಾದ ಮನಸ್ಸಿರಬೇಕು. ದಾನದಿಂದ ಸಹಾಯ ಪಡೆದುಕೊಳ್ಳುವವರು ನಮ್ಮವರೇ ಆಗಿದ್ದರು ಹಿಂಜರಿಕೆಯಂತೂ ಇದ್ದೇ ಇರುತ್ತದೆ. ಇಂತಹ ಕಾಲದಲ್ಲಿ ತನ್ನ ಗಂಡನ ಆರೋಗ್ಯವನ್ನು ಉಳಿಸಿಕೊಳ್ಳಲು ತನ್ನ ಕಿಡ್ನಿಯನ್ನೇ ದಾನ ಮಾಡಿದ ಹೆಂಡತಿಯ ಕಥೆಯನ್ನು ಓದಿ..

ಅಪಘಾತಗಳು ಉಂಟಾದಾಗ, ಆರೋಗ್ಯದಲ್ಲಿ ಏರುಪೇರಾದಾಗ ತಮ್ಮವರಿಗಾಗಿ ರಕ್ತವನ್ನು ದಾನ ಮಾಡಿದವರ ಕಥೆಯನ್ನು ಕೇಳಿದ್ದೇವೆ. ಲಿಯೋ ಎಂಬುವವರ ತಾಯಿ ತನ್ನ ಪತಿಯ ಆರೋಗ್ಯದ ತೊಳಲಾಟವನ್ನು ನೋಡಲಾಗದೆ, ಪತಿಯೊಂದಿಗೆ ನೆಮ್ಮದಿಯಿಂದ ಜೀವಿಸಲು ತನ್ನ ಕಿಡ್ನಿಯನ್ನು ದಾನ ಮಾಡಿದ್ದಾಳೆ.

ಈ ವಿಚಾರವಾಗಿ ಲಿಯೋ ಅವರು ಟ್ವೀಟರ್ ನಲ್ಲಿ ಪೋಸ್ಟ್ ಬರೆದು ಹಂಚಿಕೊಂಡಿದ್ದಾರೆ. ‘ನನ್ನ ಅಪ್ಪ ಸುಮಾರು 98 ಬಾರಿ ಡಯಾಲಿಸಿಸ್ ಅನ್ನು ಮಾಡಿಸಿಕೊಂಡಿದ್ದಾರೆ. ಪ್ರತಿ ಬಾರಿ ಡಯಾಲಿಸಿಸ್ಗಾಗಿ ನನ್ನ ಅಮ್ಮ ಸುಮಾರು ಐದರಿಂದ ಆರು ತಾಸಿನವರೆಗೆ ಅಪ್ಪನಿಗಾಗಿ ಕಾಯುತ್ತಾ ಕುಳಿತಿರುತ್ತಿದ್ದರು. ವಾರದಲ್ಲಿ ಮೂರು ದಿನ ಹೀಗೆ ನಡೆಯುತ್ತಿತ್ತು. ಅಪ್ಪನನ್ನು ಉಳಿಸಿಕೊಳ್ಳಲೇ ಬೇಕೆಂದು ನಿರ್ಧರಿಸಿದ ನನ್ನ ತಾಯಿ ಅವಳ ಒಂದು ಕಿಡ್ನಿಯನ್ನೇ ಅಪ್ಪನಿಗಾಗಿ ದಾನ ಮಾಡಿದಳು. ಇದರಿಂದಾಗಿ ಅಪ್ಪನ ಆರೋಗ್ಯವು ಸುಧಾರಿಸಿತು. ಇವರ ಮಧ್ಯೆ ಇರುವಂತ ಪ್ರೀತಿ ಅನುಬಂಧದಿಂದ ತೊಳಲಾಟದ ಬದುಕಿನಿಂದ ಹೊರಬಂದಿದ್ದಾರೆ. ಇಬ್ಬರು ಈಗ ನೆಮ್ಮದಿಯನ್ನು ಕಂಡಿದ್ದಾರೆ. ನಾನು ಇದಕ್ಕಿಂತಲೂ ಒಳ್ಳೆಯ ಪ್ರೇಮಕಥೆಯನ್ನು ಈವರೆಗೆ ಕಂಡಿಲ್ಲ’ ಎಂದು ಬರೆದು ಹಂಚಿಕೊಂಡಿದ್ದಾರೆ.

ಕಣ್ಣಂಚಲ್ಲಿ ನೀರು ತರಿಸುವ ಇಂತಹ ಸುಂದರವಾದ ಪ್ರೇಮ ಕಥೆಗೆ 1,200 ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವಾರು ಜನ ಇದಕ್ಕೆ ಪ್ರತಿಕ್ರಿಯಿಸಿದ್ದು, ಅವರಲ್ಲಿ ಒಬ್ಬ ತನ್ನ ತಂದೆ ತಾಯಿಯ ಕಥೆಯನ್ನು ಹೇಳಿಕೊಂಡಿದ್ದಾನೆ. ‘ನನ್ನ ತಾಯಿಗಾಗಿ ಅಪ್ಪ ಕಿಡ್ನಿವೊಂದನ್ನು ದಾನ ಮಾಡಿದ್ದಾರೆ’ ಎಂದಿದ್ದಾನೆ. ರಿ ಟ್ವೀಟ್ ಮಾಡಿದವರಲ್ಲಿ ತುಂಬಾನೇ ಜನ ‘ಲಿಯೋ ಅವರ ಅಪ್ಪ ಅಮ್ಮ ಚೇತರಿಸಿಕೊಳ್ಳುತ್ತಿರುವ ವಿಚಾರ ಸಂತಸ ತಂದಿದೆ. ಹೀಗೆ ಪ್ರೀತಿಯಿಂದ, ಆರೋಗ್ಯವಾಗಿ ಬಾಳಲಿ’ ಎಂದು ಹಾರೈಕೆಯ ನುಡಿಗಳನ್ನು ಬರೆದಿದ್ದಾರಂತೆ. ಈ ಸುಂದರ ಸಂಸಾರವು ಸಿಹಿಯನ್ನುಣ್ಣುತ್ತಾ ಬಾಳಲಿ ಎಂದು ನಾವು ಆಶಿಸೋಣ..

ಅವಶ್ಯಕತೆ ಇರುವವರಿಗೆ ದಾನ ಮಾಡುವುದರಿಂದ ವ್ಯಕ್ತಿಯ ಶ್ರೇಷ್ಠತೆ ಮತ್ತು ಗೌರವ ಎರಡು ಹೆಚ್ಚುತ್ತದೆ. ಹಣ ಸಹಾಯ, ರಕ್ತದಾನ, ವಸ್ತುದಾನ, ಅಂಗಾಂಗ ದಾನಗಳಿಂದ ವ್ಯಕ್ತಿಯು ಎಲ್ಲರ ಪ್ರೀತಿಗೆ ಕಾರಣನಾಗುತ್ತಾನೆ.

Leave a Comment

error: Content is protected !!