cricket legend Anil Kumble: ಕ್ರಿಕೆಟ್ ಕ್ಷೇತ್ರದ ದಂತಕಥೆ(Legend) ಆಗಿರುವ ಅನಿಲ್ ಕುಂಬ್ಳೆ ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕರ್ನಾಟಕ ಮೂಲದ ಅನಿಲ್ ಕುಂಬ್ಳೆ ಅವರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿಯೇ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ಗಳನ್ನು ಪಡೆಯುವ ಮೂಲಕ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಇಂದಿಗೂ ಕೂಡ ಕ್ರಿಕೆಟ್ ಅನ್ನು ಕರಿಯರ್(Career) ಅನ್ನಾಗಿ ಪ್ರಾರಂಭಿಸಬೇಕು ಎನ್ನುವ ಅದೆಷ್ಟೋ ಯುವ ಪ್ರತಿಭೆಗಳಿಗೆ ಮಾದರಿ ಎಂದರೆ ತಪ್ಪಾಗಲಾರದು.
cricket legend Anil Kumble
ತಮ್ಮ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಒಂದೇ ಒಂದು ಕಳಂಕ ತರುವಂತಹ ವಿಚಾರಗಳಿಗೆ ಹೆಸರಾಗಿಲ್ಲ ನಮ್ಮೆಲ್ಲರ ಹೆಮ್ಮೆಯ ಅನಿಲ್ ಕುಂಬ್ಳೆ ಅವರು. ಇನ್ನು ಅವರ ವೈಯಕ್ತಿಕ ಜೀವನದ(Personal Life) ಒಂದು ವಿಚಾರದ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ವಿವರವಾಗಿ ನಿಮಗೆ ತಿಳಿಸಲು ಹೊರಟಿದ್ದೇವೆ. ಹೌದು ಮಿತ್ರರೇ, ನಾವು ನಿಮಗೆ ತಿಳಿಸಲು ಹೊರಟಿರುವುದು ಅನಿಲ್ ಕುಂಬಳೆ ಅವರ ದಾಂಪತ್ಯ(Marriage) ಜೀವನದ ಕುರಿತಂತೆ. ಇಂದಿನ ಸೆಲೆಬ್ರಿಟಿಗಳು ತಮ್ಮ ಜೀವನಾವಧಿಯಲ್ಲಿ ಒಂದಾದ ಮೇಲೆ ಒಂದರಂತೆ ಮದುವೆ ಆಗುತ್ತಾರೆ ಆದರೆ ಅನಿಲ್ ಕುಂಬ್ಳೆ ಅವರ ಮದುವೆಯ ವಿಚಾರದ ಕುರಿತಂತ ಕೇಳಿದರೆ ಖಂಡಿತವಾಗಿ ನೀವು ಕೂಡ ಖುಷಿ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಕುಂಬ್ಳೆ ಅವರ ಪತ್ನಿ ಚೇತನ ರಾಮತೀರ್ಥ ಅವರು ಮೊದಲಿಗೆ ಕುಮಾರ್ ಬಿ ಜಾಗೀದಾರ ಎನ್ನುವವರನ್ನು ಮದುವೆ ಆಗಿರುತ್ತಾರೆ. ಇವರಿಗೆ ಒಬ್ಬ ಹೆಣ್ಣುಮಗಳು ಕೂಡ ಜನಿಸುತ್ತಾಳೆ. ಆದರೆ ಕಾಲ ಕಳೆಯುತ್ತಿದ್ದಂತೆ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಎನ್ನುವುದು ಹೆಚ್ಚಾಗುತ್ತಾ ಹೋಗಿ ಇವರಿಬ್ಬರ ಮದುವೆಯ ಮೇಲೆ ಚೇತನ ರಾಮತೀರ್ಥ ಅವರಿಗೆ ಅಸಹನೆ ಮೂಡಲು ಪ್ರಾರಂಭವಾಗುತ್ತದೆ. ಕೊನೆಗೂ ಇಬ್ಬರು 12 ವರ್ಷದ ಸಂಸಾರದ ನಂತರ 1998ರಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ಇದಾದ ನಂತರ ಚೇತನ ಅವರು ಮಗಳ ಜೊತೆಗೆ ಒಬ್ಬಂಟಿಯಾಗಿಯೇ ಇದ್ದು ಟ್ರಾವೆಲ್ಸ್ ಕಂಪನಿಯಲ್ಲಿ(Travels Company) ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಹಾಗೂ ಚೇತನ ಅವರಿಗೆ ಪರಿಚಯವಾಗಿ ಅವರ ವಿಷಯವೆಲ್ಲ ಅನಿಲ್ ಕುಂಬ್ಳೆ ಅವರಿಗೆ ತಿಳಿದು ಬರುತ್ತದೆ.
ಇದನೊಮ್ಮೆ ಓದಿ..ತೆಲುಗು ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ಅಪ್ಪು ನಟನೆಯ ರಣವಿಕ್ರಮ ಸಿನಿಮಾದ ನಟಿ ಹೇಳಿದ್ದೇನು?
ಅದೇ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಅವರು ಚೇತನ ಅವರನ್ನು ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾರೆ. ಮೊದಲ ಬಾರಿ ಹೇಳಿದಾಗ ಚೇತನ ಅವರು ಈಗಾಗಲೇ ನಾನು ಮೊದಲ ಸಂಸಾರದಿಂದ ಸಾಕಷ್ಟು ಸಮಸ್ಯೆಯನ್ನು ಅನುಭವಿಸಿದ್ದೇನೆ ನನಗೆ ಬೇಡ ಎಂಬುದಾಗಿ ಹೇಳುತ್ತಾರೆ. ಆದರೆ ಅನಿಲ್ ಕುಂಬ್ಳೆ ಅವರು ಮಾತ್ರ ಪಟ್ಟು ಹಿಡಿದು ಕೂತಿರುತ್ತಾರೆ. ನಂತರ ಕೊನೆಗೂ ಇಬ್ಬರೂ ಕೂಡ ಮದುವೆಯಾಗುತ್ತಾರೆ. ಎಲ್ಲದಕ್ಕಿಂತ ಪ್ರಮುಖವಾಗಿ ಅನಿಲ್ ಕುಂಬ್ಳೆ ಅವರು ಚೇತನ ಅವರ ಮೊದಲ ಮಗಳನ್ನು ಕೂಡ ತನ್ನ ಮಗಳಂತೆ ಸಾಕುತ್ತಾರೆ. ಇದರಿಂದಾಗಿಯೇ ಅನಿಲ್ ಕುಂಬಳೆ ಅವರನ್ನು ಜೆಂಟಲ್ ಮ್ಯಾನ್(Gentle Man) ಎಂಬುದಾಗಿ ಕರೆಯಬಹುದು.