ಚಹಲ್ ಗೆ ಅಣ್ಣಾ ಎಂದು ಕರೆದ ಚಹಲ್ ಪತ್ನಿ ಧನಶ್ರೀ!

ಚಹಲ್ ಅವರು ಭಾರತ ಕ್ರಿಕೆಟ್ ತಂಡದ ಅದ್ಭುತ ಸ್ಪಿನ್ ಮಾಂತ್ರಿಕ. ದೇಹ ಚಿಕ್ಕದಾದರೂ ಪ್ರತಿಭೆ ದೊಡ್ಡದು. ಯಜುವೇಂದ್ರ ಚಾಹಲ್ ಅವರು ಕೇವಲ ಕ್ರಿಕೆಟರ್ ಮಾತ್ರ ಅಲ್ಲ ಇವರು ಅದ್ಭುತ ಚೆಸ್ ಪ್ಯೇಯರ್ ಕೂಡ ಹೌದು. ಚೆಸ್ ಆಟದಲ್ಲಿ ತೋರುವ ಚಾಣಾಕ್ಷತನವನ್ನು ಚಹಲ್ ಅವರು ಕ್ರಿಕೆಟ್ ಮೈದಾನದಲ್ಲಿ ಕೂಡ ಪ್ರದರ್ಶನ ಮಾಡುತ್ತಿದ್ದಾರೆ. ವಿಧವಿಧವಾಗಿ ಬೌಲನ್ನು ಸ್ಪಿನ್ ಮಾಡುವ ಮೂಲಕ ಬ್ಯಾಟ್ಸ್ ಮನ್ ನನ್ನು ಔಟ್ ಮಾಡೋದರಲ್ಲಿ ಚಾಹಲ್ ಅವರು ಎತ್ತಿದ ಕೈ.

ಕನ್ನಡಿಗರಿಗೆ ಚಹಲ್ ಅವರ ಮೇಲೆ ವಿಶೇಷ ಪ್ರೀತಿ ಯಾಕೆಂದರೆ ಚಹಲ್ ಅವರು ಆರ್ ಸಿಬಿ ತಂಡದ ಆಟಗಾರರು ಕೂಡ ಆಗಿದ್ದವರು. ಈ ವರ್ಷದ ಐಪಿಎಲ್ ಮಾರ್ಚ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಬೇಸರದ ಸಂಗತಿಯೇನೆಂದರೆ ಚಹಾಲ್ ಅವರು ಈ ವರ್ಷ ಆರ್ ಸಿಬಿ ತಂಡ ನಿಂದ ಹೊರ ನಡೆದಿದ್ದಾರೆ. ಚಾಹಲ್ ಅವರು 6ಕೋಟಿ ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಸ್ಪಿನ್ ಮಾಂತ್ರಿಕ ನಿಲ್ಲದೆ ಆರ್ ಸಿಬಿ ತಂಡ ಐಪಿಎಲ್ ನಲ್ಲಿ ಹೋರಾಡುವುದು ಸುಲಭದ ಮಾತಲ್ಲ.

Chahal aand dhanashree

ಚಾನಲ್ ಅವರು ಧನಶ್ರೀ ವರ್ಮಾ ಎಂಬ ಡ್ಯಾನ್ಸರ್ ನನ್ನು ರಲ್ಲಿ ಮದುವೆಯಾಗಿದ್ದಾರೆ. ಧನಶ್ರೀ ವರ್ಮಾ ಮತ್ತು ಚಾಹಲ್ ಅವರು ಆಗಾಗ ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ಚಹಲ್ ಹೆಂಡತಿ ಧನಶ್ರೀ ಭಾರತದ ಆಟಗಾರರಾದ ಕೊಹ್ಲಿ ಶ್ರೇಯಸ್ ಅಯ್ಯರ್ ಮತ್ತು ಧವನ್ ಅವರೊಟ್ಟಿಗೆ ಕೂಡ ಡ್ಯಾನ್ಸ್ ಮಾಡಿದ್ದಾರೆ. ಚಹಲ್ ಮತ್ತು ಧನಶ್ರೀ ಇಬ್ಬರೂ ಒಬ್ಬರಿಗೊಬ್ಬರು ಕಾಲೆಳೆದುಕೊಂಡು ತರಲೆ ಮಾಡಿಕೊಂಡು ಜಾಲಿಯಾಗಿ ಇರುತ್ತಾರೆ.

ಚಹಲ್ ಹೆಂಡತಿ ದನಶ್ರೀಯವರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಹೌದು ಗೆಳೆಯರೆ.. ಧನಶ್ರೀ ಮತ್ತು ಚಹಲ್ ಹಿಮಾಲಯದ ಕಡೆಗೆ ಟ್ರಿಪ್ ಹೋಗಿದ್ದರು. ಆಗ ಧನಶ್ರೀ ಅವರು ಚಹಲ್ ಅವರೊಂದಿಗೆ ಸೆಲ್ಫಿ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಮಾಡುವ ಸಂದರ್ಭದಲ್ಲಿ ಬಾಯಿ ತಪ್ಪಿ ದನಶ್ರೀಯವರು ಚಾಹಲ್ ಅವರಿಗೆ ಭಾಯಿ ಸಾಬ್ ಎಂದು ಕರೆದಿದ್ದಾರೆ. ಹೆಂಡತಿ ಅಣ್ಣ ಅಂತ ಕರೆದಳು ಎಂದು ಅಭಿಮಾನಿಗಳು ಇದೀಗ ಧನಶ್ರೀ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಚಾಹಲ್ ಅವರಿಗೆ ಅನ್ಯಾಯವಾಗಿದೆ ಎಂದು ಅಭಿಮಾನಿಗಳು ತಮಾಷೆ ಮಾಡುತ್ತಿದ್ದಾರೆ.

Leave a Comment

error: Content is protected !!