Hardik Pandya: ಪ್ರೇಮಿಗಳ ದಿನದಂದೇ ಮಗನ ಮುಂದೇನೆ ಹಾರ್ದಿಕ ಪಾಂಡ್ಯ ಮತ್ತು ಹೆಂಡತಿ ಮಾಡಲು ಹೊರಟಿರುವುದೇನು ಗೊತ್ತಾ?

Hardik Pandya ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಆಗಿರುವ ಹಾರ್ದಿಕ ಪಾಂಡ್ಯ(Hardik Pandya) ಅವರು ನತಾಶಾ ಸ್ಟಾಂಕೋವಿಕ್(Natasa Stankovic) ಅವರನ್ನು ಪ್ರೀತಿಸಿ ಅವರ ಜೊತೆಗೆ ಲಿವಿನ್ ಜೀವನ ನಡೆಸುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈಗಾಗಲೇ ಇವರಿಗೆ ಅಗಸ್ತ್ಯ(Agasthya) ಎನ್ನುವ ಗಂಡು ಮಗ ಕೂಡ ಜನಿಸಿದ್ದಾನೆ. ಹಲವಾರು ವರ್ಷಗಳಿಂದ ಇಬ್ಬರೂ ಕೂಡ ಜೊತೆಗೆ ಜೀವಿಸುತ್ತಿದ್ದಾರೆ‌.

ಆದರೆ ಅಧಿಕೃತವಾಗಿ ಇಬ್ಬರೂ ಯಾವತ್ತೂ ಕೂಡ ಮದುವೆ ಆಗಿರಲಿಲ್ಲ. ಆಧುನಿಕ ದುನಿಯಾದಲ್ಲಿ ಇದೆಲ್ಲಾ ಕಾಮನ್ ಆಗಿಬಿಟ್ಟಿದೆ ಎನ್ನುವುದು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ ಎನ್ನುವುದನ್ನು ಭಾವಿಸುತ್ತೇವೆ. ಆದರೆ ಈಗ ಈ ಜೋಡಿ ಪ್ರೇಮಿಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಹೊರಟಿದೆ ಎಂಬ ವಿಚಾರ ತಿಳಿದು ಬಂದಿದೆ. ಹಾಗಿದ್ದರೆ ಈ ಜೋಡಿ ಮಗನ ಮುಂದೆ ಮಾಡೋಕೆ ಹೊರಟಿರುವ ಕೆಲಸವಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

hardik pandya with family

ಹೌದು ಮಿತ್ರವರೇ ಅಧಿಕೃತ ಸುದ್ದಿಗಳ ಪ್ರಕಾರ ರಾಜಸ್ಥಾನದ ಉದಯಪುರದಲ್ಲಿ ನತಾಶಾ ಹಾಗೂ ಹಾರ್ದಿಕ್ ಪಾಂಡ್ಯ(Hardik) ಇಬ್ಬರೂ ಕೂಡ ಹಿಂದೂ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗಳ ಪ್ರಕಾರ ಅಧಿಕೃತವಾಗಿ ಮದುವೆಯಾಗಲು ಹೊರಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಫೆಬ್ರವರಿ 13 ರಿಂದ ಮದುವೆ ಪ್ರಾರಂಭವಾಗಿ ಫೆಬ್ರವರಿ 16ರಂದು ಅಧಿಕೃತವಾಗಿ ಮುಗಿಯಲಿದೆ ಎಂಬುದಾಗಿ ಬಲ್ಲಮೂಲಗಳು ತಿಳಿಸಿವೆ. ಇತ್ತೀಚಿಗಷ್ಟೇ ಸಾಕಷ್ಟು ಕ್ರಿಕೆಟಿಗರ ಮದುವೆ ನಡೆಯುತ್ತಿರುವುದು ಅದಕ್ಕೆ ಹಾರ್ದಿಕ್ ಪಾಂಡ್ಯ ಅವರ ಮದುವೆ ಕೂಡ ಸೇರಿಕೊಳ್ಳಲಿದೆ.

ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಹಾರ್ದಿಕ್ ಪಾಂಡ್ಯ(Hardik Pandya) ಮುಂದಿನ ದಿನಗಳಲ್ಲಿ ಭಾರತದ ಭವಿಷ್ಯದ ನಾಯಕನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಹೆಚ್ಚಿದೆ. ಇನ್ನು ಅವರ ಜೀವನದಲ್ಲಿ ಪ್ರೇಮಿಗಳ ದಿನಾಚರಣೆಯ ದಿನದಂದು ಮದುವೆ ಎನ್ನುವ ಸಂತೋಷದ ಕಾರ್ಯಕ್ರಮ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಎಲ್ಲರೂ ಅವರಿಗೆ ಶುಭಾಶಯಗಳು ಕೋರೋಣ.

Leave a Comment

error: Content is protected !!