Gautham Adani: ಒಂದೇ ದಿನದಲ್ಲಿ 10 ಲಕ್ಷ ಕೋಟಿಯನ್ನು ಕಳೆದುಕೊಂಡಿರುವ ಭಾರತದ ಅತ್ಯಂತ ಶ್ರೀಮಂತ ಅದಾನಿ ನಿಜಕ್ಕೂ ಯಾರು?

Adani ಇತ್ತೀಚಿಗಷ್ಟೇ ಭಾರತದ ಅತ್ಯಂತ ಶ್ರೀಮಂತ ಹಾಗೂ ಇಡೀ ಪ್ರಪಂಚದಲ್ಲಿ ಅತ್ಯಂತ ಎರಡನೇ ಶ್ರೀಮಂತ ಆಗಿದ್ದ ಗೌತಮ್ ಅದಾನಿ(Guatham Adani) ಅವರು ಹಿಂಡೆನ್ ಬರ್ಗ್ ಎನ್ನುವ ಫೈನಾನ್ಸಿಯಲ್ ರಿಸರ್ಚ್ ಸಂಸ್ಥೆ ಬಹಿರಂಗಪಡಿಸಿರುವ ದಾಖಲೆಗಳ ಮೂಲಕ ಆರ್ಥಿಕವಾಗಿ ಹೊಡೆತ ತಿಂದು ಈಗ ದಿನೇ ದಿನೇ ಕೆಳಕ್ಕೆ ಕುಸಿಯುತ್ತಾ ಬಂದಿದ್ದು ಕೆಲವೇ ದಿನಗಳಲ್ಲಿ 10 ಲಕ್ಷ ಕೋಟಿಯನ್ನು ಲಾಸ್ ಮಾಡಿಕೊಂಡಿದ್ದಾರೆ. ಇವರು ಯಾರು ಇವರ ಹಿನ್ನೆಲೆ ಏನು ಎನ್ನುವುದರ ಕುರಿತಂತೆ ಪ್ರತಿಯೊಬ್ಬರೂ ಕೂಡ ಕುತೂಹಲರಾಗಿದ್ದು ಅವರ ಬಗ್ಗೆ ಸಂಪೂರ್ಣ ವಿವರವನ್ನು ನೀಡಲು ನಾವು ಹೊರಟಿದ್ದೇವೆ ಬನ್ನಿ.

ಅಹಮದಾಬಾದ್ ನಲ್ಲಿ ಜನಿಸಿರುವ ಇವರು ಬಾಲ್ಯದಿಂದಲೇ ಸಾಕಷ್ಟು ಚುರುಕಾಗಿದ್ದರು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು ವ್ಯಾಪಾರದ ಕುರಿತಂತೆ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದು ಅತ್ಯಂತ ಚಿಕ್ಕವಯಸ್ಸಿನಲ್ಲೇ ಮುಂಬೈಗೆ ತೆರಳಿ ಡೈಮಂಡ್ ಕಟಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಸಾಕಷ್ಟು ಕಡೆಗಳಲ್ಲಿ ವ್ಯಾಪಾರ ಹಾಗೂ ಹುಡುಗಿಗಳನ್ನು ಮಾಡುತ್ತಾರೆ ಆದರೆ ಅದಾನಿ(Adani) ಅವರಿಗೆ ಈಗ ಇರುವಂತೆ ದೊಡ್ಡ ಮಟ್ಟದ ಲಾಭ ಯಾವುದರಿಂದಲೂ ಕೂಡ ಸಿಗುವುದಿಲ್ಲ ಆದರೆ ಅವರ ಅದೃಷ್ಟ ಮೊದಲಿಗೇ ಕುಲಾಯಿಸಿದ್ದು ಬಂದರಿನ ಮೂಲಕ.

Adani

ಹೌದು ಗುಜರಾತಿನ ಅತಿ ದೊಡ್ಡ ಬಂದರಾಗಿರುವ ಮುಂದ್ರಾ ಬಂದರಿನಲ್ಲಿ ಅದಾನಿ(Adani) ಅವರು ಹೂಡಿಕೆ ಮಾಡುತ್ತಾರೆ. ಹಂತ ಹಂತವಾಗಿ ಆ ಬಂದರನ್ನು ಸಂಪೂರ್ಣವಾಗಿ ತಮ್ಮ ವಶ ಮಾಡಿಕೊಳ್ಳುತ್ತಾರೆ. ಈಗಾಗಲೇ ಅವರ ಬಳಿ 8ಕ್ಕೂ ಹೆಚ್ಚು ಏರ್ಪೋರ್ಟ್ ಗಳು ಸೇರಿದಂತೆ ಹಲವಾರು ಕಂಪನಿಗಳು ಇವರ ಹೆಸರಿನಲ್ಲಿವೆ. ಅಡುಗೆ ಎಣ್ಣೆ ಸಿಮೆಂಟ್ ಶಕ್ತಿ ಸ್ಥಾವರಗಳು ಹೀಗೆ ಅದಾನಿ ಅವರು ಮುಟ್ಟದ ಕ್ಷೇತ್ರ ಇಲ್ಲ ಎಂದು ಹೇಳಬಹುದಾಗಿದೆ. ಬಹುತೇಕ ಲಾಭವನ್ನು ತರುವಂತಹ ಪ್ರತಿಯೊಂದು ಕ್ಷೇತ್ರಗಳಲ್ಲಿ ಕೂಡ ಅದಾನಿ ಅವರ ಹೂಡಿಕೆ ಇದ್ದೇ ಇದೆ.

ಯಾವ ಮಟ್ಟಿಗೆ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಎಂದರೆ ಭಾರತದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ(Mukesh Ambani) ಅವರನ್ನು ಹಿಂದಕ್ಕೆ ಏಳು ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದ ಅದಾನಿ ನೂರು ಬಿಲಿಯನ್ ಡಾಲರ್ ಅಧಿಕ ಸಂಪತ್ತಿಗೆ ಒಡೆಯರಾಗುತ್ತಾರೆ. ರಾಜಕಾರಣದಲ್ಲಿ ಇರುವಂತಹ ಮೋದಿ( Modi) ಅವರಿಂದ ಹಿಡಿದು ಬಹುತೇಕ ಎಲ್ಲಾ ರಾಜಕೀಯ ನಾಯಕರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ ಇತ್ತೀಚಿಗೆ ಬಂದಿರುವಂತಹ ಆ ಒಂದು ವರದಿಯಿಂದ ಅದಾನಿಯವರು ಶೇಕ್ ಆಗುತ್ತಿದ್ದಾರೆ. ಇದನ್ನು ಮುಂದಿನ ದಿನಗಳಲ್ಲಿ ಅವರು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!