MS Dhoni: ವಿರಾಟ್ ಕೊಹ್ಲಿ ರೆಕಾರ್ಡ್ ನೆಲಸಮ ಮಾಡಿದ ಮಹೇಂದ್ರ ಸಿಂಗ್ ಧೋನಿ.

MS Dhoni ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಈಗಾಗಲೇ ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ನಿವೃತ್ತಿ ಹೊಂದಿ ಸಾಕಷ್ಟು ವರ್ಷಗಳೇ ಕಳೆದಿದ್ದರೂ ಕೂಡ ಇಂದಿಗೂ ಅವರ ಜನಪ್ರಿಯತೆ ಹಾಗೂ ಬೇಡಿಕೆ ಎನ್ನುವುದು ಕ್ರಿಕೆಟ್ ಕ್ಷೇತ್ರದಲ್ಲಿ ಸ್ಟಾರ್ ಕ್ರಿಕೆಟರಿಗಿಂತ ಹೆಚ್ಚಾಗಿದೆ ಎಂದು ಈಗಾಗಲೇ ಪ್ರತೀ ಬಾರಿ ನಿಮಗೆ ತಿಳಿದು ಬರುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ ಪರವಾಗಿ ಈಗಲೂ ಕೂಡ 42 ವರ್ಷ ವಯಸ್ಸಾಗಿದ್ದರು ಮಹೇಂದ್ರ ಸಿಂಗ್ ಧೋನಿ ಅವರು ಮಾಡುವಂತಹ ನಾಯಕತ್ವ ಹಾಗೂ ಫಿನಿಷರ್ ರೀತಿಯಲ್ಲಿ ಕಾಣಿಸಿಕೊಳ್ಳುವ ಆಕ್ರಮಣಕಾರಿ ಬ್ಯಾಟಿಂಗ್ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಇಂದಿಗೂ ಕೂಡ ಅವರು ರಾಷ್ಟ್ರೀಯ ತಂಡದಲ್ಲಿ ಆಡಬಲ್ಲಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ.

ನಮ್ಮ ಭಾರತದ ಕ್ರೀಡಾಪಟುಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಅತ್ಯಂತ ಹೆಚ್ಚು ಫಾಲ್ಲೋರ್ಸ್ ಹೊಂದಿರುವಂತಹ ಕ್ರೀಡಾಪಟು ಯಾರು ಎಂದು ಕೇಳಿದರೆ ಕೇಳಿಬರುವಂತಹ ಒಂದೇ ಒಂದು ಹೆಸರು ಎಂದರೆ ಅದು ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ(Virat Kohli) ಅವರಿಗಿಂತ ಮಹೇಂದ್ರ ಸಿಂಗ್ ಧೋನಿ ಕಡಿಮೆ ಫಾಲವರ್ಸ್ ಗಳನ್ನು ಹೊಂದಿದ್ದರು ಕೂಡ ವಿರಾಟ್ ಕೊಹ್ಲಿ ಅವರ ಸಾಧನೆಯನ್ನೇ ಮುರಿಯುವಂತಹ ಕೆಲಸವನ್ನು ಧೋನಿ ಮಾಡಿದ್ದಾರೆ.

ಹೌದು ಇನ್ಸ್ಟಾಗ್ರಾಮ್ ನಲ್ಲಿ ಈಗಾಗಲೇ ಇತ್ತೀಚಿಗಷ್ಟೇ ಅವರ ಬರ್ತಡೆ ಸಂದರ್ಭದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಸರಿಸುಮಾರು ಒಂಬತ್ತು ಮಿಲಿಯನ್ ಲೈಕ್ಸ್ ಹಾಗೂ 45 ಮಿಲಿಯನ್ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು ಇದೆಲ್ಲ ನಡೆದಿದ್ದು ಕೇವಲ 24 ಗಂಟೆಗಳ ಆಸ್ಪಾಸಿನಲ್ಲಿ. ಈ ಮೂಲಕ ವಿರಾಟ್ ಕೊಹ್ಲಿ ಅವರಿಗೆ ಹೆಚ್ಚಿನ ಫಾಲೋವರ್ಸ್ ಗಳಿರಬಹುದು ಆದರೆ ರೀಚ್ ವಿಚಾರದಲ್ಲಿ ಧೋನಿ ಅವರನ್ನು ಮೀರಿಸುವವರು ಯಾರು ಇಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ‌.

Leave a Comment

error: Content is protected !!