Dboss: ದರ್ಶನ್ ರವರ ಫಾರ್ಮ್ ಹೌಸ್ ಗೆ ಬಂದಿದೆ ಗುಜರಾತ್ ತಳಿಯ ಹಸುಗಳು. ಇವುಗಳ ಬೆಲೆ ಎಷ್ಟು ಗೊತ್ತಾ?

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಮನುಷ್ಯರಿಗಿಂತ ಪ್ರಾಣಿಯ ಮೇಲೆ ಸಾಕಷ್ಟು ಕಾಳಜಿ ಹಾಗೂ ವಿಶೇಷವಾದ ಮಮತೆಯನ್ನು ಹೊಂದಿದ್ದಾರೆ ಎಂಬುದು ಈಗಾಗಲೇ ಸಾಕಷ್ಟು ಸಮಯಗಳಲ್ಲಿ ಸಾಬೀತಾಗಿದ್ದು ಮಾತ್ರವಲ್ಲದೆ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಮಿನಿ ಮೃಗಾಲಯವನ್ನು ಕಟ್ಟಿದ್ದಾರೆ ಎಂದರು ತಪ್ಪಾಗಲಾರದು.

ಸರ್ಕಾರ ಹಾಗೂ ಅರಣ್ಯ ಇಲಾಖೆಯ ಒಪ್ಪಿಗೆಯನ್ನು ಪಡೆದುಕೊಂಡು ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ವಿಶೇಷ ತಳಿಯ ಕುದುರೆ ಆಡು ಕುರಿ ಪಕ್ಷಿ ಸೇರಿದಂತೆ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕಿಕೊಂಡಿದ್ದಾರೆ. ಈಗ ಈ ಕಲೆಕ್ಷನ್ ಗೆ ಮತ್ತೊಂದು ಹೊಸ ವಿಶೇಷವಾದ ಸೇರ್ಪಡೆಯಾಗಿದೆ ಎಂದು ಹೇಳಬಹುದಾಗಿದೆ.

ಹೌದು ಈಗಾಗಲೇ ದರ್ಶನ್(Darshan) ಅವರ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ತಳಿಯ ಹಸು ಹಾಗೂ ಎತ್ತುಗಳಿವೆ. ಇವುಗಳ ಕಲೆಕ್ಷನ್ನಲ್ಲಿ ಈಗ ಗುಜರಾತ್ ಮೂಲದ Conkrej ತಳಿಯ ಹಸುಗಳನ್ನು ಕೂಡ ದರ್ಶನ್ ರವರ ಫಾರ್ಮ್ ಹೌಸ್ ಗೆ ಕರೆತರಲಾಗಿದೆ ಎಂಬುದಾಗಿ ಫೋಟೋಗಳು ಹರಿದಾಡುತ್ತಿವೆ. ನೋಡೋದಕ್ಕೆ ದೊಡ್ಡ ಗಾತ್ರದ ಕೊಂಬುಗಳನ್ನು ಹೊಂದಿರುವಂತಹ ಈ ಹಸುಗಳು ಬೆಲೆಯಲ್ಲಿ ಕೂಡ ದುಬಾರಿ.

ಹೌದು ಈಗಾಗಲೇ ಗೂಗಲ್ ನಲ್ಲಿ ಸರ್ಚ್ ಮಾಡಿರುವ ಪ್ರಕಾರ ಈ ಹಸುಗಳ ಬೆಲೆ 45 ರಿಂದ 55,000 ಇರುತ್ತದೆ ಎಂಬುದಾಗಿ ಅಂದಾಜಿಸಲಾಗಿದ್ದು ಇವುಗಳು ದಿನಕ್ಕೆ 30 ರಿಂದ 40 ಲೀಟರ್ ನೀಡುತ್ತವೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಈ ಹಸುಗಳ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ತಪ್ಪದೆ ಈ ವಿಚಾರವನ್ನು ಡಿ ಬಾಸ್ ಅಭಿಮಾನಿಗಳೊಂದಿಗೆ ಶೇರ್ ಮಾಡಿ.

Leave a Comment

error: Content is protected !!