IPL 2023: Rcb ಹಾಗೂ ಲಕ್ನೋ ಮ್ಯಾಚ್ ನಲ್ಲಿ ಸಿಕ್ಸ್ ಗಳ ಸುರಿಮಳೆ RCB ಬಾರಿಸಿದ ಸಿಕ್ಸ್ ಎಷ್ಟು ಗೊತ್ತಾ?

RCB ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(Chinnaswamy Stadium) ಲಕ್ನೋ ವಿರುದ್ಧ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಈಗಾಗಲೇ ಭರ್ಜರಿ ಮೊತ್ತವನ್ನು ಕಲೆ ಹಾಕಿದ್ದು ಖಂಡಿತವಾಗಿ ನಮ್ಮ ಹುಡುಗರ ಗೆಲ್ಲೋದು ಪಕ್ಕ ಎನ್ನುವುದಾಗಿ ಅಭಿಮಾನಿಗಳು ಈಗಾಗಲೇ ನಿಶ್ಚಯವಾಗಿ ಬಿಟ್ಟಿದ್ದಾರೆ ಎಂದು ಹೇಳಬಹುದಾಗಿದೆ.

ಟಾಸ್ ಸೋತರು ಕೂಡ ಮೊದಲು ಬ್ಯಾಟಿಂಗಿಗೆ ಇಳಿದ ಡು ಪ್ಲೆಸಿಸ್(Faf Du Plesis) ನೇತೃತ್ವದ ಬೆಂಗಳೂರು ಪಡೆ 20 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ಭರ್ಜರಿ 212 ರನ್ನುಗಳನ್ನು ಬಾರಿಸುವಲ್ಲಿ ಯಶಸ್ವಿ ಆಯ್ತು. ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ(Virat Kohli) ಡು ಪ್ಲೆಸಿಸ್ ಹಾಗೂ ಮ್ಯಾಕ್ಸ್ ವೆಲ್ ಮೂವರು ಕೂಡ ಅರ್ಧಶತಕವನ್ನು ಬಾರಿಸಿದ್ದಾರೆ.

ಹಾಗಿದ್ದರೆ ಬನ್ನಿ ಈ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ಎಷ್ಟು ಸಿಕ್ಸರ್ ಗಳನ್ನು ಬಾರಿಸಿದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಮೊದಲಿಗೆ ವಿರಾಟ್ ಕೊಹ್ಲಿ(Kohli) ಅವರನ್ನು ನೋಡುವುದಾದರೆ 44 ಎಸೆತಗಳಲ್ಲಿ 61 ಬಾರಿಸಿದ್ದಾರೆ ಇದರಲ್ಲಿ 4 ಸಿಕ್ಸರ್ ಗಳಿವೆ. ಡು ಪ್ಲೆಸಿಸ್ 46 ಎಸೆತಗಳಲ್ಲಿ 79 ರನ್ನುಗಳನ್ನು ಬಾರಿಸಿದ್ದು ಇದರಲ್ಲಿ 5 ಸಿಕ್ಸರ್ ಇದೆ. ಇನ್ನು ಮ್ಯಾಕ್ಸ್ ವೆಲ್ 29 ಎಸೆತಗಳಲ್ಲಿ 59 ರನ್ನುಗಳನ್ನು ಬಾರಿಸಿದ್ದಾರೆ. ಇದರಲ್ಲಿ ಭರ್ಜರಿ ಆರು ಸಿಕ್ಸರ್ ಗಳು ಅಡಕವಾಗಿವೆ.

ಅಂದರೆ ಒಟ್ಟಾರೆಯಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ 15 ಸಿಕ್ಸರ್ ಗಳನ್ನು ಬಾರಿಸಿದೆ. ಒಟ್ಟಾರೆಯಾಗಿ ಭರ್ಜರಿ ಟಾರ್ಗೆಟ್ ಲಕ್ನೋ ತಂಡಕ್ಕೆ ನೀಡಿದ್ದು ಆರ್‌ಸಿಬಿ ತಂಡ ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ ಎಂದು ಹೇಳಬಹುದಾಗಿದೆ. ಆರ್ಸಿಬಿ ತಂಡದ ಬ್ಯಾಟಿಂಗ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!