Rcb: ಈ ಬಾರಿ ಆರ್ಸಿಬಿ ಕಪ್ ಗೆಲ್ಲೋದು ಪಕ್ಕ ಯಾಕೆ ಗೊತ್ತಾ? ಇಲ್ಲಿ ನೋಡಿ ಸಿಕ್ತು ಪರ್ಫೆಕ್ಟ್ ಕಾರಣ!

RCB ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ಐಪಿಎಲ್ ನ ಪಾಯಿಂಟ್ಸ್ ಟೇಬಲ್ ನಲ್ಲಿ ಆರು ಪಂದ್ಯಗಳಲ್ಲಿ ಮೂರು ಪಂದ್ಯದಲ್ಲಿ ಸೋತು ಮೂರು ಪಂದ್ಯದಲ್ಲಿ ಗೆದ್ದು ಐದನೇ ಸ್ಥಾನದಲ್ಲಿದೆ. ಹೀಗಿದ್ದರೂ ಕೂಡ ಈ ಬಾರಿ ನಮ್ಮ ತಂಡ ಕಪ್ ಗೆಲ್ಲೋದು ಪಕ್ಕ ಎನ್ನುವುದಾಗಿ ಒಂದು ಮಾಹಿತಿ ಸಿಕ್ಕಿದೆ.

ಅಷ್ಟಕ್ಕೂ ಇದ್ಯಾವುದೋ ಫಿಕ್ಸಿಂಗ್ ಅಂತ ಅನ್ಕೋಬೇಡಿ. ಇದುಕ್ಕೊಂದು ಸರಿಯಾದ ಕಾರಣ ಕೂಡ ಇದೆ. ಕಾರಣ ಎನ್ನುವುದಕ್ಕಿಂತ ಕಾರಣಗಳು ಎನ್ನುವುದು ಸೂಕ್ತವಾಗಬಹುದು. ಮೊದಲನೇದಾಗಿ ಮುಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಬಹುದು ಇದರಿಂದಾಗಿ ಡ್ಯುಪ್ಲೆಸಿಸ್ ರವರಿಗೆ ಮುಖ್ಯವಾಗಿ ಓಪನಿಂಗ್ ಬ್ಯಾಟ್ಸ್ಮನ್ ಆಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬಹುದಾದ ಸ್ವಾತಂತ್ರ್ಯ ಸಿಗುತ್ತದೆ.

ಎಲ್ಲಕ್ಕಿಂತ ಪ್ರಮುಖವಾಗಿ ನೀವು ಬೌಲಿಂಗ್ ವಿಭಾಗ ಅತ್ಯಂತ ಕಳಪೆ ಎಂಬುದಾಗಿ ಭಾವಿಸಿದ್ದೀರಿ. ಆದರೆ ಅತ್ಯಂತ ಹೆಚ್ಚು ವಿಕೆಟ್ ಗೆದ್ದಿರುವ ಹಾಗೂ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿ ನಮ್ಮ ಆರ್‌ಸಿಬಿ ತಂಡದ ಮಿಯಾ ಭಾಯ್ ಆಗಿರುವ ಸಿರಾಜ್(Siraj) ರವರು ಮೊದಲನೇ ಸ್ಥಾನದಲ್ಲಿ 12 ವಿಕೆಟ್ಗಳೊಂದಿಗೆ ಇದ್ದಾರೆ. ಇದರ ಜೊತೆಗೆ ಬ್ಯಾಟಿಂಗ್ ವಿಭಾಗದಲ್ಲಿ ಕೂಡ ಮಾತಾಡೋಣ ಬನ್ನಿ.

ಆರ್ ಸಿ ಬಿ ತಂಡದ ನಾಯಕ ಆಗಿರುವ FAF DU PLESIS ಆರು ಪಂದ್ಯಗಳಿಂದ 343 ರನ್ನುಗಳನ್ನು ಗಳಿಸಿ ಮೊದಲ ಸ್ಥಾನದಲ್ಲಿ ಇದ್ದರೆ ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು 279 ರನ್ನುಗಳ ಜೊತೆಗೆ ಇದ್ದಾರೆ. ಹೀಗಾಗಿ ಅತ್ಯಂತ ಹೆಚ್ಚು ರನ್ ಗಳಿಸಿರುವ ಆಟಗಾರರ ಸಾಲಿನಲ್ಲಿ ಕೂಡ ನಮ್ಮ ಆರ್‌ಸಿಬಿ ಆಟಗಾರರು ಮುಂಚೂಣಿ ಸ್ಥಾನದಲ್ಲಿದ್ದಾರೆ. ಈ ಮೂಲಕ ನಾವು ಈ ಬಾರಿ ಕಪ್ಪು ಗೆಲ್ಲುವುದು ನಿಶ್ಚಿತ ಎಂಬುದಾಗಿ ಕ್ರಿಕೆಟ್ ಪಂಡಿತರು ಕೂಡ ಲೆಕ್ಕಾಚಾರ ಹಾಕುತ್ತಿದ್ದಾರೆ.

Leave a Comment

error: Content is protected !!