Rohit Sharma: ರೋಹಿತ್ ಶರ್ಮಾ ಅವರಿಗೆ ಅತ್ಯಂತ ಕಿರಿಕಿರಿ ಉಂಟುಮಾಡುವ ಭಾರತೀಯ ಕ್ರಿಕೆಟರ್ ಯಾರು? ನೀವೇ ನೋಡಿ.

Rohit Sharma ರೋಹಿತ್ ಶರ್ಮ ಪೂರ್ಣಪ್ರಮಾಣದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಂಡು ಈಗಾಗಲೇ ಸರಿ ಸುಮಾರು ಮೂರು ವರ್ಷಗಳ ಕಳೆದಿವೆ ಎಂದು ಹೇಳಬಹುದಾಗಿದೆ. ಕೇವಲ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡದ ನಾಯಕನಾಗಿ ಕೂಡ ಸಾಕಷ್ಟು ಯಶಸ್ವಿ ಗೆಲುವುಗಳನ್ನು ರೋಹಿತ್ ಶರ್ಮಾ(Rohit Sharma) ಕಂಡಿದ್ದಾರೆ.

ಈಗಾಗಲೇ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ 5 ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದಾರೆ. ಸದ್ಯಕ್ಕೆ ಈ ಬಾರಿ ಭಾರತದಲ್ಲಿ ನಡೆಯಲಿರುವಂತಹ ಏಕದಿನ ವಿಶ್ವಕಪ್ಗಾಗಿ ಕೂಡ ನಾಯಕನಾಗಿ ರೋಹಿತ್ ಶರ್ಮ(Rohit Sharma) ಅವರು ಸಾಕಷ್ಟು ಸಿದ್ಧತೆಯನ್ನು ನಡೆಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸಂದರ್ಶನ ಒಂದರಲ್ಲಿ ಅವರು ಭಾಗವಹಿಸಿದ್ದು ಒಂದು ಪ್ರಶ್ನೆಗೆ ಅವರು ನೀಡಿರುವ ಉತ್ತರ ಸಾಕಷ್ಟು ಸದ್ದು ಮಾಡುತ್ತಿದೆ.

ಭಾರತೀಯ ಕ್ರಿಕೆಟ್ ತಂಡದಲ್ಲಿ ನಿಮಗೆ ಅತ್ಯಂತ ಕಿರಿಕಿರಿ ನೀಡುವಂತಹ ಆಟಗಾರ ಯಾರು ಎಂಬುದಾಗಿ ಶ್ರೀಶಾಂತ್(Sreesanth) ರೋಹಿತ್ ಶರ್ಮ ಅವರಿಗೆ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಸಾಕಷ್ಟು ಸಮಯಗಳು ಯೋಚಿಸಿದ ನಂತರ ರೋಹಿತ್ ಶರ್ಮ ನೀಡಿದ ಉತ್ತರ ನಿಜಕ್ಕೂ ಕೂಡ ಆಶ್ಚರ್ಯಕರವಾಗಿತ್ತು.

ಹೌದು ರೋಹಿತ್ ಶರ್ಮ ನೀಡಿದ ಉತ್ತರ ದಿನೇಶ್ ಕಾರ್ತಿಕ್(Dinesh Karthik) ಆಗಿತ್ತು. ಬಹುಶ ಅವರು ಸಾಕಷ್ಟು ಬಾರಿ ರನ್ ಓಡುವಾಗ ರನ್ ಔಟ್ ಮಾಡಿರುವ ಕಾರಣಕ್ಕಾಗಿ ಹೀಗೆ ಹೇಳಿರಬಹುದು ಎಂಬುದಾಗಿ ಶ್ರೀಶಾಂತ್ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!