Chahal: ಚಹಾಲ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿರುವುದು ಕನ್ಫರ್ಮ್ ಆಯ್ತಾ? ಈ ಫೋಟೋ ನೋಡಿ ನಿಮಗೆ ಅರ್ಥ ಆಗುತ್ತೆ.

Yuzi Chahal ಯಜುವೇಂದ್ರ ಚಹಾಲ್ ರವರು ಈ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದಲ್ಲಿ ಇದ್ದಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈಗ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದರು ಕೂಡ ಆರ್ಸಿಬಿ ತಂಡದ ಪರವಾಗಿ ಇರುವಂತಹ ಪ್ರೀತಿ ಚಹಾಲ್ ಅವರಿಗೆ ಕಿಂಚಿತ್ತು ಕೂಡ ಕಡಿಮೆ ಆಗಿಲ್ಲ ಎನ್ನುವುದನ್ನು ಈಗಾಗಲೇ ಹಲವಾರು ಬಾರಿ ಅವರು ಸಾಬೀತುಪಡಿಸಿದ್ದಾರೆ.

ಇನ್ನು ಅವರ ವೈಯಕ್ತಿಕ ಜೀವನದ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಗಳು ಸಾಲು ಸಾಲಾಗಿ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಹೌದು ಕೆಲವು ತಿಂಗಳುಗಳ ಹಿಂದೆಯಷ್ಟೇ ಹೋದರೆ ನೀವು ಯಜುವೇಂದ್ರ ಚಹಾಲ್(Yazuvendra Chahal) ಹಾಗೂ ಅವರ ಪತ್ನಿ ಧನಶ್ರೀ(Dhanashree) ಅವರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಬೇರೆ ಬೇರೆ ಆಗಬಹುದು ಎನ್ನುವ ಸುದ್ದಿಗಳು ಓಡಾಡುತ್ತಿದ್ದುದ್ದನ್ನು ಕಾಣಬಹುದಾಗಿತ್ತು.

ಇದಕ್ಕೆ ಭಾರತೀಯ ಕ್ರಿಕೆಟ್ ತಂಡದ ಮತ್ತೊಬ್ಬ ಆಟಗಾರ ಆಗಿರುವ ಶ್ರೇಯಸ್ ಅಯ್ಯರ್(Shreyas Iyer) ಅವರೇ ಕಾರಣ ಎಂಬುದಾಗಿ ಕೂಡ ಹೇಳಲಾಗುತ್ತಿತ್ತು. ಈಗ ಮತ್ತೊಮ್ಮೆ ಅದೇ ರೀತಿಯಲ್ಲಿ ಸುದ್ದಿಗಳು ಓಡಾಡುತ್ತಿದ್ದು ಮತ್ತೊಮ್ಮೆ ಇವರಿಬ್ಬರ ನಡುವೆ ಬಿರುಕು ಏರ್ಪಟ್ಟಿರಬಹುದು ಎನ್ನುವ ಶಂಕೆಗಳು ವ್ಯಕ್ತವಾಗುತ್ತಿದೆ.

ಯಾಕೆಂದರೆ ಶಾರ್ದುಲ್ ಠಾಕೂರ್ ಅವರ ಮದುವೆಯ ಸಮಾರಂಭದಲ್ಲಿ ರೋಹಿತ್ ಶರ್ಮಾ(Rohit Sharma) ದಂಪತಿಗಳ ಜೊತೆಗೆ ಧನುಶ್ರೀ ಕೂಡ ಕಾಣಿಸಿಕೊಂಡಿದ್ದರು ಆದರೆ ಅವರ ಜೊತೆಗೆ ಚಹಾಲ್(Chahal) ಇರಲಿಲ್ಲ ಬದಲಾಗಿ ಶ್ರೇಯಸ್ ಅಯ್ಯರ್ ಅವರು ಕಾಣಿಸಿಕೊಂಡಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಈ ಹಿಂದೆ ನಡೆದಿರುವಂತಹ ಕೆಲವೊಂದು ಘಟನೆಗಳು ಕೂಡ ಇದಕ್ಕೆ ಪೂರಕವಾಗಿವೆ. ಮುಂದಿನ ದಿನಗಳಲ್ಲಿಯೇ ನಾವು ಇದರ ಸತ್ಯಾಂಶವನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!