HIV ಟೆಸ್ಟ್ ಮಾಡಿಸಿಕೊಂಡ ಭಾರತದ ಸ್ಟಾರ್ ಕ್ರಿಕೆಟಿಗ! ಛೆ ಎಂಥಾ ಕಾಲ ಬಂತಪ್ಪ ಎಂದ ಜನ!

Shikhar Dhawan ಭಾರತೀಯ ಎಡಗೈ ಆರಂಭಿಕ ಬ್ಯಾಟ್ಸ್ಮನ್ ಆಗಿರುವಂತಹ ಶಿಖರ ಧವನ್(Shikhar Dhawan) ಅವರ ಕುರಿತಂತೆ ನಿಮಗೆಲ್ಲರಿಗೂ ತಿಳಿದೇ ಇದೆ. ಐಸಿಸಿ ಇವೆಂಟ್ಗಳಲ್ಲಿ ಗಬ್ಬರ್ ಸಿಂಗ್(Gabbar Singh) ಬ್ಯಾಟಿಂಗ್ ಮಾಡುವ ರೀತಿ ನಿಜ ಕೂಡ ಪ್ರತಿಯೊಬ್ಬರನ್ನು ರೋಮಾಂಚತಗೊಳಿಸುತ್ತೆ. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆಯುವಲ್ಲಿ ಶಿಖರ್ ಧವನ್ ಸಂಪೂರ್ಣವಾಗಿ ವಿಫಲವಾಗಿದ್ದು ಈ ಬಾರಿ ಐಪಿಎಲ್(IPL) ನಲ್ಲಿ ಪಂಜಾಬ್ ಪರ ಮಿಂಚುವ ನೀರಿಕ್ಷೆಯಲ್ಲಿದ್ದಾರೆ.

ಈ ಮಧ್ಯದಲ್ಲಿ ರಾಷ್ಟ್ರೀಯ ವಾಹಿನಿ ಆಗಿರುವ ಆಜ್ ತಕ್(Aaj Tak) ಗೆ ಸಂದರ್ಶನವನ್ನು ನೀಡಿರುವಂತಹ ಶಿಖರ ಧವನ್ ತಮ್ಮ ಜೀವನದ ಒಂದು ಇಂಟರೆಸ್ಟಿಂಗ್ ಕಹಾನಿಯನ್ನು ಬಿಚ್ಚಿಟ್ಟಿದ್ದು ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಚಕಿತರಾಗಿದ್ದಾರೆ. ಹೌದು ಅದೊಂದು ಕೆಲಸ ಮಾಡಿದ ನಂತರ ಶಿಖರ ಧವನ್(Dhawan) ರವರು ಎಚ್ಐವಿ ಟೆಸ್ಟ್ ಮಾಡಿಸಿದ್ದರಂತೆ.

ಹೌದು 14 ರಿಂದ 15 ವರ್ಷ ಇರಬೇಕಾದರೆ ಧವನ್ ರವರು ಮನಾಲಿ ಟ್ರಿಪ್ ಗಾಗಿ ಹೋಗಿದ್ದರಂತೆ. ಈ ಸಂದರ್ಭದಲ್ಲಿ ಮನೆಯವರಿಗೆ ತಿಳಿಯದಂತೆ ಬೆನ್ನ ಹಿಂದೆ ಟ್ಯಾಟೂ ಹಾಕಿಸಿಕೊಂಡಿದ್ದರಂತೆ‌. ಈಗಲೂ ಕೂಡ ನೀವು ಅವರ ಮೈತುಂಬ ನೋಡಿದರೆ ಹಲವಾರು ಟ್ಯಾಟುಗಳು ಸಿಗುತ್ತವೆ. ಆದರೆ ಆ ಸಂದರ್ಭದಲ್ಲಿ ಯಾರಿಗೂ ತಿಳಿಯದಂತೆ ಹಾಕಿಸಿಕೊಂಡಿದ್ದ ಟ್ಯಾಟು ಅವರ ತಂದೆಯ ಕಣ್ಣಿಗೆ ಬಿತ್ತು. ಈ ಸಂದರ್ಭದಲ್ಲಿ ಸರಿಯಾಗಿ ತಂದೆಯಿಂದ ಥಳಿಸಿಕೊಂಡ ಶಿಖರ್ ಧವನ್(Shikhar Dhawan) ರವರಿಗೆ ಎಲ್ಲರಿಗೂ ಬಳಸಿರುವಂತಹ ಸೂ’ ಜಿಯಿಂದಲೇ ಟ್ಯಾಟು ಹಾಕಿಸಿಕೊಂಡಿದ್ದರಿಂದ ಹೆಚ್ಐವಿ ಆಗುವಂತಹ ಭಯ ಪ್ರಾರಂಭವಾಗುತ್ತದೆ.

ಆದರೆ ಪರೀಕ್ಷೆ ಮಾಡಿಸಿಕೊಂಡು ಬಂದಾಗ ಮಾತ್ರ ಅದೃಷ್ಟವಶಾತ್ ನೆಗೆಟಿವ್ ಎಂಬುದಾಗಿ ಬರುತ್ತದೆ. ಈ ಸಂದರ್ಭವನ್ನು ಇತ್ತೀಚಿಗಷ್ಟೇ ಸಂದರ್ಶನದಲ್ಲಿ ಮಾತನಾಡುವಾಗ ಹಾಸ್ಯಮಯವಾಗಿ ನಿರೂಪಕರಿಗೆ ಈ ವಿಚಾರವನ್ನು ಶಿಖರ್ ಧವನ್ ವಿವರಿಸಿತ್ತಾರೆ. ನಮ್ಮ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಶಿಖರ ಧವನ್(Dhawan) ಇತ್ತೀಚಿನ ದಿನಗಳಲ್ಲಿ ಭಾರತೀಯ ತಂಡದಲ್ಲಿ ಕಾಣಿಸಿಕೊಳ್ಳದೆ ನೇರವಾಗಿ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಸಾಕಷ್ಟು ಮಂದಿ ಕ್ರಿಕೆಟ್ ಪ್ರೇಮಿಗಳಲ್ಲಿ ಬೇಸರವನ್ನು ಮೂಡಿಸಿದೆ. ಮುಂದಾದರೂ ತಂಡದಲ್ಲಿ ಆಯ್ಕೆ ಆಗುವಂತಹ ಅವಕಾಶ ಅವರಿಗೆ ಸಿಗಲಿ ಎನ್ನುವುದಾಗಿ ಎಲ್ಲರೂ ಕೂಡ ಪ್ರಾರ್ಥಿಸುತ್ತಿದ್ದಾರೆ.

Leave a Comment

error: Content is protected !!