Siraj: ಬಡವರ ಮನೆಯಲ್ಲಿ ಹುಟ್ಟಿದ್ದ ಸಿರಾಜ್ ಬಳಿ ಈಗ ಇರುವಂತಹ ಆಸ್ತಿ ಎಷ್ಟು ಕೋಟಿ ಮೌಲ್ಯದು ಗೊತ್ತೇ?

Siraj ಮೊಹಮ್ಮದ್ ಸಿರಾಜ್(MD Siraj) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐಪಿಎಲ್ ನಲ್ಲಿ ಮೊದಲ ಬಾರಿಗೆ ಸನ್ ರೈಸರ್ಸ್(SRH) ಹೈದರಾಬಾದ್ ತಂಡದ ಪರವಾಗಿ ಆಟವಾಡಿ ಅಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಆಕ್ಷನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ತೆಕ್ಕೆಗೆ ಸೇರುತ್ತಾರೆ.

ಆರಂಭಿಕ ಸೀಜನ್ ಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೂ ಕೂಡ ಗುರಿಯಾಗಿದ್ದ ಸಿರಾಜ್ ಮತ್ತೆ ದೊಡ್ಡ ಮಟ್ಟದಲ್ಲಿ ಯಶಸ್ವಿ ಕಂಬ್ಯಾಕ್ ಮಾಡಿ ಸದ್ಯಕ್ಕೆ ತಂಡದ ಅತ್ಯಂತ ಬಲಿಷ್ಠ ಬೌಲರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ತಂಡದ ಅತ್ಯಂತ ನಂಬಿಗಸ್ತ ಬೌಲರ್ ಸಿರಾಜ್(Siraj) ಮಾತ್ರ ಆಗಿದ್ದಾರೆ.

ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿರುವಂತಹ ಸಿರಾಜ್(Siraj) ಐಪಿಎಲ್ ಮೂಲಕವೇ ಭಾರತೀಯ ಕ್ರಿಕೆಟ್ ತಂಡಕ್ಕೆ ಕೂಡ ಆಯ್ಕೆಯಾಗಿ ಕಳೆದ ಕೆಲವು ವರ್ಷಗಳಿಂದ ಮಾತ್ರ ದೊಡ್ಡ ಮಟ್ಟದಲ್ಲಿ ಹಣವನ್ನು ನೋಡುತ್ತಿದ್ದಾರೆ. ಹಾಗಿದ್ದರೆ ಕಳೆದ ಕೆಲವು ವರ್ಷಗಳಿಂದ ಸಿರಾಜ್ ಒಟ್ಟಾರೆ ದುಡಿದಿರುವಂತಹ ಹಣ ಹಾಗೂ ಅವರ ಬಳಿ ಇರುವಂತಹ ಒಟ್ಟು ಆಸ್ತಿ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಭಾರತೀಯ ಕ್ರಿಕೆಟ್ ತಂಡದಿಂದ ಹಾಗೂ ಆರ್‌ಸಿಬಿ ತಂಡದಿಂದ ಸಿಗುವಂತಹ ಸಂಬಳ ಹಾಗೂ ಕೆಲವೊಂದು ಬ್ರಾಂಡ್ ಡೀಲ್ಸ್ ಗಳ ಹಣ ಸೇರಿದಂತೆ ಒಟ್ಟಾರೆ 48ರಿಂದ 50 ಕೋಟಿ ಆಸ್ತಿ ಸಿರಾಜ್ ಅವರ ಬಳಿ ಇದೆ ಎಂಬುದಾಗಿ ತಿಳಿದುಬಂದಿದೆ. ಬಡ ಕುಟುಂಬದಿಂದ ಬಂದಿರುವಂತಹ ಸಿರಾಜ್(Siraj) ಇನ್ನೂ ಭಾರತೀಯ ಕ್ರಿಕೆಟ್ ತಂಡದ ಯುವ ವೇಗಿಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸನ್ನು ಪಡೆಯಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!